
ʻಪರದೆʼ ಎ.ಎನ್. ಪ್ರಸನ್ನ ಅವರ ಕಥಾ ಸಂಕಲನವಾಗಿದೆ. ಇಲ್ಲಿ ಲೇಖಕ ಭಿನ್ನ ಭಿನ್ನ ಕಾಲಗಳಲ್ಲಿ ಹಿಮ ಸನ್ನಿವೇಶಗಳಲ್ಲಿ ಹೇಗೆ ಮತ್ತು ಎಷ್ಟು ಭಿನ್ನವಾಗಿ ನಡೆದುಕೊಳ್ಳುತ್ತಾನೆ ಎನ್ನುವುದನ್ನು ಅನ್ವೇಷಿಸುತ್ತಾರೆ. ಈ ಅನ್ವೇಷಣೆ ಸಾಧಾರಣವಾಗಿ ಮಧ್ಯಮ ವರ್ಗದ ಬದುಕಿನ ವ್ಯವಸ್ಥೆಯಲ್ಲಿ ಸಿಲುಕಿರುವ ಜನಗಳ ಮನೋಭಾವದ ಅನ್ವೇಷಣೆ ಆಗಿದೆ ಎನ್ನುತ್ತಾರೆ ಲೇಖಕ. ಈ ಗುಂಪಿನಲ್ಲಿ ಸರ್ಕಾರಿ ಮತ್ತು ವಿವಿಧ ಉದ್ಯೋಗಗಳಲ್ಲಿ ತೊಡಗಿಕೊಂಡವರು, ನಿವೃತ್ತರು, ರಾಜಿನಾಮೆ ಕೊಟ್ಟವರು ಮುಂತಾದವರು ಇದ್ದಾರೆ. ಅವರು ಇರುವುದು ತಮ್ಮ ತಮ್ಮ ದೌರ್ಬಲ್ಯಗಳ ಪ್ರತೀಕಗಳಾಗಿಯೇ ಹೌದು. ದೌರ್ಬಲ್ಯಗಳನ್ನು ಎದುರುಗೊಳ್ಳುವ, ಅದನ್ನು ನಿರ್ವಿಣ್ಣರಾಗಿ ಒಪ್ಪಿಕೊಳ್ಳುವ, ಎದುರಿಸುವ ಎಲ್ಲ ಬಗೆಯ ಜನಗಳನ್ನು ನಾವು ಈ ಕಥೆಯಲ್ಲಿ ಮುಖಾಮುಖಿಯಾಗುತ್ತೇವೆ ಎನ್ನುತ್ತಾರೆ ಲೇಖಕ.

ಎ. ಎನ್. ಪ್ರಸನ್ನ ಅವರು ದಾವಣಗೆರೆಯಲ್ಲಿ ಎಂಜಿನಿಯರಿಂಗ್ ಪದವಿಯ ನಂತರ ಕೆ.ಪಿ.ಟಿ.ಸಿ.ಎಲ್.ನಲ್ಲಿ ಕಾರ್ಯನಿರ್ವಹಿಸಿ ನಿವೃತ್ತರು, ಸಾಹಿತ್ಯ, ನಾಟಕ ಮತ್ತು ದೃಶ್ಯ ಮಾಧ್ಯಮದಲ್ಲಿ ಆಸಕ್ತಿ. ಉಳಿದವರು (ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ), ರಥಸಪ್ತಮಿ(ಬಿ. ಎಚ್.ಶ್ರೀಧರ ಪ್ರಶಸ್ತಿ), ಪ್ರತಿಫಲನ (ಮಾಸ್ತಿ ಕಥಾ ಪುರಸ್ಕಾರ) ಸೇರಿದಂತೆ ಐದು ಕಥಾ ಸಂಕಲನಗಳು ಮತ್ತು ಆಯ್ದ ಕಥೆಗಳ ಸಂಕಲನ ಪ್ರಕಟವಾಗಿವೆ. ನೂರು ವರ್ಷದ ಏಕಾಂತ (ಗಾಬ್ರಿಯಲ್ ಗಾರ್ಸಿಯಾ ಮಾರ್ಕೆಜ್‌ನ 'ಒನ್ ಹಂಡ್ರೆಡ್ ಇಯರ್ಸ್ ಆಫ್ ಸಾಲಿಟೂಡ್' ಕಾದಂಬರಿಯ ಅನುವಾದ : ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಪ್ರಶಸ್ತಿ), ಮೂರನೆ ದಡ (ಪ್ರಪಂಚದ ಮಾಂತ್ರಿಕ ವಾಸ್ತವತೆಯ ಕಥೆಗಳು), ಒಂದಾನೊಂದು ...
READ MORE