ಪಾಷಾಣದ ಹಂಗು

Author : ಟಿ.ಎನ್. ವಾಸುದೇವ ಮೂರ್ತಿ

Pages 256

₹ 100.00




Year of Publication: 2011
Published by: ಕನ್ನಡ ಪುಸ್ತಕ ಪ್ರಾಧಿಕಾರ
Address: ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು-560002
Phone: 080-22107704

Synopsys

12ನೇ ಶತಮಾನದ ಪ್ರಮುಖ ವಚನಕಾರರಾದ “ಅಲ್ಲಮಪ್ರಭು” ರವರ ವಚನ ಮತ್ತು ಭಾರತೀಯ ದಾರ್ಶನಗಳ ಬಗ್ಗೆ ಈ ಕೃತಿಯಲ್ಲಿ ವಿವರಣೆಯನ್ನು ಟಿ.ಎನ್.ವಾಸುದೇವ ಮೂರ್ತಿ ನೀಡಿದ್ದಾರೆ. ಅಲ್ಲಮ ಪ್ರಭು ಪ್ರಮುಖ ದಾರ್ಶನಿಕ ವಚನಕಾರ. ಇವರ ವಚನಗಳು ಬೇರೆಯವರ ವಚನಗಳಿಗಿಂತ ಒಳಾರ್ಥವನ್ನು ಒಳಗೊಂಡಿರುತ್ತವೆ. ಆಳವಾದ ಅಧ್ಯಯನದಲ್ಲಿ ತೊಡಗಿಸಿಕೊಂಡ ಲೇಖಕ ರು ಅಲ್ಲಮನ ವಚನ ಮತ್ತು ಭಾರತೀಯ ದರ್ಶನದ ಬಗ್ಗೆ ತೌಲನಿಕವಾಗಿ ಈ ಕೃತಿಯಲ್ಲಿ ವಿವರಿಸಿದ್ದಾರೆ. ಆರು ಅಧ್ಯಾಯಗಳಲ್ಲಿ ವಿಷಧವಾಗಿ ಚರ್ಚಿಸಲ್ಪಟ್ಟಿರುವ ಇಲ್ಲಿನ ದಾರ್ಶನಿಕ ಅಂಶಗಳು ಮೇಲ್ನೋಟಕ್ಕೆ ಸಾಮಾನ್ಯ ಓದುಗನಿಗೆ ಕಠಿಣವೆನಿಸಿದರೂ ಕೂಡ ಹೊಸಹೊಸ ದೃಷ್ಟಿಕೋನವನ್ನು ಪರಿಚಯಿಸುತ್ತದೆ.

About the Author

ಟಿ.ಎನ್. ವಾಸುದೇವ ಮೂರ್ತಿ
(30 December 1974)

ಟಿ.ಎನ್.ವಾಸುದೇವ ಮೂರ್ತಿ ಅವರು ಕಿ.ರಂ.ನಾಗರಾಜ ಅವರ ಮಾರ್ಗದರ್ಶನದಲ್ಲಿ ಸಿದ್ಧಪಡಿಸಿದ ಅಲ್ಲಮ ಪ್ರಭುವಿನ ವಚನಗಳ ದಾರ್ಶನಿಕ ಮರುಚಿಂತನೆಯ ವಿಭಿನ್ನ ಸ್ವರೂಪಗಳು ಎಂಬ ಮಹಾಪ್ರಬಂಧಕ್ಕೆ ಹಂಪಿ ಕನ್ನದ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪ್ರಶಸ್ತಿ ಸಂದಿದೆ. ಬೆಂಗಳೂರು ವಿವಿಯಲ್ಲಿ ಕನ್ನಡ ಎಂ.ಎ (ತೌಲನಿಕ ಸಾಹಿತ್ಯ) ಪದವಿಯನ್ನು ಪಡೆದ ಮೇಲೆ ಬೆಂಗಳೂರಿನ ಹಲವು ಪ್ರಮುಖ ಕಾಲೇಜುಗಳಲ್ಲಿ ಕನ್ನಡ ಉಪನ್ಯಾಸಕರಾಗಿ ಕಾರ್ಯನಿರ್ವಹಿಸಿದರು. ನ್ಯಾಷನಲ್  ಕಾಲೇಜು, ಜೈನ್ ವಿಶ್ವವಿದ್ಯಾಲಯ ಕಾವ್ಯಮಂಡಲ ಮೊದಲಾದ ಕನ್ನಡ ಸ್ನಾತಕೋತ್ತರ ಕೇಂದ್ರಗಳಲ್ಲಿ ಕನ್ನಡ ಉಪನ್ಯಾಸಕರಾಗಿ ಎಂ.ಎ. ಹಾಗೂ ಎಂ.ಫಿಲ್ ವಿದ್ಯಾರ್ಥಿಗಳಿಗೆ ತರಬೇತಿ ನೀಡಿದ್ದಾರೆ. ಓಶೋ ನೇರ ಶಿಷ್ಯರಾದ ಸ್ವಾಮಿ ಆನಂದ್ ಪ್ರಭಾವದಿಂದ ದೀಕ್ಷೆ ...

READ MORE

Related Books