ಪಂಪ ಭಾರತ ದೀಪಿಕೆ

Author : ಡಿ.ಎಲ್. ನರಸಿಂಹಾಚಾರ್‌

Pages 558

₹ 250.00




Year of Publication: 2012
Published by: ಡಿ.ವಿ.ಕೆ. ಮೂರ್ತಿ
Address: ಮೈಸೂರು-4

Synopsys

ವಿಕ್ರಮಾರ್ಜುನ ವಿಜಯ’ ಎಂದು ಕರೆಯಲಾಗುವ ಆದಿಕವಿ ಪಂಪನ ಮಹಾಭಾರತದ ವ್ಯಾಖ್ಯಾನವನ್ನು ಹಿರಿಯ ವಿದ್ವಾಂಸ ಡಿ.ಎಲ್‌. ನರಸಿಂಹಾಚಾರ್‌ ಅವರು ಮಾಡಿದ್ದಾರೆ. ಪ್ರಸ್ತಾವನೆಯಲ್ಲಿ ಡಿ.ಎಲ್‌.ಎನ್‌ ಹೀಗೆ ಬರೆದಿದ್ದಾರೆ-

ಪಂಪ ಭಾರತ ಕಾವ್ಯವನ್ನು ಅಭ್ಯಾಸ ಮಾಡುವ ಪ್ರೌಢ ವಿದ್ಯಾರ್ಥಿಗಳಿಗೂ ಇತರರಿಗೂ ಈ ಟೀಕೆಯಿಂದ ಸಾಕಷ್ಟು ಸಹಾಯವಾಗುವುದೆಂದು ನಾನು ನಂಬಿದ್ದೇನೆ. ಸಾಕಷ್ಟು ವಿಸ್ತಾರವಾಗಿ ಪ್ರತಿಪದಾರ್ಥ ಸಹಿತವಾಗಿ ಈ ಟೀಕೆ ರಚಿತವಾಗಿದೆ. ವ್ಯಾಕರಣ, ಛಂದಸ್ಸು, ಪೂರ್ವಕಥಾವೃತ್ತಾಂತ, ಶಬ್ದಾರ್ಥ ನಿರ್ಣಯ, ಆಕರ ಗ್ರಂಥಗಳು-ಮುಂತಾದ ಅನೇಕ ವಿಷಯಗಳು ಈ ಟೀಕೆಯಲ್ಲಿ ನಿರೂಪಿತ ವಾಗಿವೆ. ಹಲವೆಡೆಗಳಲ್ಲಿ ಭಿನ್ನಾಭಿಪ್ರಾಯಗಳಿಗೆ ಅವಕಾಶವಿದೆ; ನನ್ನದೇ ಸರಿಯೆಂಬ ಹಠವೇನೂ ಇಲ್ಲ. ಜಿಜ್ಞಾಸುವಿನ ದೃಷ್ಟಿಯಿಂದ ಕೆಲವಂಶಗಳನ್ನು ಚರ್ಚಿಸಿದೆ. ನನಗೆ ಸಂದೇಹವೆಂದು ತೋರಿ ದೆಡೆಗಳಲ್ಲಿ ಪ್ರಶ್ನೆ ಚಿಹ್ನೆಯನ್ನು ಧಾರಾಳವಾಗಿ ಬಳಸಿದ್ದೇನೆ. ತಿಳಿಯದ ಅಂಶಗಳಿಗೂ ಇದೇ ಚಪ್ಪ ಯನ್ನು ಅಲ್ಲಲ್ಲಿ ಹಾಕಿದೆ. ಈ ಪ್ರಶ್ನೆ ಚಿಹ್ನೆಗಳನ್ನು ತೆಗೆದುಹಾಕುವ ಕೆಲಸ ಮುಂದಿನ ವಿದ್ವಾಂಸರಿಗೆ ಸೇರಿದುದಾಗಿದೆ; ಈ ಕ್ಷೇತ್ರದಲ್ಲಿ ಸಂಶೋಧನೆ ಮುಂದುವರಿದು ಹೊಸ ಆಧಾರಗಳು ತಲೆದೋರು ವುದರಿಂದ ಸಮಸ್ಯೆಗಳ ಪರಿಹಾರ ಸಾಧ್ಯವಾಗಬಹುದು. ಇವನ್ನೆಲ್ಲ ಸಹಾನುಭೂತಿಯಿಂದ ನೋಡಬೇಕು ಎಂಬುದು ಅವರ ಕಳಕಳಿ.

About the Author

ಡಿ.ಎಲ್. ನರಸಿಂಹಾಚಾರ್‌
(27 October 1906 - 01 May 1971)

ಪಂಡಿತ- ಸಂಶೋಧಕ ಶ್ರೇಷ್ಠ ದೊಡ್ಡಬೆಲೆ ಲಕ್ಷ್ಮೀನರಸಿಂಹಾಚಾರ್ಯ ಅವರನ್ನು ಕನ್ನಡ ಸಾಹಿತ್ಯ- ಸಂಶೋಧನೆಗೆ ಸಂಬಂಧಿಸಿದಂತೆ ಚಲಿಸುವ ವಿಶ್ವಕೋಶ ಎಂದು ಗುರುತಿಸಲಾಗುತ್ತಿತ್ತು. ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿಯಲ್ಲಿ 1906ರ ಅಕ್ಟೋಬರ್ 27ರಂದು ಜನಿಸಿದರು. ತಂದೆ ಶ್ಯಾಮಯ್ಯಂಗಾರ್, ತಾಯಿ ಲಕ್ಷ್ಮಮ್ಮ. ಬಾಲ್ಯದ ವಿದ್ಯಾಭ್ಯಾಸವನ್ನು ಪಾವಗಡ, ಸಿರಾ ತುಮಕೂರುಗಳಲ್ಲಿ ಮುಗಿಸಿ 1924ರಲ್ಲಿ ಬೆಂಗಳೂರು ಸೆಂಟ್ರಲ್ ಕಾಲೇಜಿನಲ್ಲಿ ಓದಿ ಬಿ.ಎ. ಪದವಿ ಪಡೆದರು. ಎಂ.ಎ. ಪದವಿ (1929) ಯನ್ನು ಮೈಸೂರು ವಿಶ್ವವಿದ್ಯಾಲಯದಿಂದ ಪಡೆದರು. ಮೈಸೂರು ಓರಿಯಂಟಲ್ ರಿಸರ್ಚ್ ಇನ್ಸ್ಟಿಟ್ಯೂಟ್‍ನಲ್ಲಿ ರೆಸಿಡೆಂಟ್ ಕನ್ನಡ ಪಂಡಿತ (1930) ಆಗಿ ನೇಮಕವಾದರು. ಕನ್ನಡ ಅಧ್ಯಾಪಕ (1939), ಪ್ರಾಧ್ಯಾಪಕ (1956) ಆಗಿ ...

READ MORE

Related Books