ಪಟ್ಟಣ ಮಹಾದೇವಪ್ಪನವರು

Author : ನಿಷ್ಠಿ ರುದ್ರಪ್ಪ

Pages 110

₹ 10.00




Year of Publication: 2010
Published by: ಲಿಂಗಾಯತ ಅಧ್ಯಯನ ಸಂಸ್ಥೆ
Address: ಜಗದ್ಗುರು ತೋಂಟದಾರ್ಯ ಮಠ, ಗದಗ-582101

Synopsys

ಲೇಖಕ ನಿಷ್ಠಿ ರುದ್ರಪ್ಪ, ಬಳ್ಳಾರಿ ಅವರು ರಚಿಸಿದ ಕೃತಿ-ಪಟ್ಟಣ ಮಹಾದೇವಪ್ಪನವರು. ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲ್ಲೂಕಿನ ಸ್ವಾತಂತ್ರ ಹೋರಾಟಗಾರರ ಪೈಕಿ ಪಟ್ಟಣದ ಮಹಾದೇವಪ್ಪನವರ ಬದುಕು-ಸಾಧನೆ-ವ್ಯಕ್ತಿತ್ವವನ್ನು ಕಟ್ಟಿಕೊಡುವ ಕೃತಿ ಇದು. ಪಟ್ಟಣ ಮಹಾದೇವಪ್ಪ ಮತ್ತು ಪಟ್ಟಣ ವೀರಭಧ್ರಪ್ಪ ಈ ಈರ್ವರೂ ಸಹೋದರರು. ರಾಮದುರ್ಗದಲ್ಲಿ ನಡೆಸಿದ ದೇಶದ ಸ್ವಾತಂತ್ಯ್ರ ಹೋರಾಟ, ಸಂಸ್ಥಾನ ವಿಲೀನ ಚಳವಳಿ ಹಾಗೂ ಕರ್ನಾಟಕ ಏಕೀಕರಣ ಮುಂತಾದ ರೈತ ಮತ್ತು ನೇಕಾರರ ಸಮಸ್ಯೆಗಳ ಬಗ್ಗೆ ನಿಸ್ವಾರ್ಥದಿಂದ ದುಡಿದವರ ವ್ಯಕ್ತಿ ಚಿತ್ರಣವನ್ನು ಈ ಕೃತಿಯು ಒಳಗೊಂಡಿದೆ. ರಾಮದುರ್ಗ ದುರಂತ ಹಾಗೂ ದೇಶ ಸ್ವಾತಂತ್ಯ್ರದ ವಿವಿಧ ಮಜಲುಗಳ ವಿವರ ನೀಡುತ್ತದೆ. ಅಂದಿನ ಹೋರಾಟಕ್ಕೆ ಜನ ಸ್ವಯಂ ಪ್ರೇರಣೆಯಿಂದ ಮನೆಮಠಗಳನ್ನು ತೊರೆದು ವೀರಾವೇಶದಿಂದ ಪ್ರಭುತ್ವದ ವಿರುದ್ಧ ಹೋರಾಡಿದ್ದನ್ನು ವಿವರಿಸುತ್ತದೆ.

About the Author

ನಿಷ್ಠಿ ರುದ್ರಪ್ಪ
(01 June 1966)

ಲೇಖಕ ನಿಷ್ಠಿ ರುದ್ರಪ್ಪ ಅವರು ಮೂಲತಃ ಬಳ್ಳಾರಿಯವರು. ತಂದೆ ನಿಷ್ಠಿ ಬಸವರಾಜಪ್ಪ, ತಾಯಿ ಪ್ರಭಾವತಿ. ಬಿ.ಕಾಂ, ಎಂ.ಎ, ಬಿ.ಇಡಿ ಪದವೀಧರರು. ಸ್ಮಾತಕೋತ್ತರ ವಚನ ಕಮ್ಮಟ ಪರೀಕ್ಷೆಯಲ್ಲಿ ರಾಜ್ಯಕ್ಕೆ ಮೂರನೇ ರ್‍ಯಾಂಕ್,  ಬಳ್ಳಾರಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮಾಜಿ ಅಧ್ಯಕ್ಷರು, ವಿಜಯನಗರ ಶ್ರೀಕೃಷ್ಣದೇವರಾಯ ವಿ.ವಿ. ಸಿಂಡಿಕೇಟ್ ಮಾಜಿ ಸದಸ್ಯರು. ಖಾಸಗಿ ಕಂಪನಿಯಲ್ಲಿ ಸೇವೆ, ಬಳ್ಳಾರಿಯ ಲೋಕದರ್ಶನ ಪತ್ರಿಕೆಯಲ್ಲಿ ವರದಿಗಾರರಾಗಿ, ಬಳ್ಳಾರಿಯ ವೈದ್ಯಕೀಯ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕಾರಿ ಹಾಗೂ ಕಲ್ಪತರು ವಿದ್ಯಾಸಂಸ್ಥೆಯಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದಾರೆ. ಹೊಸಪೇಟೆಯ ಆಕಾಸವಾಣಿ ಕೇಂದ್ರದಿಂದ ‘ಚಿಂತನೆ’ ಹಾಗೂ ಹಚ್ಚೇವು ಕನ್ನಡದ ದೀಪ’ ದೂರದರ್ಶನದಲ್ಲಿ ...

READ MORE

Related Books