ಪ್ಯಾರಾನಾರ್ಮಲ್

Author : ಗುರುರಾಜ ಕೊಡ್ಕಣಿ, ಯಲ್ಲಾಪುರ

Pages 144

₹ 175.00




Year of Publication: 2025
Published by: ಅಂಕಿತ ಪುಸ್ತಕ
Address: #53, ಶ್ಯಾಮ್‌ಸಿಂಗ್ ಕಾಂಪ್ಲೆಕ್ಸ್, ಗಾಂಧಿಬಜಾರ್ ಮುಖ್ಯರಸ್ತೆ, ಬಸವನಗುಡಿ, ಬೆಂಗಳೂರು - 560 004.
Phone: 080 - 2661 7100 / 2661 7755

Synopsys

`ಪ್ಯಾರಾನಾರ್ಮಲ್' ಗುರುರಾಜ ಕೊಡ್ಕಣಿ ಯಲ್ಲಾಪುರ ಅವರ ಸತ್ಯಘಟನೆ ಆಧಾರಿತ ಹಾರರ್ ಕಥನಗಳ ಸಂಕಲನವಾಗಿದೆ. ಇಲ್ಲಿ ಭಾರತದ ಅನೇಕಾನೇಕ ಹೌಂಟೆಡ್ (ಭಯಜನಕ) ಸ್ಥಳಗಳ ಕುರಿತಾದ ಮಾಹಿತಿಯಿದೆ. ದೆವ್ವ ಭೂತಗಳ ಬಗೆಗೆ ಅಧಿಸಾಮಾನ್ಯದ ಸಂಶೋಧಕರಿಗೆ ’ವಿವಾದಿತ’ ಸಾಕ್ಷಿ ಸಿಕ್ಕಿರುವ ಸ್ಥಳಗಳ ವಿವರಗಳಿವೆ. ವೈಜ್ಞಾನಿಕವಾಗಿ ನಿರೂಪಿಸಲಾಗದ ಆದರೆ ಮನುಷ್ಯನ ಪ್ರಜ್ಞೆಯ ಅನುಭವಕ್ಕೆ ಬರುವ ಅಲೌಕಿಕ ಘಟನೆಗಳ ಬಗ್ಗೆ ವಿವರಗಳಿವೆ. ನಂಬುವವರಿಗೆ ಸತ್ಯವಿದೆ, ನಂಬದವರಿಗೆ ರೋಚಕತೆ ಇದೆ. ಒಟ್ಟಾರೆಯಾಗಿ ನಂಬಿಕೆ ಅಪನಂಬಿಕೆಗಳನ್ನು ದಾಟಿ ಓದಬಹುದಾದ ಪುಸ್ತಕವಿದು. ನಂಬುವವರಿಗೆ ಅವರ ನಂಬಿಕೆಗೆ ಪುಷ್ಠಿ. ನಂಬದಿರುವವರಿಗೆ ಇದು ರೋಚಕತೆ.

About the Author

ಗುರುರಾಜ ಕೊಡ್ಕಣಿ, ಯಲ್ಲಾಪುರ

ಕಾದಂಬರಿಕಾರ, ಅಂಕಣಕಾರ, ಅನುವಾದಕ ಗುರುರಾಜ ಕೊಡ್ಕಣಿ ಅವರು ಮೂಲತಃ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದವರು. ಪ್ರಸ್ತುತ ಬೆಂಗಳೂರಿನಲ್ಲಿ ವಾಸವಿದ್ದಾರೆ ಓದಿದ್ದು ಇಂಜಿನಿಯರಿಂಗ್, ಪ್ರಸ್ತುತ ಭಾರತೀಯ ಜೀವ ವಿಮಾ ನಿಗಮದಲ್ಲಿ ಅಭಿವೃದ್ಧಿ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ‘ಹಾಯ್ ಬೆಂಗಳೂರು’ ಮತ್ತು ‘ಹಿಮಾಗ್ನಿ’ ವಾರಪತ್ರಿಕೆಗಳ ಅಂಕಣಕಾರರಾಗಿ ಬರಹದ ಬದುಕು ಆರಂಭಿಸಿದ ಅವರು ನಂತರದಲ್ಲಿ ಕಾದಂಬರಿಕಾರ, ಅನುವಾದಕರಾಗಿ ಗುರುತಿಸಿಕೊಂಡರು. ಉಳಿದಂತೆ ‘ಅಂಕಣಕ್ಕೆ ಅನುವಾದಿತ ಕಥೆಗಳು’ ಎನ್ನುವ ಇಂಗ್ಲಿಷ್ ಸಣ್ಣ ಕತೆಗಳ ಅನುವಾದಿತ ಕಥಾಸಂಕಲನ ಕೂಡ ಪ್ರಕಟವಾಗಿರುತ್ತದೆ. ಅಷ್ಟೇಅಲ್ಲದೆ ಲಘು ಹರಟೆಯ ಶೈಲಿಯ ಬರಹಗಳ ಸಂಕಲನ, ‘ಸವಿ ಸವಿನೆನಪು ಸಾವಿರ ನೆನಪು’ ಎನ್ನುವ ಇ-ಬುಕ್ ಸಹ ಪ್ರಕಟಗೊಂಡಿದೆ.  ಕೃತಿಗಳು: ಶತಕಂಪಿನೀ, ವಿಕ್ಷಿಪ್ತ, ...

READ MORE

Related Books