ಪೆರಿನಿ ತಾಂಡವ

Author : ಕೆ.ಎನ್. ಗಣೇಶಯ್ಯ

Pages 144

₹ 130.00




Year of Publication: 2016
Published by: ಅಂಕಿತ ಪುಸ್ತಕ
Address: 53, ಗಾಂಧಿ ಬಜಾರ್‍ ಮುಖ್ಯರಸ್ತೆ, ಬಸವನಗುಡಿ , ಬೆಂಗಳೂರು -560004
Phone: 08026617100/ 26617755

Synopsys

ಕೃಷಿ ವಿಜ್ಞಾನಿ, ಮತ್ತು ಲೇಖಕರೂ ಆದ ಡಾ. ಕೆ.ಎನ್. ಗಣೇಶಯ್ಯ ಅವರ ಕಥಾ ಸಂಕಲನ’ ಪೆರಿನಿ ತಾಂಡವ’.

ಪೆರಿನಿ ಎನ್ನುವುದು ಕ್ರಿ.ಶ 12 ನೇ ಶತಮಾನದಲ್ಲಿ ದಕ್ಷಿಣ ಭಾರತದಲ್ಲಿ ರೂಢಿಯಲ್ಲಿದ್ದ ಒಂದು ಶಾಸ್ತ್ರೀಯ ನೃತ್ಯರೂಪ.  ಪುರುಷ – ಪೌರುಷವನ್ನು ನಾಟ್ಯಕಲೆಯ ಸೌಂದರ್ಯದಲ್ಲಿ ಸೆರೆಹಿಡಿಯುವುದೇ ಈ ನೃತ್ಯದ ವಿಶೇಷತೆಯಾಗಿದೆ.

ಪೌರುಷದ ಉಗ್ರತೆಯನ್ನುಕಲೆಯಾಗಿಸುವ, ಪುರುಷತ್ವದಲ್ಲಿ ನಯ-ಸೌಂದರ್ಯ ಹುಡುಕುವ ಹಾಗೂ ವೀರತ್ವವನ್ನು ರಸಭಾವಗಳಲ್ಲಿ ತುಂಬುವ ಈ ನೃತ್ಯ ಕಲೆಯ ಹೆಸರನ್ನು ಈ ಕೃತಿಯ ಶೀರ್ಷಿಯನ್ನಾಗಿ ಇಡಲಾಗಿದೆ. ಇಲ್ಲಿನ ಒಂದು ಕತೆಯಲ್ಲಿ ಈ ನೃತ್ಯವು ಪ್ರಮುಖ ಪಾತ್ರವಹಿಸಿರುವುದರಿಂದ ಈ ಕಥಾಸಂಕಲನದ ಶೀರ್ಷಿಕೆಯಲ್ಲಿ ಬದುಕಿನ ಸುಂದರ ನಡೆಗಳು ಹೇಗೆ ತಾಂಡವ ರೂಪ ಪಡೆಯುತ್ತವೆ ಎನ್ನುವುದಕ್ಕೆ ಈ ಕಥಾ ಸಂಕಲನ ಸಾಕ್ಷಿಯಾಗಿದೆ. ಇಲ್ಲಿರುವ ಭೋಗ ನಿರ್ಭಾಗ್ಯ, ಗೌರವಾರಾಧನೆ, ತಾಂಡವ ಶಿಲ್ಪ ಎಂಬ ಮೂರು ನೀಳ್ಗತೆಗಳು ಪ್ರೀತಿ, ಪ್ರೇಮ, ಗೌರವ, ಆರಾಧನೆಗಳ ಸುಂದರ ಅನುಭವಗಳ ಮತ್ತು ಉಗ್ರ ರೂಪ ತಾಳುವ ಸಾಧ್ಯತೆಗಳನ್ನು ತಿಳಿಸುವಂತದ್ದಾಗಿದೆ.

About the Author

ಕೆ.ಎನ್. ಗಣೇಶಯ್ಯ

ವೃತ್ತಿಯಿಂದ ಕೃಷಿ ವಿಜ್ಞಾನಿ ಆಗಿರುವ ಕೆ.ಎನ್. ಗಣೇಶಯ್ಯ ಅವರು ಮೂಲತಃ ಕೋಲಾರ ಜಿಲ್ಲೆಯವರು. ಕಳೆದ ೩೦ ವರ್ಷಗಳಿಂದ ತಳಿ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡಿರುವ ಅವರು  ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರು. ಪ್ರಾಣಿ ಮತ್ತು ಸಸ್ಯಗಳ ವರ್ತನೆಗೆ ಮೂಲಭೂತವಾದ ಜೀವವಿಕಾಸದ ತತ್ವಗಳನ್ನು ಅನ್ವೇಷಿಸುವುದು ಇವರ ಮತ್ತೊಂದು ಸಂಶೋಧನಾಸಕ್ತಿ. ಭಾರತದ ಪ್ರಮುಖ ಜೀವ ವೈವಿಧ್ಯ ತಾಣಗಳಲ್ಲಿನ ಸಸ್ಯಗಳ ಮತ್ತು ದೇಶದ ಜೀವ ಸಂಪತ್ತಿನ ಬಗ್ಗೆ ಇವರು ತಯಾರಿಸಿರುವ ಮಾಹಿತಿಯ ಖಜಾನೆಯ ಸಿ.ಡಿ.ಗಳು ಮತ್ತು ಅಂತರ್ಜಾಲ ಒಂದು ಅಪೂರ್ವ ಹೆಜ್ಜೆ. ಇನ್ನೂರಕ್ಕೂ ಹೆಚ್ಚು ವೈಜ್ಞಾನಿಕ ಪ್ರಬಂಧ ಬರೆದಿರುವ ಅವರು ಆರು ವೈಜ್ಞಾನಿಕ ಕೃತಿಗಳನ್ನು ...

READ MORE

Related Books