ಪಂಪಪೂರ್ವದ ಕನ್ನಡ ಕವಿಗಳು

Author : ಮಾಧವ ಪೆರಾಜೆ

Pages 238

₹ 200.00




Year of Publication: 2017
Published by: ಪ್ರಸಾರಂಗ
Address: ಕನ್ನಡ ಯೂನಿವರ್ಸಿಟಿ, ಹಂಪಿ, ವಿದ್ಯಾರಣ್ಯ. 583 276

Synopsys

ಅನುಭವಿ ವಿದ್ವಾಂಸರಾದ ಮಾಧವ ಪೆರಾಜೆಯವರ ’ಪಂಪಪೂರ್ವದ ಕನ್ನಡ ಕವಿಗಳು’ ಕೃತಿಯನ್ನು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕನ್ನಡವನ್ನು ಪರೀಕ್ಷಾ ವಿಷಯವಾಗಿ ಪರಿಗಣಿಸಿರುವ ವಿದ್ಯಾರ್ಥಿಗಳಿಗಾಗಿ ಪ್ರಕಟಿಸಿದ್ದಾರೆ. 

ಆದ್ದರಿಂದ ಇಲ್ಲಿ ವಿಮರ್ಶಾ ಪರಿಭಾಷೆಯಾಗಲಿ, ಅಡಿಟಿಪ್ಪಣಿಗಳಾಗಲೀ ಕಾಣುವುದಿಲ್ಲ. ಆದರೆ ಕವಿಯ ಜೀವನ ವೃತ್ತಾಂತ, ಕೃತಿಗಳ ವಸ್ತು, ಭಾಷೆ, ಶೈಲಿಗಳ ಪರಿಚಯ ಹಾಗೂ ಕೃತಿಗಳ ಮೌಲ್ಯಮಾಪನವನ್ನು ಜವಬ್ದಾರಿಯಿಂದ  ಮಾಡಲಾಗಿದೆ.

ಪುಸ್ತಕದಲ್ಲಿ ಪಂಪನ ಕೃತಿಗಳ ವಿನ್ಯಾಸ, ಶೈಲಿಯ ಬೆರಗು ಬೆಡಗುಗಳನ್ನು, ಪಾತ್ರ ಚಿತ್ರಣದ ರೀತಿಯನ್ನು, ಪಂಪ ಮಾರ್ಗದ ಲಕ್ಷಣಗಳನ್ನೂ ಸೊಗಸಾಗಿ ವಿವರಿಸಲಾಗಿದೆ.

About the Author

ಮಾಧವ ಪೆರಾಜೆ
(15 August 1967)

ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿರುವ ಡಾ. ಮಾಧವ ಪೆರಾಜೆ ಎಂ.ಎ. ಪದವಿಯನ್ನು ಮಂಗಳೂರು ವಿಶ್ವವಿದ್ಯಾಲಯ, ಎಂ.ಫಿಲ್ ಹಾಗೂ ಪಿಎಚ್‌.ಡಿ. ಪದವಿಯನ್ನು ಹಂಪಿ  ಕನ್ನಡ ವಿಶ್ವವಿದ್ಯಾಲಯದಿಂದ ಪಡೆದಿದ್ದಾರೆ. ದ್ರಾವಿಡ ಸಂಸ್ಕ್ರತಿ ಅಧ್ಯಯನ ವಿಭಾಗ ಅಧ್ಯಾಪಕರಾಗಿರುವ ಅವರು ಕನ್ನಡ ವಿಮರ್ಶೆ, ದೇಸಿ ಸಂಸ್ಕ್ರತಿ ಹಾಗೂ ದ್ರಾವಿಡ ಅಧ್ಯಯನ ವಿಷಯದಲ್ಲಿ ಆಸಕ್ತಿ ಹೊಂದಿದ್ದಾರೆ. ಕನ್ನಡ ಭಾಷಾ ಸಾಹಿತ್ಯ, ದ್ರಾವಿಡ ಅಧ್ಯಯನ , ಭಾಷಾ ವಿಜ್ಞಾನ, ಭಾಷಾಂತರ ಅಧ್ಯಯನ ಇವು ಪೆರಾಜೆ ಅವರ ಆಸಕ್ತಿಯ ಕ್ಷೇತ್ರಗಳು. ಪರಿಭಾಷೆ, ತೌಲನಿಕ ದ್ರಾವಿಡ, ಡೆರಿಡಾ, ಪಂಪ ಪೂರ್ವ ಕನ್ನಡ ಕವಿಗಳು, ಪ್ರಾಚೀನ ಕನ್ನಡ ಸಾಹಿತ್ಯವು ಅನುವಾದವೇ? ಇವು ಪ್ರಕಟಿತ ಕೃತಿಗಳು. ಅವರಿಗೆ ಎರಡು ಬಾರಿ ಕರ್ನಾಟಕ ಸಾಹಿತ್ಯ  ...

READ MORE

Related Books