ಪತ್ನಿಯರು ಕಂಡಂತೆ ಪ್ರಸಿದ್ಧರು

Author : ಬಿ.ಎಸ್. ವೆಂಕಟಲಕ್ಷ್ಮಿ

Pages 324

₹ 300.00




Year of Publication: 2018
Published by: ಅಹರ್ನಿಶಿ ಪ್ರಕಾಶನ
Address: ಅಹರ್ನಿಶಿ, ಕಂಟ್ರಿಕ್ಲಬ್ ಹತ್ತಿರ, ವಿದ್ಯಾನಗರ, ಶಿವಮೊಗ್ಗ-577203
Phone: 9449174662

Synopsys

ಮಯೂರ’ ಮಾಸಪತ್ರಿಕೆಯಲ್ಲಿ ಬಿ.ಎಸ್. ವೆಂಕಟಲಕ್ಷ್ಮಿ ಅವರು ಬರೆಯುತ್ತಿದ್ದ ’ಪತ್ನಿಯರು ಕಂಡಂತೆ ಪ್ರಸಿದ್ಧರು’  ಸರಣಿಯಲ್ಲಿ ಪ್ರಕಟವಾದ ಬರಹಗಳನ್ನು ಸಂಗ್ರಹಿಸಿ ನೀಡಲಾಗಿದೆ. ಸಾಹಿತ್ಯ, ಸಂಗೀತ, ಸಿನಿಮಾ, ರಾಜಕಾರಣ ಹೀಗೆ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆಯ ಮಾಡಿದ ಮಹನೀಯರನ್ನು ಅವರ ಪತ್ನಿಯರು ಹೇಗೆ ನೋಡುತ್ತಾರೆ ಎಂಬುದನ್ನು ದಾಖಲಿಸುವ ವಿಶಿಷ್ಟ ಸರಣಿ ಇದಾಗಿತ್ತು.

ಕವಿ-ಕತೆಗಾರ ಜಯಂತ ಕಾಯ್ಕಿಣಿ ಅವರು ’ನಾಡಿನ ವಿವಿಧ ನಲವತ್ತು ಪ್ರತಿಭಾಶೀಲ ವ್ಯಕ್ತಿಗಳನ್ನು ಅವರವರ ಬಾಳ ಸಂಗಾತಿಯ ಸಂವೇದನೆಯಿಂದ ಗ್ರಹಿಸಿ ಕೆಲವೇ ತೀವ್ರ ರೇಖೆಗಳಲ್ಲಿ ಮೂಡಿಸುವ ನುಡಿನೋಟಗಳ ಈ ಪುಸ್ತಕ ಅದ್ವಿತೀಯವಾದದ್ದು, ಸಾಧಕರ ಸತ್ವಪರೀಕ್ಷೆಗಳಲ್ಲಿ ಚಡಪಡಿಕೆಗಳಲ್ಲಿ ತಪಸ್ಸಿನಂತೆ ಪಾಲ್ಗೊಂಡ ಸಹಧರ್ಮಿಣಿಯರ ಕರುಳಿನ ಸೋಲುಗಳು ಇಲ್ಲಿವೆ. ಮಹಾನುಭಾವರ ಮಹಿಮಾಸ್ತುತಿಗೆ ಹೋಗದೆ, ಅವರನ್ನು ನೇಪಥ್ಯದಲ್ಲಿದ್ದುಕೊಂಡೇ ರೂಪಿಸಿದ ಹೆಣ್ಣಾದ ಮಹಿಳೆಯರ ಕಣ್ಣಿಂದ ಅವರನ್ನು ಗ್ರಹಿಸುವ ಕೆಲಸವನ್ನು ವೆಂಕಟಲಕ್ಷ್ಮಿ ಪೂರ್ವಗ್ರಹಿಕೆಯಿಲ್ಲದೆ, ಸಿಲೆಬಸ್ ಇಲ್ಲದೆ ಮಾಡಿದ್ದಾರೆ. ವಾತ್ಸಲ್ಯದಲ್ಲಿ ಅಪಾರ ಘನತೆಯಲ್ಲಿ ನಡೆದ ಸಂವಾದಗಳು ಇವು. ಪ್ರತಿ ಪ್ರಬಂಧದಲ್ಲೂ ವೆಂಕಟಲಕ್ಷ್ಮಿ ಅವರ ಜಿಜ್ಞಾಸೆ, ಲವಲವಿಕೆ ಪಾರದರ್ಶಕವಾಗಿ ಹೊಮ್ಮುತ್ತದೆ. ಪ್ರತಿ ಸಾಧಕರ ಮನೆಯ ಒಲೆಯ ಕಾವೇ ಈ ಪುಸ್ತಕವನ್ನು ಬೆಚ್ಚಗಿರಿಸಿದೆ. ಪ್ರತಿ ಪ್ರಬಂಧವೂ ಬದುಕಿನ ಬೆಳಕಿಗೆ ತೆರೆದ ಕಿಟಕಿಯಂತಿದೆ’ ಎಂದು ವಿವರಿಸಿದ್ದಾರೆ.

About the Author

ಬಿ.ಎಸ್. ವೆಂಕಟಲಕ್ಷ್ಮಿ

ವೆಂಕಟಲಕ್ಷ್ಮಿ ಬಿ.ಎಸ್., ಬಿ.ಎ. ಪತ್ರಿಕೋದ್ಯಮ ವಿಷಯದಲ್ಲಿ ಪದವಿ ಪಡೆದವರು. ಇವರು ಜನಿಸಿದ್ದು ೧೧-೧-೧೯೪೬, ಬೆಂಗಳೂರಿನಲ್ಲಿ. ತಂದೆ- ಬಿ. ಸುಬ್ಬರಾಮಯ್ಯ, ತಾಯಿ-ಬಾಲಾಮಣಿ ಕರ್ನಾಟಕ ಲೇಖಕಿಯರ ನೆಲೆಬೆಲೆಬದುಕು, ಬವಣೆ, ಭರವಸೆ; ಚಾವಡಿ ಪತ್ರಿಕೆಯ ಸಂಪಾದಕಿ ಪ್ರಕಾಶಕಿ ಕೃತಿಗಳನ್ನು ರಚಿಸಿದ್ದಾರೆ. ಇವರಿಗೆ ಮಹಿಳಾ ಉದ್ಯಮಿಗಳನ್ನು ಕುರಿತ ಲೇಖನ ಮಾಲೆಗೆ ಅವೇಕ್ ಪುರಸ್ಕಾರ ದೊರಕಿದೆ. ...

READ MORE

Related Books