ಪಂಚಮುಖ ತ್ರಿಶೂಲದ ಯುದ್ಧ

Author : ಜಿ. ಶರಣಪ್ಪ

Pages 240

₹ 160.00




Year of Publication: 2014
Published by: ಕಣ್ವ ಪ್ರತಿಷ್ಠಾನ,
Address: ಚಂದ್ರಾ ಲೇಔಟ್, ವಿಜಯನಗರ, ಬೆಂಗಳೂರು-560040

Synopsys

ತಮಿಳುನಾಡಿನ ಮಹಾನ್ ಚಿಂತಕ, ಸಮಾಜ ಸುಧಾರಕ ಪೆರಿಯಾರ್ ಅವರ ಪಂಚಮುಖ ತ್ರಿಶೂಲದ ಯುದ್ಧ ಕುರಿತು ನ್ಯಾ. ಪಿ. ವೇಣುಗೋಪಾಲ್ ಅವರು ಬರೆದ ಕೃತಿಯನ್ನು ಲೇಖಕ ಜಿ. ಶರಣಪ್ಪ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಇಂಡಿಯಾದ ಸಾಂಸ್ಕೃತಿಕ ಚರಿತ್ರೆ ಎಂದರೆ, ಅದು ವೈದಿಕ ಅವೈದಿಕಗಳ ನಡುವಿನ ಸಂಘರ್ಷಾತ್ಮಕ ಕಥನ. ಅದು ನಿನ್ನೆಯದಲ್ಲ; ಆರ್ಯರು ಈ ನೆಲದಲ್ಲಿ ಕಾಲಿಟ್ಟ ದಿನದಿಂದಲೂ ಆಗುತ್ತಾ ಸಾಗಿರುವ ಸಮರ. ಈ ಸಮರಯಾನದ ಸಂಕಲನವೇ ರಾಮಾಯಣ. ಆರ್ಯ ದ್ರಾವಿಡ ಸಂಘರ್ಷದ ಈ ಪುರಾಣ ಕಥನವನ್ನು ಆರ್ಯಕರಣೀಗೊಳಿಸುತ್ತಾ ಒಳಗು ಮಾಡಿ ಈ ನೆಲದ ಸಾಂಸ್ಕೃತಿಕ ವಸ್ತು ಸತ್ಯವನ್ನು ಅಪಮಾನಿಸುತ್ತಾ ನಡೆದಿರುವುದು ದುರಂತ ವ್ಯಂಗ್ಯವೇ ಸರಿ. ಇಂಥಹ ಸಂಸ್ಕೃತಿ ವಿದ್ರೋಹದ ವಿರುದ್ಧ ತಿರುಗಿ ಬಿದ್ದು ಹೋರಾಡಿದವರು ಹಲವು ಜನರಿದ್ದಾರೆ. ಸಮಕಾಲೀನ ಸಂದರ್ಭದ ಈ ಬಗೆಯ ಹೋರಾಟಗಾರರ ಸಾಲಿನಲ್ಲಿ ಪೆರಿಯಾರ್ ಬಹುದೊಡ್ಡ ಹೆಸರು. ವರ್ಣವ್ಯವಸ್ಥೆಯ ಸಾಮಾಜಿಕ ಅನ್ಯಾಯಗಳನ್ನು ನಿಷ್ಠುರವಾಗಿ ಖಂಡಿಸಿ ದೊಡ್ಡ ಚಳವಳಿಯನ್ನು ಮಾಡಿದವರು ಪೆರಿಯಾರ್. ಅವರ ಹೋರಾಟ ತಮಿಳುನಾಡಿನ ರಾಜಕೀಯ ಪಲ್ಲಟಕ್ಕೆ ಕಾರಣವಾದದ್ದು, ಅದರ ವೈಚಾರಿಕ ಗೆಲುವಿನ ಪ್ರತೀಕವೇ ಸರಿ.

About the Author

ಜಿ. ಶರಣಪ್ಪ

ಜಿ. ಶರಣಪ್ಪ ಇಂಗ್ಲಿಷ್ ಪ್ರಾಧ್ಯಾಪಕರು. ಹಿರಿಯೂರು ತಾಲೂಕಿನ ಸೂರಗೊಂಡನಹಳ್ಳಿಯಲ್ಲಿ ಕೃಷಿ ಚಟುವಟಿಕೆಯಲ್ಲಿ ಸಕ್ರಿಯ. ಬೆಂಗಳೂರಿನ ಹೆಚ್.ಎಸ್.ಆರ್. ಬಡಾವಣೆಯಲ್ಲಿ ಸದ್ಯ ವಾಸ. ಈವರೆಗೆ  ಅನುವಾದ, ಕಥೆ, ಮಕ್ಕಳ ಸಾಹಿತ್ಯ, ವೈಚಾರಿಕ ಹೀಗೆ ಸುಮಾರು 34 ಪುಸ್ತಕಗಳು ಪ್ರಕಟವಾಗಿವೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ. ರಾಜ್ಯ ಮಟ್ಟದ ಹಲವಾರು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ...

READ MORE

Related Books