ಪಾಪ ಪ್ಲೇಟೋ

Author : ಪಾಲಹಳ್ಳಿ ವಿಶ್ವನಾಥ್ (ಪಿ.ಆರ್. ವಿಶ್ವನಾಥ್)

Pages 120

₹ 90.00




Year of Publication: 2015
Published by: ಇಂಡಿಗೋ ಮಲ್ಟಿ ಮೀಡಿಯಾ
Address: # 10/1, 11ನೇ ಮುಖ್ಯರಸ್ತೆ, ಪ್ರಕಾಶ್ ನಗರ, ಬೆಂಗಳೂರು- 560021

Synopsys

‘ಪಾಪ ಪ್ಲೇಟೋ’ ವಿಜ್ಞಾನ ಬರಹಗಳ ಲೇಖಕ ಪಾಲಹಳ್ಳಿ ವಿಶ್ವನಾಥ ಅವರ ವೈಜ್ಞಾನಿಕ ಲೇಖನಗಳ ಸಂಗ್ರಹ. ಈ ಪುಸ್ತಕ ಕಳೆದ ಕೆಲವು ವರ್ಷಗಳಲ್ಲಿ ವೃತ್ತಪತ್ರಿಕೆಗಳಲ್ಲಿ ಬರೆದ ಲೇಖನಗಳ ಸಂಕಲನ. ಪತ್ರಿಕೆಗಳಲ್ಲಿ ಪ್ರಕಟವಾಗುವ ಲೇಖನಗಳಲ್ಲಿ ಜಾಗದ ಅಭಾವದಿಂದಾಗಿ ಹಲವಾರು ಮಿತಿಗಳು ಇರುತ್ತವೆ. ಪದಗಳ ಸಂಖ್ಯೆಯಿಂದ ಮೊದಲ ಮಿತಿ ಬರುತ್ತದೆ; 800-900 ಪದಗಳಲ್ಲಿ ವಿಷಯವನ್ನು ತಿಳಿಸಬೇಕು. ಆದ್ದರಿಂದ ಅದು ಒಂದು ರೀತಿಯ ಸವಾಲಾಗಿದ್ದು ಕೆಲವು ಬಾರಿ ಮಾತ್ರ ಆ ವಿಷಯಕ್ಕೆ ಪೂರ್ಣ ನ್ಯಾಯ ದೊರಕಬಹುದು. ಪತ್ರಿಕೆಗಳಲ್ಲಿ ಜಾಗದ ಮಿತಿಯಿಂದ ಚಿತ್ರಗಳನ್ನು ಹಾಕಲಾಗುವುದಿಲ್ಲ ಎನ್ನುವುದು ಮತ್ತೊಂದು ಕುಂದು. ಖಗೋಳ ವಿಜ್ಞಾನದಂತಹ ಕ್ಷೇತ್ರದಲ್ಲಿ ಈ ಕೊರತೆಯಿಂದ ವಿಷಯದ ಸಂವಹನ ಮತ್ತೂ ಸಂಕುಚಿತವಾಗುತ್ತದೆ. ಈ ಕೊರತೆಗಳನ್ನು ಸರಿಪಡಿಸಲು ಲೇಖನಗಳಲ್ಲಿ ಕೆಲವು ಬದಲಾವಣೆಗಳನ್ನು ಮಾಡಿದೆ. ಪ್ರತಿ ಲೇಖನದಲ್ಲೂ ಸಾಕಷ್ಟು ಚಿತ್ರಗಳನ್ನು ಅಳವಡಿಸಲಾಗಿದೆ. ಆ ಚಿತ್ರಗಳು ಮತ್ತು ಅವುಗಳಿಗೆ ಕೊಟ್ಟಿರುವ ವಿವರಣೆ ಲೇಖನಗಳನ್ನು ಅರ್ಥಮಾಡಿಕೊಳ್ಳಲು ಸಹಾಯವಾಗಬಹುದು. ಪ್ರತಿ ಲೇಖನದ ಕಡೆಯಲ್ಲಿ ಆ ವಿಷಯದ ಈಗಿನ ತಿಳುವಳಿಕೆಯನ್ನು ಸಂಕ್ಷಿಪ್ತವಾಗಿ ಹಂಚಿಕೊಳ್ಳಲಾಗಿದೆ. ಈ ಪುಸ್ತಕದಲ್ಲಿರುವ ಅನೇಕ ಲೇಖನಗಳು ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಮಾನವನಿಗೆ ಸಂಬಂಧಪಟ್ಟಿವೆ. ಇವುಗಳಲ್ಲಿ ಕೆಲವು ಐತಿಹಾಸಿಕ ಲೇಖನಗಳಿವೆ. ಯಾವ ಲೇಖನವೂ ಅಪ್ರಸ್ತುತವಲ್ಲ.

About the Author

ಪಾಲಹಳ್ಳಿ ವಿಶ್ವನಾಥ್ (ಪಿ.ಆರ್. ವಿಶ್ವನಾಥ್)

ವಿಜ್ಞಾನ ಲೇಖಕ, ಅಂಕಣಕಾರ ಪಿ.ಆರ್. ವಿಶ್ವನಾಥ್ ಅವರು ಮೂಲತಃ ಬೆಂಗಳೂರಿನವರು. 1942ರಲ್ಲಿ ಜನಿಸಿದ ಪಿ.ಆರ್. ವಿಶ್ವನಾಥ್ ಅವರು ಪಾಲಹಳ್ಳಿ ವಿಶ್ವನಾಥ್ ಎಂದೇ ಪ್ರಸಿದ್ಧರಾದವರು. ಮೈಸೂರು ವಿಶ್ವವಿದ್ಯಾಲಯದಲ್ಲಿ ಎಂ.ಎಸ್.ಸಿ ಪೂರೈಸಿದ ಅವರು ಆ್ಯನ್ ಆರ್ಬರ್ ಮಿಶಿಗನ್ ವಿಶ್ವವಿದ್ಯಾಲಯದಲ್ಲಿ ಪಿಎಚ್.ಡಿ ಪಡೆದರು. ಆನಂತರ ಮುಂಬಯಿಯ ಟಾಟಾ ಮೂಲಭೂತ ಸಂಶೋಧನಾ ಸಂಸ್ಥೆ (ಟಿ.ಐ.ಎಫ್.ಆರ್)ಯಲ್ಲಿ ಭೌತಶಾಸ್ತ್ರ ಪ್ರಾಧ್ಯಾಪಕರಾಗಿ ವೃತ್ತಿ ಆರಂಭಿಸಿದರು. ಬೆಂಗಳೂರಿನ ಭಾರತೀಯ ಖಭೌತ ಸಂಸ್ಥೆ (ಐ.ಐ.ಎ) ಸಂದರ್ಶಕ ಪ್ರಾಧ್ಯಾಪಕರು; ಕ್ಯಾಲಿಫೋರ್ನಿಯ ಮತ್ತು ಮೇರಿಲ್ಯಾಂಡ್ ವಿಶ್ವವಿದ್ಯಾಲಯಗಳಲ್ಲಿ ಸಂದರ್ಶಕ ಪ್ರಾಧ್ಯಾಪಕರು, ಭಾರತ ಮತ್ತು ಅಮೆರಿಕದಲ್ಲಿ ಹಲವಾರು ಭೌತವಿಜ್ಞಾನ ಮತ್ತು ಖಗೋಳ ವಿಜ್ಞಾನದ ಪ್ರಯೋಗಗಳಲ್ಲಿ ಭಾಗಿಯಾಗಿದ್ದರು. ...

READ MORE

Related Books