“ಪಡಸಾಲಿ” ವೆಂಕಟೇಶ ಪಿ ಮರಕಂದಿನ್ನಿ ಅವರ ಕವನಸಂಕಲನವಾಗಿದೆ. ಇಲ್ಲಿನ ಕವಿತೆಗಳು ವ್ಯಷ್ಠಿ ಮತ್ತು ಸಮಷ್ಠಿಗಳನ್ನು ಸಮನಾಗಿ ಒಳಗೊಳ್ಳುವ ಮತ್ತು ಇವೆರಡರ ನಡುವಿನ ಒಂದು ಆರೋಗ್ಯಕರವಾದ ಸಮದೂರದಲ್ಲಿ ನಿಂತು ತನ್ನ ಒಳಗನ್ನು ತನ್ನ ಸುತ್ತಣ ಹೊರಗಿನೊಂದಿಗೆ ಆತ್ಮವಿಮರ್ಶೆಗೆ ಒಡ್ಡಿಕೊಳ್ಳುವ ಎಚ್ಚರವನ್ನು ಸಾಧಿಸಿವೆ. ಹಳ್ಳಿಯ ಘಮಲನ್ನು, ಬಾಲ್ಯದ ಸೌಂದರ್ಯವನ್ನು, ವಿಜ್ಞಾನದ ಮೆಲುಕನ್ನು ಕಾವ್ಯದ ಸವಿಯಲ್ಲಿ ಹಿಡಿದು ಕಟ್ಟಿದ ಕವಿತೆಗಳು ಈ ಸಂಕಲನದಲ್ಲಿದೆ. ಲೇಖಕರು ಗ್ರಾಮದಲ್ಲಿ ತಾನು ಮತ್ತು ತನ್ನಂತೆ ಬದುಕಿದವರು ಸಂಕಟದಲ್ಲೂ - ಸಂತಸದಲ್ಲೂ ಅನುಭವಿಸುವ ಸಂಗತಿಗಳನ್ನು ಹಾಡಾಗಿಸಿದ್ದಾರೆ.
ವೆಂಕಟೇಶ ಪಿ. ಮರಕಂದಿನ್ನಿ ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಮರಕಮದಿನ್ನಿಯವರು. ಇವರ ಹೆಸರಿನ ಕೂಡ ಅಕ್ಷರ ‘ವೆಂಪಿಮ’ ಎನ್ನುವುದು ಇವರ ಕಾವ್ಯನಾ ಮ. ಜೀವ ವಿಜ್ಞಾನ ವಿಷಯಗಳಲ್ಲಿ ಬಿ.ಎಸ್ಸಿ ಪೂರ್ಣಗೊಳಿಸಿದ ಇವರು, ಬೆಂಗಳೂರು ನಗರ ವಿಶ್ವವಿದ್ಯಾಲಯದಿಂದ ಬಿ.ಇಡಿ ಪದವಿ ಪಡೆದಿದ್ದಾರೆ. ಶಾಲಾ ವಿದ್ಯಾರ್ಥಿ ದಿನಗಳಿಂದಲೂ ಕವಿತೆ ರಚನೆಯಲ್ಲಿ ತೊಡಗಿರುವ ವೆಂಪಿಮ, ಆಲ್ಬಮ್ ಗೀತ ರಚನೆ ಕ್ಷೇತ್ರದಲ್ಲಿ ಸಕ್ರಿಯವಾಗಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ ಇವರ ರಚನೆಯ ‘ಒಂಟಿಯಾನ’ ’ಚಂದ್ರಾನ ಮುಖದಾಕಿ’ ‘ಸಾಗರಿ’ ಸೇರಿದಂತೆ ಹತ್ತಾರು ಹಾಡುಗಳು ಯೂಟ್ಯೂಬ್ ಮಾಧ್ಯಮದಲ್ಲಿ ಲಕ್ಷಗಟ್ಟಲೆ ವೀಕ್ಷಣೆ ಕಂಡಿವೆ ‘ಪಡಸಾಲಿ’ ಇವರ ಚೊಚ್ಚಲ ಕೃತಿ, ಈ ...
READ MORE