ಪತ್ರಿಕೋದ್ಯಮ ಮತ್ತು ಸಾಹಿತ್ಯ

Author : ಶಿ.ಜು. ಪಾಶ

Pages 80

₹ 80.00




Year of Publication: 2018
Published by: ಕರ್ನಾಟಕ ಮಾಧ್ಯಮ ಅಕಾಡೆಮಿ
Address: ಪೋಡಿಯಂ ಬ್ಲಾಕ್‌, ವಿಶ್ವೇಶ್ವರಯ್ಯ ಗೋಪುರ, ಡಾ.ಬಿ.ಆರ್‌. ಅಂಬೇಡ್ಕರ್‌ ವೀಧಿ, ಬೆಂಗಳೂರು-560001
Phone: 08022860164

Synopsys

`ಪತ್ರಿಕೋದ್ಯಮ ಮತ್ತು ಸಾಹಿತ್ಯ' ಕೃತಿಯು ಸಾಹಿತ್ಯ ಹಾಗೂ ಪತ್ರಿಕೋದ್ಯಮದ ನಂಟಿನ ಕುರಿತು ವಿಶ್ಲೇಷಿಸುವ ಕೃತಿ. ಪತ್ರಿಕೋದ್ಯಮ ಮತ್ತು ಸಾಹಿತ್ಯ, ಹುಟ್ಟು-ಹೋರಾಟ ಮತ್ತು ಪತ್ರಿಕೋದ್ಯಮ ಸಾಹಿತ್ಯ, ಹೆಜ್ಜೆಯ ಮೇಲೆ ಹೆಜ್ಜೆ ಇಟ್ಟು, ಪತ್ರಿಕೋದ್ಯಮ ಸಾಹಿತ್ಯ ಮತ್ತು ಕನ್ನಡದ ಕಟ್ಟಾಳುಗಳು, ಡಿ.ವಿ.ಜಿ-ಪತ್ರಿಕೋದ್ಯಮ-ಸಾಹಿತ್ಯ, ಪತ್ರಿಕೆ, ಭಾಷೆ ಮತ್ತು ಸಾಹಿತ್ಯ, ಪತ್ರಿಕಾ ಸಾಹಿತ್ಯ ಮತ್ತು ಜನಾಭಿಪ್ರಾಯ, ಆಧುನಿಕ ಬದುಕು ಮತ್ತು ಪತ್ರಿಕಾ ಸಾಹಿತ್ಯ, ಖಡ್ಗ ಮತ್ತು ಪೆನ್ನು, ಲಂಕೇಶ್‌, ಲಂಕೇಶ್‌ ಪತ್ರಿಕೆ ಮತ್ತು ಪತ್ರಿಕಾ ಸಾಹಿತ್ಯ, ವರ್ತಮಾನ ಸಂದರ್ಭದಲ್ಲಿ ಡಾ. ಅಂಬೇಡ್ಕರ್‌ ಎಂಬ ಪತ್ರಕರ್ತ, ಮಹಾತ್ಮ ಮತ್ತು ಪತ್ರಿಕಾ ಸಾಹಿತ್ಯ, ಉದ್ಯಮ, ಪತ್ರಿಕೋದ್ಯಮ ಮತ್ತು ಅದರ ಸಾಹಿತ್ಯ, ಸಾಹಸಿಗರ ಪತ್ರಿಕಾ ಸಾಹಿತ್ಯ ಮತ್ತು ಪತ್ರಿಕೋದ್ಯಮ ನಂಟು, ಪತ್ರಿಕೋದ್ಯಮ ಮತ್ತು ಮಹಿಳಾ ಪತ್ರಕರ್ತರು, ಪುರವಣಿ ಪತ್ರಿಕೋದ್ಯಮ ಮತ್ತು ಅದರ ಸಾಹಿತ್ಯ, ಪತ್ರಿಕೋದ್ಯಮದಲ್ಲಿ ‘ಮುಂಗಾರು’ಸಾಹಿತ್ಯ, ನಾಗರಿಕ ಪತ್ರಿಕೋದ್ಯಮ ಮತ್ತು ಆ ಸಾಹಿತ್ಯ, ಸಾಹಿತ್ಯ ಮತ್ತು ಪತ್ರಿಕಾ ಸಾಹಿತ್ಯ, ಪತ್ರಿಕೋದ್ಯಮ ಮತ್ತು ಪ್ರಯೋಗ ಸಾಹಿತ್ಯ ಹೀಗೆ ವಿವಿಧ ಅಧ್ಯಾಯಗಳ ಮೂಲಕ ಸಾಹಿತ್ಯ ಹಾಗೂ ಪತ್ರಿಕೋದ್ಯಮದ ಸಂಬಂಧಗಳನ್ನು ಚರ್ಚಿಸಲಾಗಿದೆ. 

 

About the Author

ಶಿ.ಜು. ಪಾಶ

ಶಿ.ಜು.ಪಾಶ ಎಂಬ ಕಾವ್ಯನಾಮದಿಂದಲೇ ಸಾಹಿತ್ಯ ಕೃಷಿಯಲ್ಲಿ ಚಿರಪರಿಚಿತರಾಗಿರುವ ಜುಬೇರ್ ಪಾಷ ಅವರು  ಈವರೆಗೆ  ಅಪ್ಪನ ಬೀಡಿ, ಕೋಳಿ ಹುಂಜದ ಹೂವು ಎಂಬ ಕವನಸಂಕಲನಗಳನ್ನು ಹೊರತಂದಿದ್ದಾರೆ. ಮತ್ತು ಕೆರೆಯಂಗಳದ ನವಾಬ ಎಂಬ ಕಥಾ ಸಂಕಲನವನ್ನು ಪ್ರಕಟಿಸಿದ್ಧಾರೆ.  ಕರ್ನಾಟಕ ಮಾಧ್ಯಮ ಅಕಾಡೆಮಿ 2018ರಲ್ಲಿ ‘ಸಾಹಿತ್ಯ ಮತ್ತು ಪತ್ರಿಕೋದ್ಯಮ’ ಎಂಬ ಕೃತಿಯನ್ನು ಪ್ರಕಟಿಸಿ ಹೊರತಂದಿದ್ದಾರೆ. ಲಂಕೇಶ್ ಪ್ರಶಸ್ತಿ ಸೇರಿದಂತೆ ಹಲವು ಬಹುಮಾನಗಳು ಶಿ.ಜು ಪಾಶ ಅವರಿಗೆ ಸಂದಿವೆ. ಕವಿತೆ, ಕಥೆ, ಪ್ರಬಂಧ ಬರೆಯುವುದರಲ್ಲಿ ವಿಶೇಷ ಆಸಕ್ತಿಯಿದ್ದು, ಕಳೆದ 23 ವರ್ಷಗಳಿಂದ ಪತ್ರಕರ್ತನಾಗಿ ಸೇವೆ ಸಲ್ಲಿಸುತ್ತಿದ್ದಾರೆ.    ...

READ MORE

Related Books