ಪಂಚತಂತ್ರ ರೋಚಕ ಕಥೆಗಳು

Author : ಗೋಪಾಲಕೃಷ್ಣ ಮಧ್ಯಸ್ಥ (ಜಿ.ಕೆ.ಮಧ್ಯಸ್ಥ)

Pages 40

₹ 70.00




Year of Publication: 2013
Published by: ವಸಂತ ಪ್ರಕಾಶನ
Address: ನಂ 360, 10ನೇ ಬಿ- ಮುಖ್ಯರಸ್ತೆ, 3ನೇ ಅಡ್ಡರಸ್ತೆ, ಜಯನಗರ, ಬೆಂಗಳೂರು-11

Synopsys

‘ಪಂಚತಂತ್ರ ರೋಚಕ ಕಥೆಗಳು’ ವಸಂತ ಪ್ರಕಾಶನದ ಮಕ್ಕಳಿಗೆ ಮನರಂಜನೆ-ಬುದ್ಧಿಗೆ ಸಾಣೆ ಮಾಲೆಯಲ್ಲಿ ಪ್ರಕಟವಾದ ಕೃತಿ. ಕುನ್ವರ್ ಅನಿಲ್ ಕುಮಾರ್ ಅವರ ಕೃತಿಯನ್ನು ಪತ್ರಕರ್ತ, ಲೇಖಕ ಜಿ.ಕೆ. ಮಧ್ಯಸ್ಥ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಮಕ್ಕಳಿಗಾಗಿ ದೇಶ ವಿದೇಶಗಳ ಸ್ವಾರಸ್ಯಕರವಾದ ಕಥೆಗಳನ್ನು ಈ ಮಾಲೆಯಲ್ಲಿ ಪ್ರಕಟವಾದ ಈ ಕೃತಿಯ ಮೂಲ ಲೇಖಕರು ಕುನ್ವರ್ ಅನಿಲ್ ಕುಮಾರ್. ಅವರ ಕತೆಗಳನ್ನು ಲೇಖಕರು ಅತ್ಯಂತ ಸರಳವಾಗಿ ಕನ್ನಡಕ್ಕೆ ಅನುವಾದಿಸಿದ್ದಾರೆ.

About the Author

ಗೋಪಾಲಕೃಷ್ಣ ಮಧ್ಯಸ್ಥ (ಜಿ.ಕೆ.ಮಧ್ಯಸ್ಥ)
(16 August 1945)

ಸಾಹಿತ್ಯ ಮತ್ತು ಪತ್ರಿಕೋದ್ಯಮ ಎರಡರಲ್ಲೂ ಸಮಾನ ಆಸಕ್ತಿ ಇರುವ ಗೋಪಾಲ ಕೃಷ್ಣ ಮಧ್ಯಸ್ಥ (ಜಿ.ಕೆ. ಮಧ್ಯಸ್ಥ) ಅವರು ಪ್ರಜಾವಾಣಿ, ವಿಜಯ ಕರ್ನಾಟಕ ಸೇರಿದಂತೆ ಕನ್ನಡದ ವಿವಿಧ ಪತ್ರಿಕೆಗಳಲ್ಲಿ ಕೆಲಸ ಮಾಡಿದ್ದಾರೆ. ಪತ್ರಿಕೆಗಳ ಭಾಷೆಯ ಬಳಕೆ ಮತ್ತು ಬದಲಾವಣೆಯನ್ನು ವಿಶ್ಲೇಷಣೆ ಮಾಡುತ್ತಾರೆ. ನಿವೃತ್ತಿಯ ನಂತರ ಉಡುಪಿಯಲ್ಲಿ ನೆಲೆಸಿರುವ ಅವರು ‘ದುಡ್ಡು ಕಾಸು', 'ಪದೋನ್ನತಿ' ಎಂಬ ಎರಡು ಅಂಕಣ ಬರಹಗಳನ್ನು ಪುಸ್ತಕಗಳಾಗಿ ಪ್ರಕಟಿಸಿದ್ದಾರೆ. ಗೋಪಾಲಕೃಷ್ಣ ಮಧ್ಯಸ್ಥ ಜನಿಸಿದ್ದು ಕಾಸರಗೋಡು ಸಮೀಪದ ಕುಂಜ್ಯಾರುವಿನಲ್ಲಿ. ...

READ MORE

Related Books