ಪಾಂಚಾಳ ಜಾನಪದ

Author : ವೀರೇಶ ಬಡಿಗೇರ

Pages 304

₹ 250.00
Year of Publication: 2021
Published by: ಮಯ ಪ್ರಕಾಶನ
Address: ಕಮಲಾಪುರ 583221, ಹೊಸಪೇಟೆ ತಾಲೂಕು , ವಿಜಯನಗರ ಜಿಲ್ಲೆ

Synopsys

ಸಂಶೋಧಕ ವೀರೇಶ ಬಡಿಗೇರ ಅವರು ಪಾಂಚಾಳದ ಸಾಂಪ್ರದಾಯಿಕ ಹಾಡುಗಳನ್ನು ಸಂಗ್ರಹಿಸಿದ ಕೃತಿ-ಪಾಂಚಾಳ ಜಾನಪದ. ಕೃತಿಗೆ ಮುನ್ನುಡಿ ಬರೆದಿರುವ ಲೇಖಕಿ ಡಾ. ಶೈಲಜಾ ಇಂ. ಹಿರೇಮಠ ಅವರು, ‘ಜಾನಪದರಲ್ಲಿ ಹಾಗೂ ಹಸ್ತಪ್ರತಿ ಅಧ್ಯಯನದಲ್ಲಿ ಗಂಭೀರವಾಗಿ ತೊಡಗಿಸಿಕೊಂಡಿದ್ದಾರೆ. ಹಸ್ತಪ್ರತಿ ಅಧ್ಯಯನ ಹಾಗೂ ಜಾನಪದ ಅಧ್ಯಯನಕ್ಕೆ ಹೊಸ ಆಯಾಮಗಳನ್ನು ರೂಪಿಸಿದ್ದಾರೆ. ’ ಪಾಂಚಾಳ ಜಾನಪದ’ ವು ಸಾಂಪ್ರದಾಯಿಕ ಹಾಡುಗಳ ಸಂಗ್ರಹವಾಗಿದೆ. ಡಾ. ವೀರೇಶ ಬಡಿಗೇರ ಅವರು ಹೇಳಿಕೊಂಡಂತೆ ಅವರು ಬಿ.ಎ ಪದವಿಯಲ್ಲಿದ್ದಾಗ ಸಂಗ್ರಹಿಸಿದ ಹಾಡುಗಳು ಇವಾಗಿವೆ; ಅಜ್ಜಿ ಹಾಗೂ ತಾಯಿ ಅವರಿಂದ ಈ ಹಾಡುಗಳನ್ನು ಸಂಗ್ರಹಿಸಿದ್ದಾರೆ. ಜನಪದ ಹಾಡುಗಳನ್ನು ಹಾಡುವವರ ಜಂಡರ್ ಮತ್ತು ಸಮುದಾಯವನ್ನು ಅನುಲಕ್ಷಿಸಿ ಪಾಂಚಾಳ ಜನಪದ ಸಂಗ್ರಹ ರೂಪು ಪಡೆದಿದೆ. ಮುನ್ನುಡಿ ಬರೆಯುವ ನೆಪದಲ್ಲಿ ಯಾವುದು ಜನಪದ ಸಾಹಿತ್ಯ? ಮಹಿಳಾ ಜಾನಪದ ಸಾಹಿತ್ಯ, ಪುರುಷ ಜನಪದ ಸಾಹಿತ್ಯ ಎನ್ನುವ ವಿಂಗಡಣೆ ಜನಪದ ಸಾಹಿತ್ಯ ನಿರೂಪಕದಲ್ಲಿದೆಯೇ? ಮಹಿಳಾ ನಿರೂಪಕರಿಂದ ಅಭಿವ್ಯಕ್ತಗೊಳ್ಳುವ ಸಾಹಿತ್ಯವನ್ನಾಧರಿಸಿ ಮಹಿಳಾ ಸೃಜನಶೀಲತೆಯನ್ನು ನಿರ್ವಹಿಸಬಹುದೆ? ಹಾಗೆಯೇ, ನಿರೂಪಕರ ಜಾತಿ ಇಲ್ಲವೆ ಸಮುದಾಯವನ್ನಾಧರಿಸಿ ಜನಪದ ಸಾಹಿತ್ಯವನ್ನು ಸಂಗ್ರಹಿಸಿ ನಿರ್ವಹಿಸಿರಬಹುದೇ? ಎನ್ನುವ ಪ್ರಮುಖ ಪ್ರಶ್ನೆಗಳನ್ನು ಪ್ರಸ್ತುತ ಪಾಂಚಾಳ ಜಾನಪದ ಹುಟ್ಟು ಹಾಕಿದೆ. ಈ ಪ್ರಶ್ನೆಗೆ ಉತ್ತರಗಳನ್ನು ಕಂಡುಕೊಳ್ಳುವ ಪ್ರಯತ್ನವನ್ನು ಮುನ್ನುಡಿಯಲ್ಲಿ ಮಾಡಿದ್ದೇನೆ’ ಎಂದು ಹೇಳಿದ್ದಾರೆ. 

About the Author

ವೀರೇಶ ಬಡಿಗೇರ
(04 April 1966)

ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಹಸ್ತಪ್ರತಿ ವಿಭಾಗದಲ್ಲಿ ಪ್ರಾಧ್ಯಾಪಕರಾಗಿರುವ ವೀರೇಶ ಬಡಿಗೇರ, ಕನ್ನಡದ ಹಸ್ತಪ್ರತಿ ತಜ್ಞರಲ್ಲಿ ಒಬ್ಬರು. 1966 ಏಪ್ರಿಲ್‌ 4 ರಂದು ಜನಿಸಿದರು. ಎಂ. ಎ., ಪಿಎಚ್.ಡಿ. ಹಾಗೂ ಬಿ.ಇಡ್, ಡಿಪ್ಲೊಮಾ ಇನ್ ಎಪಿಗ್ರಾಫಿ ಮಾಡಿದ್ದು, ಕನ್ನಡ ಸಾಹಿತ್ಯ, ಸಂಸ್ಕೃತಿ, ಜಾನಪದ, ಸಂಗೀತ, ತಂತ್ರಜ್ಞಾನ ಆಸಕ್ತಿ ಕ್ಷೇತ್ರಗಳು. 28 ವರ್ಷ ಕಾಲ ಬೋಧನೆ ಹಾಗೂ ಸಂಶೋಧನೆಯ ಅನುಭವ ಇದೆ. ಬಾಗಲಕೋಟೆಯ  ಪಿ. ಎಂ. ನಾಡಗೌಡಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ  ಅರೆಕಾಲಿಕ ಉಪನ್ಯಾಸಕರಾಗಿ ವೃತ್ತಿ ಜೀವನ ಆರಂಭಿಸಿದರು. 1992 ರಿಂದ ಕನ್ನಡ ವಿಶ್ವವಿದ್ಯಾಲಯದಲ್ಲಿ ಸಂಶೋಧನ ಸಹಾಯಕರಾಗಿ ಕೆಲಸಕ್ಕೆ ಸೇರಿದರು. 1996 ಆಗಸ್ಟನಿಂದ ಹಸ್ತಪ್ರತಿಶಾಸ್ತ್ರ ವಿಭಾಗದಲ್ಲಿಉಪನ್ಯಾಸಕರಾದರು. 1996ರಲ್ಲಿ ಉತ್ತರ ಕರ್ನಾಟಕದ ಜಾನಪದ ...

READ MORE

Related Books