ಪಾವೆಂ ಕಸ್ತೂರಿ

Author : ಜಿ.ಎಸ್. ಭಟ್

Pages 92




Year of Publication: 1977
Published by: ಪಾ.ವೆಂ. ಆಚಾರ್ಯ ಸನ್ಮಾನ ಸಮಿತಿ
Address: ಅತ್ರಿ, 8ನೇ ಅಡ್ಡರಸ್ತೆ, ಸರಸ್ವತಿ ಪುರಂ, ಮೈಸೂರು-570009

Synopsys

ಪಾಡಿಗಾರು ವೆಂಕಟರಮಣ ಆಚಾರ್ಯ ಅವರನ್ನು ಸನ್ಮಾನಿಸುವ ಸಂದರ್ಭದಲ್ಲಿ ಸನ್ಮಾನ ಸಂಚಿಕೆ ಪ್ರಕಟಿಸುವ ಯೋಜನೆಯ ಭಾಗವಾಗಿ ಪಾವೆಂ. ಕಸ್ತೂರಿ ಕೃತಿ ಪ್ರಕಾಶಿಸಲಾಗಿದೆ. ಈ ಕೃತಿಯಲ್ಲಿ ಹಿರಿಯ ಸಾಹಿತಿ ಚಿಂತಕರಾದ ಶಂ.ಬಾ. ಜೋಶಿ, ಗೀತಾ ಕುಲಕರ್ಣಿ, ಯು.ಆರ್. ಅನಂತಮೂರ್ತಿ, ಹಾಮಾನಾಯಕ, ಕು.ಶಿ. ಹರಿದಾಸಭಟ್ಟ, ಎಸ್.ಎಲ್.ಭೈರಪ್ಪ, ಜಿ.ಟಿ. ನಾರಾಯಣನ್, ಸಿದ್ಧಲಿಂಗ ಪಟ್ಟಣಶೆಟ್ಟಿ, ಎನ್. ಪ್ರಹ್ಲಾದರಾವ್, ನಾ. ಮೊಗಸಾಲೆ ಸೇರಿದಂತೆ ವಿದ್ವಾಂಸರು ಪಾ.ವೆ. ಆಚಾರ್ಯರ ಬದುಕು-ಬರೆಹ ಹಾಗೂ ಆತ್ಮೀಯ ಒಡನಾಟ ಕುರಿತು ಬರೆದ ಲೇಖನಗಳನ್ನುಇಲ್ಲಿ ಸಂಗ್ರಹಿಸಿ, ಪ್ರಕಟಿಸಿ, ಅವರನ್ನು ಅಭಿನಂದಿಸಲಾಗಿದೆ. 

About the Author

ಜಿ.ಎಸ್. ಭಟ್

ಹಿರಿಯ ಲೇಖಕ ಜಿ.ಎಸ್ ಭಟ್ (ಸಾಗರ) 1944ರಲ್ಲಿ ಹೊನ್ನಾವರದ ಗಜನಿ ಮಠದಲ್ಲಿ ಜನಿಸಿದರು. ಸಾಗರದ ಲಾಲ ಬಹುದ್ದೂರ್ ಶಾಸ್ತ್ರೀ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿ ನಿವೃತ್ತರಾಗಿರುವ ಜಿ.ಎಸ್ ಭಟ್ ಅವರು ಯಕ್ಷಗಾನ ಕ್ಷೇತ್ರದಲ್ಲಿ ವಿಶೇಷ ಆಸಕ್ತಿ ಮತ್ತು ಪರಿಣತಿ ಹೊಂದಿರುವರು. ಇವರು ಯಕ್ಷಗಾನ ಕುರಿತ ಸಂಶೋಧನಾ ಲೇಖನಗಳು, ಕತೆ, ಕವಿತೆ, ಅಂಕಣಗಳಲ್ಲಿ ತಮ್ಮ ಸಾಹಿತ್ಯ ಕೃಷಿಯನ್ನು ಮಾಡಿದ್ದಾರೆ. ರಂಗಭೂಮಿ, ಯಕ್ಷಗಾನ ವಿದ್ವಾಂಸರಾಗಿರುವ ಅವರು ಸಾಂಸ್ಕೃತಿಕ, ಸಂಘಟಕರಾಗಿಯೂ ಕಾರ್ಯನಿರ್ವಹಿಸಿದ್ದಾರೆ.  ಕೃತಿಗಳು: ಕುಮಾರವ್ಯಾಸನ ಕರ್ಣಾಟಭಾರತ ಕಥಾ ಮಂಜರಿ ಪ್ರವೇಶ, ರಾಘವಾಂಕನ ಹರಿಶ್ಚಂದ್ರಕಾವ್ಯ ಪ್ರವೇಶ, ಅಕ್ಕಮ್ಮಜ್ಜಿಯ ಗಂಡನೂ ವಾಣಾಸಜ್ಜನ ಹೆಣ್ತಿಯೂ, ಕೆರೆಮನೆ ಶಂಭು ಹೆಗಡೆ ಅಧ್ಯಯನ, ಪಾವೆಂ ಕಸ್ತೂರಿ, ಮಂಜೀ ಮಹಾದೇವನ ಗಂಜೀ ಪುರಾಣ, ನೆನಪಿನ ರಂಗಸ್ಥಳ,    ...

READ MORE

Related Books