ಲೇಖಕ ರಾಧಾಕೃಷ್ಣ ಕಲ್ಚಾರ್ ಅವರು ಯಕ್ಷಗಾನ ಪ್ರಸಂಗಗಳನ್ನಾಧರಿಸಿದ 140 ಪುರಾಣ ಪಾತ್ರಗಳ ಸ್ವಾತ್ಮ ನಿವೇದನೆಯ ಕೃತಿ ಪೀಠಿಕಾ ಪ್ರಕರಣ. ಸುಬ್ರಾಯ ಸಂಪಾಜೆ ಅವರು ಈ ಕೃತಿಗೆ ಮುನ್ನುಡಿಯ ಮಾತುಗಳನ್ನು ಬರೆದಿದ್ದಾರೆ. ಅವರು ಹೇಳುವಂತೆ, ಕಾಲಘಟ್ಟದ ಮುಂಚೂಣಿಯ ಅರ್ಥಧಾರಿಯಾಗಿರುವ ರಾಧಾಕೃಷ್ಣ ಕಲ್ಚಾರ್ ಅವರ "ಪೀಠಿಕಾ ಪ್ರಕರಣ"ವು ಒಂದು ಅಪೂರ್ವ ಕೃತಿಯಾಗಿದ್ದು ಯಕ್ಷಗಾನ ಅರ್ಥ ಸಾಹಿತ್ಯಕ್ಕೆ ಅನನ್ಯ ಕೊಡುಗೆಯಾಗಿದೆ. ಯಕ್ಷಗಾನ ರಂಗದಲ್ಲಿ ಮಹಾಕವಿ ಪ್ರತಿಭೆಯ ಹಲವು ಅರ್ಥಧಾರಿಗಳು ಆಗಿ ಹೋಗಿದ್ದಾರೆ. ಅಪೂರ್ವ ಪ್ರತಿಭಾ ಸಂಪನ್ನರು ಈಗಲೂ ಇದ್ದಾರೆ. ಆದರೆ ಇಲ್ಲಿಯ ವಾಚಿಕ ಸಂಪತ್ತು ಅಕ್ಷರ ರೂಪದಲ್ಲಿ ದಾಖಲಾಗದಿರುವುದು ಈ ಕ್ಷೇತ್ರದ ದೊಡ್ಡ ಕೊರತೆ. ಆಡಿ ಮರೆಯಾಗಬಹುದಾದ ವಾಙ್ಮಯವನ್ನು ಕಲ್ಚಾರ್ ಅವರು ಇಲ್ಲಿ ಬರೆಹ ರೂಪಕ್ಕಿಳಿಸಿ ಮಹದುಪಕಾರ ಮಾಡಿದ್ದಾರೆ. ಈ ಕೃತಿಯ ಮೂಲಕ ತನ್ನ ಬಾಳ್ವೆಗೂ ಅಮರತ್ವವನ್ನು ಕಾಣಿಸಿದ್ದಾರೆ ಎಂದಿದ್ದಾರೆ.
©2022 Book Brahma Private Limited.