ಪಡಿಪದಾರ್ಥ

Author : ದೇವೇಂದ್ರಪ್ಪ ಜೆ. (ಜಾಜಿ ದೇವೇಂದ್ರಪ್ಪ)

Pages 104

₹ 90.00




Year of Publication: 2020
Published by: ರೂಪ ಪ್ರಕಾಶನ
Address: #26, 11ನೇ ಬ್ಲಾಕ್, ಡಾ. ರಾಜ್ ಕುಮಾರ್ ರಸ್ತೆ, ಜೆಎಸ್‌ಎಸ್ ಲೇಔಟ್ ಮೈಸೂರು - 570011

Synopsys

ಲೇಖಕ ಜಾಜಿ ದೇವೇಂದ್ರಪ್ಪ ಅವರ ಲೇಖನಗಳ ಸಂಕಲನ ‘ಪಡಿಪದಾರ್ಥ’. ಈ ಕೃತಿಗೆ ಬೆನ್ನುಡಿ ಬರೆದ ಚಂದ್ರಕಲಾ ಹೆಚ್.ಆರ್, ‘ಕನ್ನಡ ಸಾಹಿತ್ಯ ಲೋಕವು ಹೊಸ ಶೋಧದೆಡೆಗೆ ಮುಖ ಮಾಡಿರುವ ಸಂದರ್ಭದಲ್ಲಿ ಡಾ.ಜಾಜಿ ದೇವೇಂದ್ರಪ್ಪ ಅವರು ಹೊಸ ಪೀಳಿಗೆಯ ಬರಹಗಾರರಾಗಿ ಫ್ರೆಶ್ ಎನಿಸುವ ಬರಹ ಧ್ವನಿಯ ಮೂಲಕ ವಿಮರ್ಶೆ, ಕ್ಷೇತ್ರಾಧ್ಯಯನ, ಜಾನಪದೀಯ ಅಧ್ಯಯನ, ಸಾಂಸ್ಕೃತಿಕ ಅಧ್ಯಯನ, ಅನುವಾದ ಕ್ಷೇತ್ರಗಳಲ್ಲಿ ಇವರ ಜ್ಞಾನ ಶಿಸ್ತನ್ನು ಗುರುತಿಸಬಹುದಾಗಿದೆ. ಓದುಗ ವಲಯ ಶುಷ್ಠ ಓದಾಗಿಯೇ ಪರಿಭಾವಿಸಿರುವ ಹಳಗನ್ನಡವನ್ನು ಅಸ್ಥೆಯಿಂದ, ಶ್ರದ್ದೆಯಿಂದ ಅಭ್ಯಸಿಸಿ, ವಿಮರ್ಶೆಯ ನಾನಾ ನೆಲೆಗಳಲ್ಲಿನ ಇವರ ಬರಹ ಚೌಕಟ್ಟು, ಶೋಧಪ್ರಜ್ಞೆಯಿಂದ ಸಾಹಿತ್ಯವಲಯಕ್ಕೆ ಲೇಖಕರಾಗಿ ಸೇರ್ಪಡೆಗೊಂಡಿದ್ದಾರೆ. ವಿಷಯಬಾಹುಳ್ಯ, ವಿಚಾರದೀಪಿಕೆಯಂತಿರುವ ಲೇಖನಗಳ ಗುಚ್ಚ ‘ಪಡಿಪದಾರ್ಥ’ ಕೃತಿಯು ಸಾಹಿತ್ಯಾಸಕ್ತರ ಮನೋಭೂಮಿಕೆಯಲ್ಲಿ ವೈಚಾರಿಕ ಪ್ರಜ್ಞೆಗೆ, ವಿಮರ್ಶನಾ ನಿಲುವುಗಳ ವಿಸ್ತರಣೆಗೆ ಅನುವು ಮಾಡಿದೆ’ ಎಂದು ಪ್ರಶಂಸಿದ್ದಾರೆ.

About the Author

ದೇವೇಂದ್ರಪ್ಪ ಜೆ. (ಜಾಜಿ ದೇವೇಂದ್ರಪ್ಪ)
(02 November 1976)

ಜಾಜಿ ದೇವೇಂದ್ರಪ್ಪ ಎಂದೇ ಖ್ಯಾತರಾಗಿರುವ ಕವಿ, ವಿಮರ್ಶಕ ಡಾ.ದೇವೇಂದ್ರಪ್ಪ ಜೆ ಅವರು ಮೂಲತಃ ಬಳ್ಳಾರಿಯವರು. ತಂದೆ ಜಾಜಿ ಚೆನ್ನಬಸಪ್ಪ, ತಾಯಿ ನೀಲಮ್ಮ. ಸದ್ಯ ಗಂಗಾವತಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವ ಜಾಜಿ ದೇವೇಂದ್ರಪ್ಪನವರು, ಸಾಹಿತ್ಯದ ಹಲವು ವಿಭಾಗಗಳಲ್ಲಿ ಕೃಷಿ ಮಾಡಿದ್ದಾರೆ. ಗುಲ್ಪರ್ಗ ವಿಶ್ವವಿದ್ಯಾಲಯದಲ್ಲಿ ಚಿನ್ನದ ಪದಕದೊಂದಿಗೆ ಕನ್ನಡದಲ್ಲಿ ಎಂ.ಎ ಪದವಿ ಪಡೆದಿರುವ ಅವರು ಕನ್ನಡ ವಿಶ್ವವಿದ್ಯಾಲಯ ಹಂಪಿಯಲ್ಲಿ ಆಂಧ್ರ- ಕರ್ನಾಟಕ ಗಡಿಭಾಗದ ಸ್ಥಳನಾಮಗಳು ಎಂಬ ವಿಷಯದಡಿ ಪಿ.ಎಚ್.ಡಿ ಪದವಿ ಪಡೆದಿದ್ದಾರೆ. ಸಂಶೋಧನಾ ಕ್ಷೇತ್ರದಲ್ಲಿ ಮಹತ್ವದ ಸಾಧನೆ ಮಾಡಿರುವ ದೇವೇಂದ್ರಪ್ಪನವರು ಹಳಗನ್ನಡ, ಮಧ್ಯಕಾಲೀನ ಕನ್ನಡ, ...

READ MORE

Related Books