ಪಂಡಿತ

Author : ಶಿವಾನಂದ ಪಂಡಿತ

Pages 63

₹ 49.00




Year of Publication: 2021
Published by: ವಂಶಿ ಪಬ್ಲಿಕೇಷನ್ಸ್
Address: #4, ಗಾಯತ್ರಿ ಕಾಂಪ್ಲೆಕ್ಸ್, ಟಿ.ಬಿ ಬಸ್ ಸ್ಟಾಪ್ ಹತ್ತಿರ, ಬಿ.ಎಚ್ ರೋಡ್, ಸುಭಾಸ್ ನಗರ, ನೆಲಮಂಗಲ ಬೆಂಗಳೂರು-562123
Phone: 9916595916

Synopsys

ಪಂಡಿತ ಶಿವನಂದಾ ಪಂಡಿತ ಅವರ ಕೃತಿಯಾಗಿದೆ. ಮಾನವ ಕುಲದ ಪ್ರತಿ ಸದಸ್ಯನಿಗೆ ಪ್ರತ್ಯೇಕವಾಗಿ ಬುದ್ಧಿವಂತಿಕೆಯನ್ನು ಕಲಿಸಲು ದೇವರಿಂದ ಸಾಧ್ಯವಿಲ್ಲ. ಆದ್ದರಿಂದಲೇ ಆತ ಪುಸ್ತಕಗಳನ್ನು ಸೃಷ್ಟಿಸಿದನು. ಕೋಟಿಗಟ್ಟಲೆ ಮೈಲುಗಳ ಪ್ರಯಾಣ ಒಂದು ಹೆಜ್ಜೆಯಿಂದ ಪ್ರಾರಂಭವಾಗುತ್ತದೆ. ಈ ಗ್ರಂಥವು ಚೆಲುವಾದ ಆದರ್ಶ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುವ, ಬೆಳೆಸಿಕೊಳ್ಳುವ, ಉಳಿಸಿಕೊಳ್ಳುವ ಪರಿಯನ್ನು ಉಪದೇಶಿಸುತ್ತದೆ. ಬಾಳಿನ ಬವಣೆಗಳನ್ನು ಎದುರಿಸುವ ಶಕ್ತಿಮಂತ್ರ ಇದರಲ್ಲಿದೆ. ಬದುಕೆಂಬ ಸಮರದಲ್ಲಿ ಗೆದ್ದು ಪಂಡಿತರಾಗುವುದು ಈ ಪುಸ್ತಕದ ಅಧ್ಯಯನದಿಂದ ಸುಲಭಸಾಧ್ಯ. ಪುಸ್ತಕದ ಪ್ರಸ್ತುತ ಶೀರ್ಷಿಕೆಯೂ ಅದಕ್ಕೆ ಪೂರಕವಾಗಿದೆ, ಪ್ರೇರಕವಾಗಿದೆ. ಈ ಎಲ್ಲಾ ಭರವಸೆಗಳ ಹಿನ್ನೆಲೆಯಲ್ಲಿ ‘ಪಂಡಿತ’ ಪುಸ್ತಕದ ಓದುವಿಕೆಯಿಂದ ಓದುಗರ ಬಾಳ್ವೆಯಲ್ಲಿ ಸಕಾರಾತ್ಮಕ ಪರಿವರ್ತನೆಗಳು ಸಂಭವಿಸಬಹುದು.

About the Author

ಶಿವಾನಂದ ಪಂಡಿತ

ಶಿವಾನಂದ ಪಂಡಿತರು  ಆರ್ಥಿಕ ಸಲಹೆಗಾರರು, ಇವರಿಗೆ ಹಣಕಾಸು, ತೆರಿಗೆ, ವೆಚ್ಚ ನಿರ್ವಹಣೆ ಹಾಗೂ ಸಾಂಸ್ಥಿಕ ಕಾನೂನು ಕ್ಷೇತ್ರಗಳಲ್ಲಿ ಅನುಭವವಿದೆ. ಪುಸ್ತಕಗಳನ್ನು ಓದುವುದು ಹಾಗೂ ಲೇಖನಗಳನ್ನು ಬರೆಯುವುದು ಇವರ ಪ್ರವೃತ್ತಿ, ಅನೇಕ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಪತ್ರಿಕೆಗಳಲ್ಲಿ ಇವರ ಕನ್ನಡ ಹಾಗೂ ಆಂಗ್ಲ ಭಾಷೆಯ ಲೇಖನಗಳು ಪ್ರಕಟವಾಗಿವೆ. ಲೇಖಕರು ಸಾರ್ವಜನಿಕ ಭಾಷಣಕಾರರಾಗಿದ್ದು, ವ್ಯಕ್ತಿತ್ವ ಅಭಿವೃದ್ಧಿ, ಹಣಕಾಸು, ತೆರಿಗೆ, ಕಾರ್ಯತಂತ್ರದ ನಿರ್ವಹಣೆ ಹಾಗೂ ವಿಷಯಗಳ ಬಗ್ಗೆ ತರಬೇತಿ ಕಾರ್ಯಕ್ರಮಗಳನ್ನು ನಡೆಸುತ್ತಾರೆ. ಕೆಲವು ವಾಣಿಜ್ಯ ಮಹಾವಿದ್ಯಾಲಯಗಳಲ್ಲಿ ಇವರು ಅತಿಥಿ ಅಧ್ಯಾಪಕರಾಗಿ ಉಪನ್ಯಾಸ ನೀಡುತ್ತಾರೆ. ರಾಷ್ಟ್ರೀಯ ಅರ್ಹತಾ ವಿದ್ಯಾರ್ಥಿವೇತನದ ಜೊತೆಗೆ ವಿವಿಧ ರಸಪ್ರಶ್ನೆ, ...

READ MORE

Related Books