ಪಾಕಿಸ್ತಾನದಲ್ಲಿ ಭಾರತೀಯ ಗೂಢಚಾರ

Author : ಡಿ.ಎನ್‌. ಶ್ರೀನಾಥ್‌

₹ 30.00




Year of Publication: 1990
Published by: ಪರಿಮಳ ಪ್ರಕಾಶನ
Address: ಬೆಂಗಳೂರು - 560 001

Synopsys

ಹಿಂದಿಯಲ್ಲಿ ಮೋಹನ್ ಲಾಲ್ ಭಾಸ್ಕರ್ ಅವರು ಬರೆದ ಕೃತಿಯನ್ನು ಡಿ.ಎನ್‌. ಶ್ರೀನಾಥ್‌ ಅವರು ಕನ್ನಡಕ್ಕೆ ಪಾಕಿಸ್ತಾನದಲ್ಲಿ ಭಾರತೀಯ ಗೂಢಚಾರ ಎಂಬ ಹೆಸರಿನಲ್ಲಿ ಅನುವಾದಿಸಿದ್ದಾರೆ. ಗೂಢಚಾರಿಕೆ ಎನ್ನುವುದು ಸಿನಿಮಾ ಕಥೆಯಂತಲ್ಲ, ಸುಲಭವೂ ಅಲ್ಲ, ಇಲ್ಲಿ ಯಾವ ಹಿರೋಯಿಸಂಗೂ ಬೆಲೆ ಇಲ್ಲ, ಸ್ವಲ್ಪ ಎಚ್ಚರ ತಪ್ಪಿದರೆ ಬದುಕಿಲ್ಲ ಸಾವೇ, ಯಾವ ದೇಶದ ಯಾವ ನಾಯಕರೂ, ಅಧಿಕಾರಿಗಳೂ, ಸೈನ್ಯವೂ ಸಹಾಯಕ್ಕೆ ಬರಲಾರದು, ಆದ ಯಾವ ಸಹಾಯವನ್ನೂ ನೆನಪಿಸಿಕೊಳ್ಳಲಾರರು, ಕೇವಲ ಅಪರಿಚಿತರು, ಸೆರೆ ಸಿಕ್ಕ ಮೇಲೆ ಅಲ್ಲಿನ ಹಿಂಸೆಯಿಂದ ಹುಚ್ಚರಾಗಿ, ಬಹುತೇಕರು ಸಾವನ್ನು ಆಯ್ಕೆ ಮಾಡಿಕೊಂಡವರೇ ಹೆಚ್ಚು ಎಂದು ಸತ್ಯವನ್ನು ಹೇಳಿದ ಪುಸ್ತಕವಿದು, ಆದರೂ ಎಲ್ಲಾ ಸಂಕಷ್ಟಗಳಿಗೆ ಎದೆಯೊಡ್ಡಿ ದೇಶವೇ ಪ್ರಮುಖವೆಂದು ಸಾರಿದ ಪುಸ್ತಕವೂ ಹೌದು. ಮೋಹನ್ ಲಾಲ್ ಭಾಸ್ಕರ್‍ ಎಂಬ ಎಂಬ1970ರ ದಶಕದ raw agent ಪಾಕಿಸ್ತಾನದ ಅಣು ಯೋಜನೆಗಳ ಮಾಹಿತಿಗಾಗಿ ಕಾರ್ಯ ನಿರ್ವಹಿಸುವಾಗ ತಮ್ಮವರಿಂದಾಗಿ ಸಿಕ್ಕಿ ಬಿದ್ದು ಪಾಕಿಸ್ತಾನದ ಜೈಲುಗಳಲ್ಲಿ ನರಕ ಯಾತನೆ ಅನುಭವಿಸಿ ಆಶ್ಚರ್ಯವಾಗಿ ಬದುಕಿ ಬಿಡುಗಡೆಯಾಗಿ ಬಂದ ಕಥೆ ಇದು. ದೇಶ ವಿಭಜನೆಯಾಗಿ ಕೆಲವು ವರ್ಷಗಳಾಗಿತ್ತು.. ಎರಡು ದೇಶದ ನಡುವೆ ದ್ವೇಷದ ವಾತಾವರಣವಿತ್ತು . ಇಂತಹಃ ಸಮಯದಲ್ಲಿ ಬೇಹುಗಾರನಾಗಿ ಪಾಕಿಸ್ತಾನಕ್ಕೆ ಕಾಲಿಟ್ಟು ನಂತರ ಜೈಲಿನ ಚಿತ್ರಣಗಳನ್ನು ಲೇಖಕರು ಅನುಭವದಿಂದ ಚಿತ್ರಿಸಿದ್ದಾರೆ.. ಅನುಭವಿಸಿದ ಚಿತ್ರಹಿಂಸೆಗಳು, ಜೈಲಿನ ರಾಕ್ಷಸ ಸ್ವರೂಪದ ಅಧಿಕಾರಿಗಳು,ಅಲ್ಲಿ‌ನ ರಾಜಕೀಯ ವ್ಯವಸ್ಥೆಗಳು.. ಅವ್ಯವಸ್ಥೆಗಳು.. ಆ ವ್ಯವಸ್ಥೆಯಲ್ಲೂ ಕೆಲವರು ಮನುಷ್ಯ ಸ್ವರೂಪಿ ಅಧಿಕಾರಿಗಳು.. ಹೀಗೆ ಅದನ್ನು ಅನುಭವಿಸಿ ವರ್ಣಿಸಿದ ರೀತಿಗೆ ಲೇಖಕರು ವಂದನೀಯರು.

About the Author

ಡಿ.ಎನ್‌. ಶ್ರೀನಾಥ್‌
(03 December 1950)

ಅನುವಾದಕ ಶ್ರೀನಾಥ್‌ ಅವರು ಹುಟ್ಟಿದ್ದು 1950 ಡಿಸೆಂಬರ್‌ 3ರಂದು. ಮೂಲತಃ ಶಿವಮೊಗ್ಗದವರು. ತಂದೆ ಡಿ.ನಾರಾಯಣ ರಾವ್‌, ತಾಯಿ ಗುಂಡಮ್ಮ. ಹುಟ್ಟೂರಿನಲ್ಲಿಯೇ ಪ್ರಾಥಮಿಕ ಶಿಕ್ಷಣ ಪಡೆದು, ಧಾರವಾಡದ ಮುಕ್ತ ವಿಶ್ವವಿದ್ಯಾಲಯ ಹಾಗೂ ಮೈಸೂರು ವಿಶ್ವವಿದ್ಯಾಲಯದಿಂದ ಕನ್ನಡ ಮತ್ತು ಹಿಂದಿ ಭಾಷೆಯಲ್ಲಿ ಸ್ನಾತಕೋತ್ತರ ಪದವಿ ಪಡೆದರು.  ಶಿವಮೊಗ್ಗದ ರಾಷ್ಟ್ರೀಯ ಶಿಕ್ಷಣ ಸಮಿತಿ ಪ್ರೌಢಶಾಲೆಯಲ್ಲಿ ಸಹ ಶಿಕ್ಷಕರಾಗಿ ನಂತರ ಶಾರದಾದೇವಿ ಬಾಲಿಕಾ ಪ್ರೌಢಶಾಲೆಯಲ್ಲಿ ಮುಖ್ಯಶಿಕ್ಷಕರಾಗಿ ನಿವೃತ್ತರಾದರು. ಸಾಹಿತ್ಯದೆಡೆಗಿನ ಒಲವು ಅನುವಾದದತ್ತ ಲೇಖಕರನ್ನು ಸೆಳೆಯಿತು. 18ನೇ ವಯಸ್ಸಿನಲ್ಲಿಯೇ "ಶಿಶಿರ"  ಕೃತಿಯನ್ನು ಅನುವಾದ ಮಾಡಿದರು. ಹಿಂದಿ ಮಾತ್ರವಲ್ಲದೇ ಬಂಗಾಳಿ ಭಾಷೆ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.  ಇವರ ಪ್ರಮುಖ ಅನುವಾದಿತ ಕೃತಿಗಳೆಂದರೆ; ಸೂತ್ರದ ...

READ MORE

Related Books