ಪಚನ ವ್ಯವಸ್ಥೆಯ ವ್ಯಾಧಿಗಳು

Author : ಸಿ.ಜಿ. ಕೇಶವಮೂರ್ತಿ

Pages 108

₹ 70.00




Year of Publication: 2016
Published by: ಸಪ್ನ ಬುಕ್ ಹೌಸ್
Address: # 11, 3ನೇ ಮುಖ್ಯ ರಸ್ತೆ, ಗಾಂಧಿನಗರ, ಬೆಂಗಳೂರು-560 001.
Phone: 08040114455

Synopsys

ಪಚನ ವ್ಯವಸ್ಥೆಯ ವ್ಯಾಧಿಗಳು- ಈ ಕೃತಿಯನ್ನು ರಚಿಸಿದವರು ಡಾ. ಸಿ.ಜಿ. ಕೇಶವಮೂರ್ತಿ. ಬಹುತೇಕ ಎಲ್ಲ ರೋಗಗಳಿಗೆ ನಮ್ಮ ದೇಹದ ಜೀರ್ಣಾಂಗ ವ್ಯವಸ್ಥೆಯೇ ಕಾರಣ.  ನಾವು ಊಟ ಮಾಡಿದ ಅನ್ನದ ಜೀರ್ಣ ಕ್ರಿಯೆಯು ಸುಲಭ ಹಾಗೂ ಸರಳವಾಗಿ ಆಗುತ್ತಿದ್ದರೆ ನಾವು ಆರೋಗ್ಯವಾಗಿದ್ದೇವೆ ಎಂದರ್ಥ. ಇಲ್ಲದಿದ್ದರೆ, ಜೀರ್ಣ ಪ್ರಕ್ರಿಯೆಯಲ್ಲಿ ತೊಂದರೆ ಇದ್ದು, ಮುಂದೆ ಅದೇ ಅಡೆ ತಡೆಯು ರೋಗದಲ್ಲಿ ಪರಿವರ್ತನೆ ಹೊಂದಿ, ಹತ್ತು ಹಲವಾರು ಅಡ್ಡಿ-ಬೇನೆಗಳನ್ನು ತಂದೊಡ್ಡುತ್ತದೆ. ಹೀಗಾಗಿ, ದೇಹದ ಹಲವಾರು ರೋಗಗಳಿಗೆ ನಮ್ಮ ಜಿರ್ಣಾಂಗ ಕ್ರಿಯೆಯು ಮೂಲ ಕಾರಣವಾಗಿರುತ್ತದೆ. ಈ ಕುರಿತು ವಿವರವಾಗಿ ಮಾಹಿತಿ ನೀಡುವ ಕೃತಿ ಇದು.

About the Author

ಸಿ.ಜಿ. ಕೇಶವಮೂರ್ತಿ
(14 April 1949)

ಮೂಲತಃ ಶಿವಮೊಗ್ಗದವರಾದ ಡಾ. ಸಿ.ಜಿ. ಕೇಶವಮೂರ್ತಿ ಅವರು ವೃತ್ತಿಯಿಂದ ವೈದ್ಯರು. ವೈದ್ಯಸಾಹಿತಿಯೂ ಹೌದು.ಮಂಗಳೂರಿನಲ್ಲಿ ಹೈಸ್ಕೂಲ್‌ ವಿದ್ಯಾಭ್ಯಾಸ ನಡೆಸಿದ ಅವರು ಮೈಸೂರು ಮೆಡಿಕಲ್‌ ಕಾಲೇಜಿನಿಂದ (1974) ಎಂಬಿಬಿಎಸ್‌ ಪದವಿ ಪಡೆದರು. ಸದ್ಯ ಶಿವಮೊಗ್ಗದಲ್ಲಿ ವಾಸವಾಗಿದ್ದಾರೆ.  ಕೃತಿಗಳು: ಭೂಮಪಾನ ಬಿಡಿ, ಇಳಿ ವಯಸ್ಸಿನವರ ಆರೋಗ್ಯದ ಸಮಸ್ಯೆಗಳಿಗೆ ಪರಿಹಾರ, ಹೃದ್ರೋಗ ಸಮಸ್ಯೆಗಳು-80 ಪ್ರಶ್ನೆಗಳು. . ...

READ MORE

Related Books