ಓಶೋ

Author : ರಾಜಶೇಖರ ಮಠಪತಿ (ರಾಗಂ)

Pages 114

₹ 120.00




Year of Publication: 2021
Published by: ಪುಸ್ತಕ ಮಂಟಪ- ಸ್ಟೂಡೆಂಟ್ಸ್ ಕಾರ್ನರ್
Address: ನಂ.151, 3ನೇ ಮುಖ್ಯರಸ್ತೆ, 8ನೇ ಕ್ರಾಸ್, ಚಾಮರಾಜಪೇಟೆ, ಬೆಂಗಳೂರು- 560 018
Phone: 9900555020

Synopsys

ಲೇಖಕ ರಾಜಶೇಕರ ಮಠಪತಿ ಅವರು ಓಶೋ ಅವರ ಬಗೆಗೆ ಬರೆದ ಲೇಖನಗಳ ಸಂಗ್ರಹ ‘ಓಶೋ’. ಲೇಖಕರೇ ಹೇಳಿರುವಂತೆ, ‘ಓಶೋ ಸಾಹಿತ್ಯ ಓದುತ್ತಾ ಹೋದಂತೆ ನನ್ನ ತಿಳಿವಳಿಕೆಗೆ ಬಂದ ಒಂದು ಅನುಭವ ಅವರ ‘ಬದುಕು' ಕುರಿತಾಗಿ ಯಾವುದೇ ಮಾಹಿತಿ ಲಭ್ಯವಿಲ್ಲದೇ ಇರುವುದು. ಅವರ ಸಾಹಿತ್ಯ, ವಿಚಾರಧಾರೆ ಹಾಗೂ ಉಪನ್ಯಾಸಗಳ, ಸಾಕಷ್ಟು ವಿಫುಲವಾದ ಸಂಗ್ರಹವಿದ್ದರೂ ಅವರ ಜೀವನ ವೃತ್ತಾಂತ ತಿಳಿಯದೇ ಹೋಗಿತ್ತು. ಒಂದು ಕಡೆ ಅವರ ಬರಹ ಮತ್ತೊಂದೆಡೆ ಅವರ ಬದುಕ ವಿವರ, ಈಗ ಅವೆರಡನ್ನೂ ಸಂಕ್ಷಿಪ್ತ ರೂಪದಲ್ಲಿ ಬೆಳೆಯುವ ಕಾರ್ಯ ಈ ಕೃತಿಯಲ್ಲಿ ನಾನು ಮಾಡಿದ್ದೇನೆ ಎಂಬ ನೆಮ್ಮದಿ ನನಗೆ ಈ ಕೃತಿ ನೀಡಿದೆ. ಓಶೋ ಕುರಿತಾದ ಒಂದು ಪಯಣ ನಿಮ್ಮಿಂದ ಈ ಕೃತಿ ಸಾಧ್ಯ ಮಾಡಿಸುವುದಾದರೆ ಅದು ನನ್ನ ಈ ಬರಹದ ಮಹಾನ್ ಸಾಧನೆ’ ಎಂಬುದಾಗಿ ಹೇಳಿದ್ದಾರೆ. ಜ.ಹೋ.ನಾರಾಯಣಸ್ವಾಮಿ, ಕಮಲಾ ಹೆಮ್ಮಿಗೆ, ಮೋಹನ ಕಳಸದ, ಅವರು ಓಶೋ ಕುರಿತ ತಮ್ಮ ಅಭಿಪ್ರಾಯವನ್ನು ಬೆನ್ನುಡಿಯ ಮಾತುಗಳಲ್ಲಿ ಹಂಚಿಕೊಂಡಿದ್ದಾರೆ. 2010ರಲ್ಲಿ ಮೊದಲ ಮುದ್ರಣ ಕಂಡ ಈ ಕೃತಿ 2021ರಲ್ಲಿ ಎರಡನೆ ಮುದ್ರಣ ಕಂಡಿದೆ.

About the Author

ರಾಜಶೇಖರ ಮಠಪತಿ (ರಾಗಂ)

ಸಾಹಿತಿ, ಚಿಂತಕ, ಕನ್ನಡ ಸಾಹಿತ್ಯ ಆಕಾಡೆಮಿ ಸದಸ್ಯರಾದ  ರಾಜಶೇಖರ ಮಠಪತಿ (ರಾಗಂ) ಅವರು ಹುಟ್ಟಿದ್ದು ಬೆಳಗಾಂವ ಜಿಲ್ಲೆಯ ತೆಲಸಂಗದಲ್ಲಿ. ಕರ್ನಾಟಕದ ಗಡಿಯ ಊರಾದ ಚಡಚಣದಲ್ಲಿ ಪ್ರಾಥಮಿಕದಿಂದ ಪದವಿಪೂರ್ವದ ಶಿಕ್ಷಣ, ನಂತರ ಬಿಜಾಪೂರ ಮತ್ತು ಸೊಲ್ಲಾಪುಗಳಲ್ಲಿ ಪದವಿ ಹಾಗೂ ಸ್ನಾತಕೋತ್ತರ ಶಿಕ್ಷಣ, ಕ.ವಿ.ವಿ ಧಾರವಾಡದಿಂದ ಆಂಗ್ಲ ಸಾಹಿತಿ, ಸಿನಿಮಾ ನಿರ್ದೇಶಕ,ಪತ್ರಕರ್ತ, ಕೆ.ಎ.ಅಬ್ಬಾಸರನ್ನು ಕುರಿತು ಪಿ.ಹೆಚ್.ಡಿ - ಹೀಗೆ ಶೈಕ್ಷಣಿಕ ಬದುಕಿನ ಹಲವು ಹಂತಗಳನ್ನು ಗಳಿಸಿದ್ದಾರೆ. ಇದುವರೆಗೆ ಅವರು ಕನ್ನಡ, ಇಂಗ್ಲಿಷ್ ಎರಡೂ ಭಾಷೆಗಳಲ್ಲಿ ಬರೆದ ಕೃತಿಗಳ ಸಂಖ್ಯೆ ಅರವತ್ತು ಅಂಕಿಯನ್ನು ದಾಟುತ್ತದೆ. ಕಾವ್ಯ, ಕತೆ, ನಾಟಕ, ಪ್ರಬಂಧ, ಅಂಕಣ, ಸಂಶೋಧನೆ, ...

READ MORE

Related Books