ಪಡುವಣ ನಾಡಿನ ಪ್ರೇಮವೀರ ಮತ್ತಿತರ ನಾಟಕಗಳು

Author : ಬಸವರಾಜ ನಾಯ್ಕರ

Pages 214

₹ 125.00




Year of Publication: 2008
Published by: ಗೀತಾಂಜಲಿ ಪ್ರಕಾಶನ
Address: # 134, 8ನೇ ಅಡ್ಡರಸ್ತೆ, ಗೋವಿಂದನಗರ, ಬೆಂಗಳೂರು
Phone: 9740066842

Synopsys

ಐರಿಷ್ ನಾಟಕಕಾರ-ಚಿಂತಕ ಜೆ.ಎಂ. ಸಿಂಗೆ ಅವರು ಬರೆದ ಪ್ರಸಿದ್ಧ ಐದು ನಾಟಕಗಳ ಕನ್ನಡಾನುವಾದವೇ -ಪಡುವಣ ನಾಡಿನ ಪ್ರೇಮವೀರ ಮತ್ತಿತರ ನಾಟಕಗಳು. ಡಾ. ಬಸವರಾಜ ನಾಯ್ಕರ ಅವರು ಉತ್ತರ ಕರ್ನಾಟಕದ ಜವಾರಿ ಭಾಷೆಯಲ್ಲಿ ಅನುವಾದಿಸಿದ್ದಾರೆ. ‘ಜೋಗಿಬಾವಿ’ ಈ ನಾಟಕವು  ‘ದಿ ವೆಲ್ ಆಫ್ ದಿ ಸೇಂಟ್ಸ್’ ನಾಟಕದ ಅನುವಾದ. ಈ ನಾಟಕವು ದೂರದರ್ಶನ-1 ರಲ್ಲಿ (ಡಿಡಿ-1) ಪ್ರಸಾರಗೊಂಡು ಪ್ರೇಕ್ಷಕರ ಮೆಚ್ಚುಗೆ ಪಡೆದಿತ್ತು ಮಾತ್ರವಲ್ಲ, ಅನುವಾದ ಸಾಹಿತ್ಯದ ವಿದ್ಯಾರ್ಥಿ ಆಸಕ್ತರಿಗೆ ಅನುವಾದ ಸಾಹಿತ್ಯ ಸಿದ್ಧಾಂತ ಹಾಗೂ ಪ್ರಯೋಗಗಳ ಕುರಿತಂತೆ ಉತ್ತಮ ಆಕರ ಗ್ರಂಥವಾಗಿಯೂ ಅಧ್ಯಯನ ಯೋಗ್ಯವಾಗಿದೆ. 

 

About the Author

ಬಸವರಾಜ ನಾಯ್ಕರ
(01 August 1949)

ಡಾ. ಬಸವರಾಜ ನಾಯ್ಕರ್ ಅವರು ಮೂಲತಃ ಗದಗ (ಜನನ: 01-08-1949) ಜಿಲ್ಲೆಯ ನರಗುಂದದವರು. ತಂದೆ ಶಿವಶಂಕರಪ್ಪ ನಾಯ್ಕರ, ಧಾರವಾಡದಲ್ಲಿ ಪ್ರಾಥಮಿಕ ಶಿಕ್ಷಣ, ನರಗುಂದದಲ್ಲಿ ಪ್ರೌಢಶಿಕ್ಷಣ ಮತ್ತೇ ಧಾರವಾಡದಲ್ಲಿ ಪಿಯುಸಿಯಿಂದ ಕರ್ನಾಟಕ ವಿ.ವಿಯಲ್ಲಿ ಸ್ನಾತಕೋತ್ತರ ಪದವಿ (ಎಂ.ಎ-ಇಂಗ್ಲಿಷ್)  ಹಾಗೂ ಕ್ಯಾಲಿಫೋರ್ನಿಯಾದಿಂದ ಡಿ.ಲಿಟ್ ಪದವೀಧರರು.  ಗುಲಬರ್ಗಾ ವಿ.ವಿಯಲ್ಲಿ ಸಂಶೋಧನಾ ಸಹಾಯಕರಾಗಿ ವೃತ್ತಿ ಜೀವನ ಆರಂಭಿಸಿ ಅಲ್ಲಿಯೇ ಉಪನ್ಯಾಸಕರಾಗಿ ರೀಡರ್‍ ಆಗಿ ನಂತರ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ರೀಡರ್, ಪ್ರೊಫೆಸರ್, ಪ್ರೊಫೆಸರ್ ಎಮಿರಿಟಿಸ್ ಆಗಿ (2011-12) ನಿವೃತ್ತಿಯಾದರು.  ಅನುವಾದಿತ ಕೃತಿಗಳು:   ಪಡುವಣ ನಾಡಿನ ಪ್ರೇಮವೀರ- 1975, ಜೋಗೀಭಾವಿ-1976, ಕೊಳ್ಳದ ನೆರಳು-1978, ಹುಚ್ಚುಹೊಳೆ-1980, ನಿಗೂಢ ಸೌಧ (11 ಫ್ರೆಂಚ್ ಕಥೆಗಳ ಅನುವಾದ)-1982, ಗೋವರ್ಧನರಾಮ-1984, ಭಾರತೀಯ ಇಂಗ್ಲೀಷ್ ಸಾಹಿತ್ಯ ಚರಿತ್ರೆ-2006, ಕೆಂಪು ...

READ MORE

Related Books