ಪದ್ಯದ ಮರ

Author : ಕೃಷ್ಣಮೂರ್ತಿ ಬಿಳಿಗೆರೆ

₹ 75.00




Year of Publication: 2008
Published by: ಪ್ರಗತಿ ಗ್ರಾಫಿಕ್ಸ್
Address: ಬೆಂಗಳೂರು

Synopsys

‘ಪದ್ಯದ ಮರ’ ಕೃತಿಯು ಕೃಷ್ಣಮೂರ್ತಿ ಬಿಳಿಗೆರೆ ಅವರ ಮಕ್ಕಳ ಸಾಹಿತ್ಯ ಸಂಕಲನವಾಗಿದೆ. ಈ ಕೃತಿಯ ಬೆನ್ನುಡಿಯಲ್ಲಿನ ಕೆಲವೊಂದು ವಿಚಾರಗಳು ಹೀಗಿವೆ : ಮಕ್ಕಳ ಮನೋಭಿತ್ತಿಯ ಮೇಲೆ ಪದಚಿತ್ತಾರ ಬಿಡಿಸುವ ಛಾತಿಯ ಗಾಯಕ ಕೃಷ್ಣಮೂರ್ತಿ ಬಿಳಿಗೆರೆ, ಹಾಡುಗಾರಿಕೆಯಲ್ಲೂ ಎತ್ತಿದ ಕೈ. ಸಾವಯವ ಕೃಷಿಯಲ್ಲಿ ನಂಬಿಕೆ ಇಟ್ಟಿರುವ ಇವರು, ಸ್ಥಳೀಯ ಜ್ಞಾನಪರಂಪರೆಯನ್ನು ಪ್ರಚಾರ ಮಾಡುವ ಕೈಂಕರ್ಯದಲ್ಲಿ ನಿರತರಾಗಿದ್ದಾರೆ. ತಮ್ಮ ಸುತ್ತಲಿನ ಪರಿಸರವನ್ನು ಗಾಢವಾಗಿ ಪ್ರೀತಿಸುವ  ಇವರು, ಮಗುಮನದ ಅನನ್ಯ ಚಿಂತಕ. ಏಕತಾರಿ ಹಿಡಿದು ಹಾಡಲು ಆರಂಭಿಸಿದರೆ ತಾವೇ ರಚಿಸಿದ, ದಾಸವರೇಣ್ಯರು ರಚಿಸಿರುವ ಹಾಡುಗಳಿಗೆ ರಾಗಹಾಕಿ ರುಚಿಕಟ್ಟಾಗಿ ಆಲಿಸುವ ತಾಳ್ಮೆಯನ್ನು ಕೇಳುಗರಲ್ಲಿ ಸೃಷ್ಟಿಸುವ ಗಾನಗಾರುಡಿಗ. ಬಿಸ್ಲು ಬಾಳೆಹಣ್ಣು ಮತ್ತು ಇತರ ಪ್ರಬಂಧಗಳು, ಅನ್ನದೇವರ ಮುಂದೆ, ಮಳೆನೀರ ಕುಡಿ ಮುಂತಾದ ವೈಚಾರಿಕ, ಪರಿಸರ ಸಂಬಂಧಿ ಕೃತಿಗಳ ಮೂಲಕ ಕನ್ನಡ ಸಾರಸ್ವತಲೋಕಕ್ಕೆ ಪರಿಚಿತರು’ ಎಂದು ವಿಶ್ಲೇಷಿತವಾಗಿದೆ.

About the Author

ಕೃಷ್ಣಮೂರ್ತಿ ಬಿಳಿಗೆರೆ

ಹುಳಿಯಾರಿನ ಬಿ.ಎಂ.ಎಸ್. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಾಚಾರ್ಯರಾಗಿ ಕೆಲಸ ಮಾಡುತ್ತಿರುವ ಕೃಷ್ಣಮೂರ್ತಿ ಬಿಳಿಗೆರೆ ಅವರು ಕೃಷಿ ಚರಿತ್ರೆಯ ಅನುಶೋಧನೆಯಲ್ಲಿ ತೊಡಗಿದ್ದಾರೆ. ಸಾವಯವ ಕೃಷಿ ಮತ್ತು ಮಳೆನೀರಿನ ಚಳುವಳಿಯಲ್ಲಿ ಸಕ್ರಿಯವಾಗಿರುವ ಬಿಳಿಗೆರೆಗೆ ತತ್ವಪದ ಮತ್ತು ಕೃಷಿಗಳನ್ನು ಹಾಡುವ ರೂಢಿಯಿದೆ. ಕಣ್ಮುಚ್ಚಾಲೆ ಮಕ್ಕಳ ಗುಂಪು, ನಮ್ಮ ಪ್ರಕಾಶನ ಮತ್ತು ಸಿರಿಸಮೃದ್ಧಿ ಬಳಗ ಮುಂತಾದ ಸಂಘಟನೆಗಳಲ್ಲಿ ಅವರು ಸಕ್ರಿಯರಾಗಿದ್ದಾರೆ. ಸಾವಿರ ಕಣ್ಣಿನ ನವಿಲು, ಕಿಂಚಿತ್ತು ಪ್ರೀತಿಯ ಬದುಕು, ದಾಸಯ್ಯ ಇದು ಕನಸೇನಯ್ಯ, ಧರೆ ಮೇಲೆ ಉರಿಪಾದ ಇವು ಇವರ ಕಾವ್ಯ ಕೃತಿಗಳು. ಜೀರಿಂಬೆ ಹಾಡು, ಗುಡು ಗುಡು ಗುಡ್ಡ, ಪದ್ಯದ ...

READ MORE

Related Books