ಪಂಚಾಯುಧ ಕುಮಾರ ಮೊದಲಾದ ಬೋಧಿಸತ್ವನ ಕತೆಗಳು

Author : ಜಿ.ಪಿ. ರಾಜರತ್ನಂ

₹ 85.00




Published by: ಸಪ್ನ ಬುಕ್ ಹೌಸ್
Address: 2ನೇ ಕ್ರಾಸ್‌ ಗಾಂಧಿನಗರ, ಬೆಂಗಳೂರು- 560 009
Phone: 9180 4011 4411

Synopsys

ಲೇಖಕ ಜಿ. ಪಿ. ರಾಜರತ್ನಂ ಅವರ ಮಕ್ಕಳ ಸಾಹಿತ್ಯ ಕೃತಿ ʻಪಂಚಾಯುಧ ಕುಮಾರ ಮೊದಲಾದ ಬೋಧಿಸತ್ವನ ಕತೆಗಳುʼ. ಲೇಖಕ ಸುಮತೀಂದ್ರ ನಾಡಿಗ ಅವರು ಪುಸ್ತಕದಲ್ಲಿ, “ಶಿಶುವಿಹಾರದಿಂದ ಪ್ರೌಢಶಾಲೆಯವರೆಗೆ 2ರಿಂದ 6, 7ರಿಂದ 10, 11ರಿಂದ 16 ವರ್ಷದ ಮಕ್ಕಳಿಗೆ ಅವರ ವಯಸ್ಸಿಗೆ ಅನುಗುಣವಾಗಿ ಶಿಶುಸಾಹಿತ್ಯ, ಬಾಲಸಾಹಿತ್ಯ, ಕಿಶೋರ ಸಾಹಿತ್ಯ ಬೇರೆ ಬೇರೆಯದಾಗಿರಬೇಕೆನ್ನುವ ಹೊಳಹು ನನ್ನ ಗುರುಗಳಾದ ಜಿ. ಪಿ. ರಾಜರತ್ನಂ ಅವರಿಗಿತ್ತು. ಅದಕ್ಕಾಗಿ ಅವರು ಶಿಶುಪ್ರಾಸಗಳು, ಪದ್ಯಕತೆಗಳು, ಹಾಡುಗಳು, ಅಭಿನಯಗೀತೆಗಳು, ಗದ್ಯಕತೆಗಳನ್ನು ಬರೆದರು. ಅವುಗಳ ಮೂಲಕ ನಮ್ಮ ಸಂಸ್ಕೃತಿಯ ಮೌಲ್ಯಗಳು ಮಕ್ಕಳ ಸಂವೇದನೆಯಲ್ಲಿ ಸೇರುವ ಹಾಗೆ ನೋಡಿ ಕೊಂಡರು. ಮಕ್ಕಳ ಮನಸ್ಸನ್ನು ಬೆಳೆಸಿದರು. ರಾಜರತ್ನಂ ಶಿಶುವಿಹಾರದಲ್ಲಿ ಮತ್ತು ಮಿಡ್ಲ್ ಸ್ಕೂಲ್‌ನಲ್ಲಿ ಶಿಕ್ಷಕರಾಗಿದ್ದಾಗ ಮಕ್ಕಳ ಸಹವಾಸದಲ್ಲಿ ಮಕ್ಕಳ ಸಾಹಿತ್ಯವನ್ನು ರಚಿಸಿದರು. ಅವರು ಭಾರತದ ಪೌರಾಣಿಕ, ಧಾರ್ಮಿಕ, ಚಾರಿತ್ರಿಕ ಆದರ್ಶ ವ್ಯಕ್ತಿಗಳ ಬಗ್ಗೆ ಬರದದ್ದೆಲ್ಲವು ಕತೆಗಳ ಹಾಗಿವೆ. ಶಾಲೆಗಳಲ್ಲಿ ಮೇಷ್ಟ್ರುಗಳು ಪಾಠದ ನಡುವೆ ಈ ಕತೆಗಳನ್ನು ಸಮಯಾನುಸಾರವಾಗಿ ಉಪಯೋಗಿಸಿದರೆ, ಮಕ್ಕಳ ಮನಸ್ಸನ್ನು ಉಲ್ಲಾಸಭರಿತವಾಗಿಡುವುದು, ಅವರಿಗೆ ಎಚ್ಚರಿಕೆ, ಸ್ಫೂರ್ತಿ ಮತ್ತು ಅವರ ಬದುಕಿಗೊಂದು ಅರ್ಥವನ್ನು ಕೊಡುವುದು ಕೂಡ ಸಾಧ್ಯವಾಗುತ್ತದೆ. ರಾಜರತ್ನಂ ಅವರ ಶಿಶುಸಾಹಿತ್ಯ ಮತ್ತು ಬಾಲಸಾಹಿತ್ಯವನ್ನು ಅರ್ಥಮಾಡಿಕೊಳ್ಳುವುದು ಶಿಕ್ಷಕರು ಒಳ್ಳೆಯ ಶಿಕ್ಷಕರಾಗಲಿಕ್ಕೂ, ವಿದ್ಯಾರ್ಥಿಗಳು ಒಳ್ಳೆಯ ವಿದ್ಯಾರ್ಥಿಗಳಾಗುವುದಕ್ಕೂ ಅತ್ಯವಶ್ಯಕ” ಎಂದು ಹೇಳಿದ್ದಾರೆ.

About the Author

ಜಿ.ಪಿ. ರಾಜರತ್ನಂ
(05 December 1904 - 13 March 1979)

ಆಡುಮಾತಿನ ಪದಗಳ ಬಳಕೆಯ ‘ರತ್ನನ ಪದಗಳು’ ಮೂಲಕ ಜನಪ್ರಿಯರಾಗಿದ್ದ ಜಿ.ಪಿ. ರಾಜರತ್ನಂ ಅವರು ಕನ್ನಡ ಸಾಹಿತ್ಯದ ಪರಿಚಾರಿಕೆಗೂ ಹೆಸರಾಗಿದ್ದರು. ರಾಜರತ್ನಂ ಅವರು ಜನಿಸಿದ್ದು ಬೆಂಗಳೂರು ಜಿಲ್ಲೆಯ ರಾಮನಗರದಲ್ಲಿ 1908ರ ಡಿಸೆಂಬರ್ 8 ರಂದು. ತಂದೆ ಜೆ.ಪಿ. ಗೋಪಾಲಕೃಷ್ಣಯ್ಯಂಗಾರ್. ರಾಜರತ್ನಂ ಅವರು ಮೈಸೂರಿನಲ್ಲಿ ಪ್ರೌಢಶಾಲಾ ಶಿಕ್ಷಣ ಮುಗಿಸಿ, ಸೆಂಟ್ರಲ್ ಕಾಲೇಜಿನಲ್ಲಿ ಬಿ.ಎ. ಮತ್ತು ಮೈಸೂರು ಮಹಾರಾಜ ಕಾಲೇಜಿನಲ್ಲಿ ಎಂ.ಎ. ಪದವಿ ಗಳಿಸಿದರು. ಅನಂತರ ಮೈಸೂರು, ತುಮಕೂರು, ಶಿವಮೊಗ್ಗ, ಬೆಂಗಳೂರು ಕಾಲೇಜುಗಳಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ್ದ ಅವರು 1964ರಲ್ಲಿ ನಿವೃತ್ತರಾದ ಮೇಲೆ ಯುಜಿಸಿ ಉಪಾಧ್ಯಾಯರಾಗಿ ಕೆಲವು ಕಾಲ ಸೇವೆ ಸಲ್ಲಿಸಿದರು. ಕವಿ, ...

READ MORE

Related Books