ಪಂಚಮುಖಿ

Author : ಬಿ.ಎಚ್. ಶ್ರೀಧರ

₹ 40.00




Year of Publication: 2020
Published by: ತೇಜು ಪಬ್ಲಿಕೇಷನ್ಸ್‌
Address: ನಂ. 1014, 24ನೇ ಮುಖ್ಯರಸ್ತೆ, 16ನೇ ಕ್ರಾಸ್‌, ಬಿ.ಎಸ್.‌ಕೆ. 2ನೇ ಹಂತ ಬೆಂಗಳೂರು- 560 070
Phone: 9900195626

Synopsys

ಲೇಖಕ ಬಿ. ಎಚ್.‌ ಶ್ರೀಧರ ಅವರ ಪ್ರಬಂಧ ಸಂಕಲನ ಕೃತಿ ʼಪಂಚಮುಖಿʼ. ಲೇಖಕ ರಾಜಶೇಖರ ಹೆಬ್ಬಾರ ಅವರು ಪುಸ್ತಕದ ಸಂಪಾದಕರ ನುಡಿಯಲ್ಲಿ, “ಪಂಚಮುಖಿ' ಹೆಸರೇ ಹೇಳುವಂತೆ, ಇದು ಐದು ವೈಚಾರಿಕ ಪ್ರಬಂಧಗಳ ಸಂಕಲನ. ಕನ್ನಡದ ಜೀವನಸೂತ್ರ, ಸಾಹಿತ್ಯದ ಸಿದ್ದಿ, ವಿಶ್ವಶಾಂತಿ, ರಾಷ್ಟ್ರೀಯ ಪುನರುಜ್ಜೀವನ ಮತ್ತು ಸಾಹಿತ್ಯದ ಪಾಧಾನ್ಯ ಎಂಬ ಪ್ರಬಂಧಗಳನ್ನು ಇದು ಒಳಗೊಂಡಿದೆ. ಎಲ್ಲ ಪ್ರಬಂಧಗಳೂ ಶ್ರೀಧರಸಾಹಿತ್ಯದ ಸ್ಥಾಯಿಭಾವವಾದ ನೈತಿಕ ನಿಲುವನ್ನು ಧ್ವನಿಸುತ್ತವೆ. ಜನ ಶಿಕ್ಷಣದ ಧ್ಯೇಯವನ್ನು ಹೊತ್ತಿದ್ದ ಶ್ರೀಧರರ ಎಲ್ಲ ಕೃತಿಗಳ ಹಿಂದೆಯೂ ಜನ-ಮನ ಸಂಸ್ಕಾರದ ಕಳಕಳಿ ಇದ್ದೇ ಇದೆ. ಪಂಚಮುಖಿಯ ಶೈಲಿ, ಭಾಷೆಯ ಸರಳತೆ, ಸುಭಗತೆ ಶ್ರೀಧರಗದ್ಯ ಗಡಚು ಎನ್ನುವ ಆಕ್ಷೇಪಕ್ಕೆ ಉತ್ತರದಂತಿದೆ” ಎಂದು ಹೇಳಿದ್ದಾರೆ. ಪುಸ್ತಕದ ಪರಿವಿಡಿಯಲ್ಲಿ ಕನ್ನಡದ ಜೀವನ ಸೂತ್ರ, ಸಾಹಿತ್ಯದ ಸಿದ್ದಿ, ವಿಶ್ವಶಾಂತಿ, ರಾಷೀಯ ಪುನರುಜ್ಜೀವನ, ಹಾಗೂ ಸಾಹಿತ್ಯದ ಪ್ರಾಧಾನ್ಯ ಸೇರಿ ಒಟ್ಟು ೫ ಶೀರ್ಷೆಕೆಗಳಲ್ಲಿ ಪ್ರಬಂಧಗಳಿವೆ.

About the Author

ಬಿ.ಎಚ್. ಶ್ರೀಧರ
(24 April 1918 - 24 April 1990)

ಕವಿ, ಅನುವಾದಕ, ಪ್ರಬಂಧಕಾರ ಶ್ರೀಧರರು ಹುಟ್ಟಿದ್ದು ದ. ಕನ್ನಡ ಜಿಲ್ಲೆಯ ಬಿಜೂರು ಗ್ರಾಮದ ಬವಲಾಡಿಯಲ್ಲಿ. ತಂದೆ ಸೀತಾರಾಮ ಹೆಬ್ಬಾರರು, ತಾಯಿ ನಾಗಮ್ಮ. ಬಾರ್ಕೂರಿನಿಂದ ಬವಲಾಡಿಗೆ ಬಂದು ನೆಲೆಸಿದ ವಂಶಸ್ಥರು. ಪ್ರಾಥಮಿಕದಿಂದ ಹೈಸ್ಕೂಲು ವರೆಗೆ ಸೊರಬ, ಸಾಗರದಲ್ಲಿ ವಿದ್ಯಾಭ್ಯಾಸ, ಇಂಟರ್ ಮೀಡಿಯೆಟ್‌ಗೆ ಸೇರಿದ್ದು ಮೈಸೂರು. ಊಟಕ್ಕೆ ವಾರಾನ್ನ, ಪುಸ್ತಕಗಳಿಗೆ ಗ್ರಂಥಾಲಯ, ಫೀಸಿಗೆ ಸ್ಕಾಲರ್‌ಶಿಪ್, ಇಂಟರ್ ಮೀಡಿಯೆಟ್ ಮುಗಿಸಿದರು. ದೊರೆತ ಶಿಷ್ಯ ವೇತನ, ಮನೆ ಪಾಠ ಹೇಳಿ ತಂದೆಗೂ ಹಣ ಸಹಾಯ. ಬಿ.ಎ. ಆನರ್ಸ್‌ ಪಾಸು. ಹಲವಾರು ಪದಕ ಬಹುಮಾನ ಗಳಿಕೆ ಸಂತಸ. ಆದರೆ ಎಂ.ಎ. ಓದಲು ಹಣದ ಅಡಚಣೆಯಿಂದ ಬೆಂಗಳೂರಿನ ಪ್ರೆಸ್ ...

READ MORE

Related Books