ಪನ್ನೇರಳೆ

Author : ಎಚ್.ಎಸ್. ಸತ್ಯನಾರಾಯಣ

Pages 110

₹ 120.00




Year of Publication: 2022
Published by: ಅಲಂಪು ಪ್ರಕಾಶನ
Address: ಮಾಲೂರು

Synopsys

ಲೇಖಕ ಎಚ್.ಎಸ್. ಸತ್ಯನಾರಾಯಣ ಅವರ ಲಲಿತ ಪ್ರಬಂಧಗಳ ಸಂಕಲನ ಪನ್ನೇರಳೆ. ಲೇಖಕರೇ ಕೃತಿಯಲ್ಲಿ ಹೇಳಿರುವಂತೆ, ನನ್ನ ಬದುಕಿನ ಅನುಭವಗಳ ಜೊತೆ ಹಾದು ಬಂದವು. ಇನ್ನಷ್ಟು ಆಳಕ್ಕಿಳಿದಿದ್ದರೆ, ಉತ್ತಮ ಲಲಿತ ಪ್ರಬಂಧಗಳಾಗುತ್ತಿದ್ದವೇನೋ! ಆದರೆ ಪ್ರಕಟಣೆಯ ಹುಚ್ಚು ಹತ್ತಿದವರಿಗೆ ಕಾಯುವ ಸಂಯಮವೆಲ್ಲಿಯದು? ಹದ ಸಿದ್ಧಿಸುವ ತನಕ ಕಾಯಬೇಕು ಎಂದು ವೈದೇಹಿಯವರು ತಮ್ಮ ತಿಳಿಸಾರು ಪದ್ಯದಲ್ಲಿ ಹೇಳಿದ್ದಾರೆ. ಎ.ಎನ್. ಮೂರ್ತಿರಾವ್, ಪುತಿನ, ಗೊರೂರು, ರಾಕು, ಎನ್ಕೆ ಮುಂತಾದವರ ರಚನೆಗಳನ್ನು ಓದಿದವರಿಗೆ ಪ್ರಬಂಧಕ್ಕೆ ಕೂಡ ಈ ಮಾತು ಅನ್ವಯಿಸುತ್ತದೆಂಬುದು ತಿಳಿದಿದೆ. ಅವಸರವನ್ನು ಸಾವಧಾನದ ಬೆನ್ನಿಗೇರಿಸುವ ಛಾತಿ ನನ್ನಲಿಲ್ಲವಾಗಿ ಹಸಿಹಸಿಯಾಗಿಯೇ ನಿಮ್ಮ ಕೈಗಿಟ್ಟಿರುವೆ ಎಂಬುದಾಗಿ ಹೇಳಿದ್ದಾರೆ.

About the Author

ಎಚ್.ಎಸ್. ಸತ್ಯನಾರಾಯಣ

ಕನ್ನಡ ಪ್ರಾಧ್ಯಾಪಕರು ಹಾಗೂ ಹೊಸ ತಲೆಮಾರಿನ ವಿಮರ್ಶಕರೂ ಆದ ಎಚ್.ಎಸ್. ಸತ್ಯನಾರಾಯಣ ಅವರು ಮೂಲತಃ ಮಲೆನಾಡಿನವರು. ಕುವೆಂಪು ಅವರ ಕುಪ್ಪಳಿಗೆ ಸಮೀಪವೇ ಇರುವ, ಚಿಕ್ಕಮಗಳೂರಿನ ಹೊಕ್ಕಳಿಕೆಯಲ್ಲಿ ಜನಿಸಿದ ಅವರು ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಚಿರಪರಿತರು. ಪದವಿಪೂರ್ವ ಕಾಲೇಜಿನಲ್ಲಿ ಉಪನ್ಯಾಸಕರಾಗಿರುವ ಸತ್ಯನಾರಾಯಣ ಅವರು ಅನೇಕ ಸಾಹಿತಿಗಳೊಂದಿಗೆ ಒಡನಾಡಿದ್ದಾರೆ. ಆ ಬಗ್ಗೆ ಅತ್ಯಂತ ಆಕರ್ಷಕವಾಗಿ ಮಾತನಾಡುವ ಅವರು ಅಷ್ಟೇ ಆಕರ್ಷಕವಾಗಿ ಬರೆಯುತ್ತಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿಗಾಗಿ ‘ಕನ್ನಡ ಸಾಹಿತ್ಯ ಸಂಗಾತಿ’, ‘ಸಾಹಿತ್ಯ ವಿಮರ್ಶೆ-2016’, ಜೊತೆಗೆ ಡುಂಡಿರಾಜರ ಸಾಹಿತ್ಯ ವಿಮರ್ಶೆ ಕುರಿತ ‘ಡುಂಡಿಮಲ್ಲಿಗೆ’, ದ್ವಿತೀಯ ಪಿ.ಯು.ಸಿ.ಯ ಕನ್ನಡ ಭಾಷಾ ಪಠ್ಯ ‘ಸಾಹಿತ್ಯ ...

READ MORE

Related Books