ಪಾಪು ಗಾಂಧಿ, ಗಾಂಧಿ ಬಾಪು ಆದ ಕತೆ

Author : ಬೊಳುವಾರು ಮಹಮದ್ ಕುಂಞ್

Pages 184

₹ 90.00




Year of Publication: 2007
Published by: ಕನ್ನಡ ಪುಸ್ತಕ ಪ್ರಾಧಿಕಾರ
Address: ಬೆಂಗಳೂರು

Synopsys

‘ಪಾಪು ಗಾಂಧಿ, ಗಾಂಧಿ ಬಾಪು ಆದ ಕತೆ’ ಕೃತಿಯು ಬೋಳುವಾರು ಮಹಮದ್ ಕುಂಞ ಅವರು ಬರೆದಿರುವ ಗಾಂಧಿ ಕುರಿತ ಕತೆಯಾಗಿದೆ. ಈ ಕೃತಿಯು 2006ರಲ್ಲಿ ಎರಡು ಬಾರಿ ಮುದ್ರಣವನ್ನು ಕಂಡಿದ್ದು, ಕೃತಿಯ ಬೆನ್ನುಡಿಯಲ್ಲಿನ ಕೆಲವೊಂದು ವಿಚಾರಗಳು ಹೀಗಿವೆ : ನಾಥುರಾಮ ಒಬ್ಬನೇ ಕೊಂದ ಗಾಂಧಿಯ ದೇಹಕ್ಕೆ, ನಾಡ ನಾಯಕರೆಲ್ಲ ಒಟ್ಟು ಸೇರಿ ಕೊಳ್ಳಿಯಿಡುತ್ತಿದ್ದ ಹೊತ್ತಲ್ಲಿ, ದೆಹಲಿಯ ಕಾನಾಟ್ ಪ್ಲೇಸ್’ನ ನಿರ್ಜನ ರಸ್ತೆಯಲ್ಲಿದ್ದ ಮನೆಯೊಂದರೆದುರು ಅರುವತ್ತರ ಮುದುಕನೊಬ್ಬ ಬಂದು ನಿಂತಿದ್ದ. ಮನೆಯ ಗೇಟಿನ ಕಂಬಿಗಳಿಗೆ ಅಂಟಿಸಿದ್ದ ತುಕ್ಕು ಹಿಡಿದ ತಗಡಿನ ಫಲಕದಲ್ಲಿ ‘ದೇವದಾಸ ಮೋಹನದಾಸ ಗಾಂಧಿ’ ಎಂದು ಬರೆದಿತ್ತು. ಅ ಅಕ್ಷರಗಳ ಅಡಿಯಲ್ಲಿ ತುಂಟ ಮಕ್ಕಳಾರೋ ಸೀಮೆ ಸುಣ್ಣದಿಂದ ‘ನಾಯಿಗಳಿಲ್ಲ, ಒಳ ಬನ್ನಿ’ ಎಂದು ಬರೆದಿದ್ದರು. ಇಬ್ಬರು ಪುಟ್ಟ ಮಕ್ಕಳೊಂದಿಗೆ ಕಿಟಿಕಿಯ ಬದಿಯಲ್ಲಿ ಕುಳಿತಿದ್ದ ತಾರೆಗೆ, ಅಪರೂಪಕ್ಕೆ ಬಂದಿದ್ದ ದೊಡ್ಡಪ್ಪನ ಕೈ ಹಿಡಿದು ಒಳಗೆ ಕರೆದುಕೊಂಡು ಹೋದಳು. ‘ನೀವು ಸ್ಮಶಾನಕ್ಕೆ ಹೋಗಲಿಲ್ಲವೇ ಹರಿಕಾಕಾ?’ ಎಂದು ಪ್ರಶ್ನಿಸಿದಳು. ‘ಇನ್ನೂ ಇಲ್ಲ ಮಗಳೇ, ನನಗೆ ಆ ಅಧಿಕಾರವಿಲ್ಲ.’ ಎಂದ ಮುದುಕ ವಿಷಾದದಿಂದ ನಕ್ಕ. ದೊಡ್ಡಪ್ಪನನ್ನು ಪ್ರೀತಿಯಿಂದ ಅಪ್ಪಿಕೊಂಡ ಮಕ್ಕಳು ಅಳತೊಡಗಿದವು. ಮುದುಕನೂ ಮಕ್ಕಳೊಂದಿಗೆ ಅಳುತ್ತಾ ಸ್ವಲ್ಪಹೊತ್ತು ಕುಳಿತ. ಒಳಗೆ ಹೋಗಿದ್ದ ತಾರಾ ನೀರಿನ ಲೋಟ ತಂದು ದೊಡ್ಡಪ್ಪನ ಎದುರಿಗಿರಿಸಿದಳು. ಮುದುಕ ನೀರು ಕುಡಿಯಲು ನಿರಾಕರಿಸಿದ; ‘ಬೇಡ ಮಗಳೆ, ನಾನಿಂದು ಉಪವಾಸ ವ್ರತದಲ್ಲಿದ್ದೇನೆ.’ ಎಂದ. ನಂತರ ಅತ್ತಿತ್ತ ನೋಡುತ್ತಾ, ‘ಮನೆಯಲ್ಲಿ ಒಗೆಯಲು ಹಾಕಿರುವ ಬಟ್ಟೆಗಳನ್ನೆಲ್ಲಾ ಒಟ್ಟು ಮಾಡಿ ಹಿತ್ತಲಲ್ಲಿ ನೀರಿನ ನಲ್ಲಿಯ ಹತ್ತಿರ ಇಟ್ಟು ಬಿಡು ಮಗಳೇ’ ಎಂದ. ತಾರೆ ಹಾಗೆಯೇ ಮಾಡಿದಳು. ಕೊಳೆಯಾದ ಬಟ್ಟೆಗಳನ್ನು ಒಂದೊಂದಾಗಿ ಒಗೆದು ಶುಚಿಗೊಳಿಸಲಾರಂಭಿಸಿದ್ದ ಮುದುಕನಿಗೆ ತಾರೆ ಸಾಕ್ಷಿಯಾದಳು ಎಂದಿದೆ.

About the Author

ಬೊಳುವಾರು ಮಹಮದ್ ಕುಂಞ್
(22 October 1951)

ಕನ್ನಡದ  ವಿಶಿಷ್ಟ ಕತೆಗಾರ ಬೊಳುವಾರು ಮಹಮದ್ ಕುಂಞ್   ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನವರು. ‘ಅತ್ತ, ಇತ್ತಗಳ ಸುತ್ತಮುತ್ತ’. ದೇವರುಗಳ ರಾಜ್ಯದಲ್ಲಿ, ಅಂಕ, ಆಕಾಶಕ್ಕೆ ನೀಲಿ ಪರದೆ, ಒಂದು ತುಂಡು ಗೋಡೆ, ಅವರ ಕಥಾಸಂಗ್ರಹಗಳು. ತಟ್ಟು ಚಪ್ಪಾಳೆ ಪುಟ್ಟ ಮಗು ಅವರು ಸಂಪಾದಿಸಿದ ಮಕ್ಕಳ ಪದ್ಯಗಳ ಸಂಕಲನ. ಜಿಹಾದ್, ಸ್ವಾತಂತ್ರ್ಯದ ಓಟ, ಓದಿರಿ ಅವರ ಕಾದಂಬರಿಗಳು. ಬ್ಯಾಂಕ್ ಉದ್ಯೋಗಿಯಾಗಿ ನಾಲ್ಕು ದಶಕ ಕೆಲಸ ಮಾಡಿ ನಿವೃತ್ತರಾಗಿರುವ ಬೊಳುವಾರರು ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿದ್ದಾರೆ.  ಕನ್ನಡ ಗದ್ಯ ಸಾಹಿತ್ಯಕ್ಕೆ ಮುಸ್ಲಿಂ ಬದುಕನ್ನು ಮೊತ್ತ ಮೊದಲು ಪರಿಚಯಿಸಿದ ಇವರು, ಕನ್ನಡ ಸಾಹಿತ್ಯದಲ್ಲಿ ಮುಸ್ಲಿಂ ಸಂವೇದನೆ ಎಂಬ ...

READ MORE

Related Books