ಪರೋಕ್ಷ

Author : ಶತಾವಧಾನಿ ಆರ್. ಗಣೇಶ

Pages 241

₹ 176.00




Year of Publication: 2020
Published by: ವಸಂತ ಪ್ರಕಾಶನ
Address: # 360, 10ನೇ ಬಿ;ಮುಖ್ಯರಸ್ತೆ, ಕಾಸ್ಮೊಪಾಲಿಟಿನ್ ್ ಕ್ಲಬ್, ಜಯನಗರ ಪೂರ್ವ, ಜಯನಗರ, ಬೆಂಗಳೂರು-560011,
Phone: 080 2244 3996

Synopsys

ಬಹು ಭಾಷಾ ವಿದ್ವಾಂಸ ಡಾ. ಶತಾವಧಾನಿ ಆರ್. ಗಣೇಶ ಅವರ ಕೃತಿ-ಪರೋಕ್ಷ. ವಿಮರ್ಶಾ ಪ್ರಬಂಧಗಳ ಸಂಕಲನವಿದು. ಭಾರತೀಯ ಸಾಹಿತ್ಯ-ಸಂಸ್ಕೃತಿ-ವೇದ ಪರಂಪರೆ-ಸಂಗೀತ ಹೀಗೆ ವೈವಿಧ್ಯಮಯವಾದ ಸಂಗಮದ ಕುರಿತು ಅಧಿಕೃತವಾಗಿ ಮಾತನಾಡಬಲ್ಲ ಲೇಖಕರು, ಮಹತ್ವದ ಸಾಹಿತ್ಯ ಕೃತಿಗಳ ಕುರಿತು ಬರೆದ ವಿಮರ್ಶೆ ಬರಹಗಳನ್ನು ಇಲ್ಲಿ ಸಂಕಲಿಸಿದೆ. ಪ್ರಾಚೀನ ಕೃತಿಗಳನ್ನು ವಿಮರ್ಶೆಗೆ ಎತ್ತಿಕೊಳ್ಳುವಾಗಿನ ಎಚ್ಚರವನ್ನು ಇಲ್ಲಿಯ ಬರಹಗಳಲ್ಲಿ ಕಾಣುತ್ತೇವೆ.

About the Author

ಶತಾವಧಾನಿ ಆರ್. ಗಣೇಶ
(04 December 1962)

ಶತಾವಧಾನಿ ಗಣೇಶ ಅವರು ಉತ್ತಮ ವಾಗ್ಮಿಗಳು. ವಿದ್ವಾಂಸರು. ಅವಧಾನ ಕಲೆಯನ್ನು ರೂಢಿಸಿಕೊಂಡವರು. “ಕನ್ನಡದಲ್ಲಿ ಅವಧಾನ ಕಲೆ” ಎಂಬ ಮಹಾಪ್ರಬಂಧಕ್ಕೆ ಹಂಪಿಯ ಕನ್ನಡ ವಿಶ್ವವಿದ್ಯಾನಿಲಯ ಪ್ರಪ್ರಥಮ ಡಿ.ಲಿಟ್. ಪದವಿ ನೀಡಿ ಗೌರವಿಸಿದೆ. ಪ್ರಸ್ತುತ ಭಾರತೀಯ ವಿದ್ಯಾಭವನದ ಬೆಂಗಳೂರು ಶಾಖೆಯ ಸಂಸ್ಕೃತ ವಿಭಾಗದ ನಿರ್ದೇಶಕರಾಗಿದ್ದಾರೆ. ಆರ್.ಶಂಕರನಾರಾಯಣ ಅಯ್ಯರ್ ಹಾಗೂ ಅಲಮೇಲಮ್ಮ ದಂಪತಿಯ ಪುತ್ರರು.04-12-1962ರಂದು ಕೋಲಾರದಲ್ಲಿ ಜನನ. ಬೆಂಗಳೂರಿನ ವಿಶ್ವೇಶ್ವರಯ್ಯ ತಾಂತ್ರಿಕ ಮಹಾವಿದ್ಯಾಲಯ (UVCE), ದಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವೀಧರರು. ಬೆಂಗಳೂರಿನ ಇಂಡಿಯನ್ ಇನ್ಸ್ಟಿ ಟ್ಯೂಟ್ ಆಫ್ ಸೈನ್ಸ್ ನಲ್ಲಿ ಮೆಟೀರಿಯಲ್ ಸೈನ್ಸ್ ಹಾಗೂ ಮೆಟಲರ್ಜಿಯಲ್ಲಿ ಎಂ.ಎಸ್ಸಿ. ಪದವೀಧರರು. ಮೈಸೂರ್ ವಿಶ್ವವಿದ್ಯಾಲಯದ ಅಡಿಯಲ್ಲಿ ...

READ MORE

Related Books