ಪಿಸು ಮಾತು

Author : ಅಕ್ಷತಾರಾಜ್ ಪೆರ್ಲ

₹ 110.00




Published by: ಸಾಹಿತ್ಯಾ ಪ್ರಕಾಶನ
Address: ಮಂಗಳೂರು

Synopsys

ಅಕ್ಷತಾರಾಜ್ ಪೆರ್ಲ ಅವರ ಅಂಕಣ ಬರಹಗಳ ಸಂಕಲನ ಪಿಸುಮಾತು. ಓಡುವ ಕಾಲದಲ್ಲಿರುವ ನಾವೆಲ್ಲರೂ ಲಗಾಮಿಲ್ಲದ ಕುದುರೆಗಳೇ, ಒಂದಲ್ಲ ಒಂದು ರೀತಿಯ ನಿತ್ಯ ಓಡಾಟಗಳ ನಡುವೆ ಎಷ್ಟೋ ವಿಷಯಗಳನ್ನು ಮರೆಯುತ್ತೇವೆ ಮತ್ತೂ ಕೆಲವನ್ನು ಮರೆತಂತೆ ನಟಿಸುತ್ತೇವೆ. ಕಾರಣ ! ನೆನಪುಗಳು ಹಿತವೆನಿಸದೆಂದು ಏನಲ್ಲ ಬದಲಾಗಿ ಆ ನೆನಪುಗಳಲ್ಲಿ ಕಳೆದುಹೋಗಿ ವಾಸ್ತವವನ್ನು ತಾತ್ಸಾರಿಸುತ್ತೇವೆಯೋ ಎಂಬ ಭಯವೇ ! ಅಥವಾ ನೆನಪುಗಳು ನೆನಪಾಗದಂತೆ ಒತ್ತಿ ಹಿಡಿಯುವ ಪರದಾಟವೇ! ಇವೆಲ್ಲಕ್ಕೂ ಮೂಲ ಕಾರಣ ಹಾಗೂ ಕರ್ತೃ ಮಾತ್ರ ಮನಸುಗಳು ಹೆಣೆಯುವ ಸಂಬಂಧ. ಇಂತಹ ಸಂಬಂಧಗಳೊಳಗಿನ ಬಾಂಧವ್ಯದ ಹುಡುಕಾಟದ ಎಳೆ ಎಳೆಯ ಸಿಕ್ಕನ್ನು ಬಿಡಿಸುವ ತಂತ್ರವನ್ನು ಪಿಸುಮಾತಿನಲ್ಲಿ ಹೇಳುವ ಪ್ರಯತ್ನವಿದು. ಕಿವಿಯಾನಿಸಿದರಷ್ಟೇ ಸಾಲದು, ಮುಕ್ತ ಮನದಿಂದ ಸ್ವೀಕರಿಸುವ ದೊಡ್ಡತನವೂ ಬೇಕು ಎಂಬುದಾಗಿ ಲೇಖಕಿ ಕೃತಿಯಲ್ಲಿ ಹೇಳಿದ್ದಾರೆ.

About the Author

ಅಕ್ಷತಾರಾಜ್ ಪೆರ್ಲ
(17 August 1990)

ಅಕ್ಷತಾರಾಜ್ ಪೆರ್ಲ ಅವರ ಕಾವ್ಯ ನಾಮ ಅಕ್ಷರ. ಇವರ ತಂದೆ ವೆಂಕಟೇಶ್ ಭಾಗ್ವತ್ ಹಾಗೂ ತಾಯಿ ರಾಜೇಶ್ವರಿ.ಹುಟ್ಟೂರು ಮೂಡಬಿದ್ರೆಯಾದರೂ, ಕಾಸರಗೋಡು ಜಿಲ್ಲೆಯ ಪೆರ್ಲದಲ್ಲಿ ವಾಸವಾಗಿದ್ದಾರೆ. ಸಾಹಿತ್ಯದಲ್ಲಿ ಪದವಿ ಹಾಗೂ ಹಿಂದಿ ಪ್ರವೀಣ ಪಡೆದಿರುವ ಇವರು ಕತೆ, ಕವಿತೆ, ನಾಟಕ, ಕಾದಂಬರಿ, ವೈಚಾರಿಕ ಲೇಖನ ಸೇರಿದಮತೆ ಅನೇಕ ಸಾಹಿತ್ಯ ಕೃಷಿಯನ್ನು ಮಾಡಿದವರು. ಕನ್ನಡ, ತುಳು, ಹವ್ಯಕ, ಅರೆಭಾಷೆ, ಹಿಂದಿ, ಇಂಗ್ಲಿಷ್ ಭಾಷೆಗಳನ್ನು ಬಲ್ಲ ಇವರು, ಮಂಗಳೂರು ಆಕಾಶವಾಣಿಯಲ್ಲಿ ನಿರೂಪಕಿಯಾಕಿ ಕಾರ್ಯನಿರ್ವಹಿಸುತ್ತಿದ್ದಾರೆ. ಕೃತಿಗಳು : ಸಂಚಿಯೊಳಗಿನ ಸಂಜೆಗಳು - ಕನ್ನಡ ಕವಿತೆ ಸಂಕಲನ, ಕಂದೀಲು - ಕನ್ನಡ ಕತಾ ಸಂಕಲನ,ಬೊಳ್ಳಿ ...

READ MORE

Related Books