ಪ್ಲಂ ನದಿಯ ತೀರದಲ್ಲಿ

Author : ಎಸ್. ಅನಂತನಾರಾಯಣ

Pages 240

₹ 170.00




Published by: ಅಂಕಿತ ಪುಸ್ತಕ
Address: #ಶ್ಯಾಮ್ ಸಿಂಗ್ ಕಾಂಪ್ಲೆಕ್ಸ್, ಗಾಂಧಿ ಬಜಾರ್ ಮುಖ್ಯ ರಸ್ತೆ, ಬಸವನಗುಡಿ ಬೆಂಗಳೂರು-560004

Synopsys

‘ಪ್ಲಂ ನದಿಯ ತೀರದಲ್ಲಿ’ ಕೃತಿಯು ಎಸ್. ಅನಂತನಾರಾಯಣ ಅವರ ಅನುವಾದಿತ ಕೃತಿ. ಲಾರಾ ಇಂಗಲ್ಸ್ ವೈಲ್ಡರ್ ಪುಟ್ಟ ಮನೆ ಸರಣಿ- 4ರ ಭಾಗವಾಗಿದೆ. ಕೃತಿಯ ಬೆನ್ನುಡಿಯಲ್ಲಿ, ಲಾರಾ ಇಂಗಲ್ಸ್ ವೈಲ್ಡರ್ (1867ರಲ್ಲಿ) ವಿಸ್ಕಾನ್ಸಿನ್ನಿನ ದೊಡ್ಡ ಕಾಡಿನ ಪುಟ್ಟ ಮನೆಯಲ್ಲಿ ಹುಟ್ಟಿದವಳು. ಕಾನ್ಸಾಸ್, ಮಿನ್ನೆಸೋಟ ಮತ್ತು ಡಕೋಟ ಪ್ರದೇಶಗಳಿಗೆ ವೈಲ್ಡರನ್ನು ಭೇಟಿಯಾಗಿ ಮದುವೆಯಾದವಳು. ತನ್ನ ಎಳೆಯ ಕಾಲದ ಅನುಭವಗಳನ್ನೇ ಆಧಾರವಾಗಿಟ್ಟುಕೊಂಡು ಆಕೆ ಎಂಟು ಕಾದಂಬರಿಗಳನ್ನು ಬರೆದಿದ್ದಾಳೆ. ಕಾಡಿನಲ್ಲಿ ಪುಟ್ಟ ದಿಮ್ಮಿಯ ಮನೆಯೊಂದರಲ್ಲಿ ಇದ್ದುಕೊಂಡು, ಸ್ವಯಂ ಪರಿಪೂರ್ಣವಾಗಿದ್ದ ಅವರ ಸಂಸಾರದ ಸರಸ ಸುಂದರ ಚಿತ್ರಣ ಇಲ್ಲಿದೆ. ನೈಜ ಹಿನ್ನೆಲೆ, ಸೂಕ್ಷ್ಮವೇದಿಯಾದ ಚಿತ್ರಣ, ಸತ್ಯಪ್ರಿಯತೆ ಮತ್ತು ಸಮರ್ಥ ಸ್ವಾತಂತ್ಯ್ರ ಪ್ರಿಯತೆ ಈ ಗುಣಗಳೆಲ್ಲ ಇರುವ ಈ ಕಾದಂಬರಿಗಳು ಅಮೆರಿಕನ್ ಕಾದಂಬರಿಗಳಲ್ಲಿ ಉತ್ತಮ ಸ್ಥಾನವನ್ನು ಪಡೆಯಲು ಕಾರಣವಾಗಿವೆ ಎಂದು ನ್ಯೂಯಾರ್ಕ್ ಟೈಂಸ್ ಹೊಗಳಿವೆ. ಅಮೆರಿಕದ ಜನರ ಬದುಕಿನ ನೈಜ್ಯ ಚಿತ್ರಣ ಈ ಕಾದಂಬರಿಯಲ್ಲಿ ಮೂಡಿಬಂದಿದೆ. ಗಾರ್ತ್ ವಿಲಿಯಂಸ್ ಈ ಎಲ್ಲ ಕಾದಂಬರಿಗಳಿಗೂ ವಿಶೇಷವಾದ ಚಿತ್ರಗಳನ್ನು ರಚಿಸಿಕೊಟ್ಟಿದ್ದಾರೆ. ಲವಲವಿಕೆಯ ಕಥನಗಾರಿಕೆಯಿಂದ ಮನಸೆಳೆಯುವ ಲಾರಾ ಇಂಗಲ್ಸ್ ವೈಲ್ಡರ್ ಅವಳ ಈ ಕಥಾಸರಣಿಯ ಓದು ನಿಜಕ್ಕೂ ಚೇತೋಹಾರಿಯಾದುದು ಎಂಬುದನ್ನು ವಿಶ್ಲೇಷಿಸಿದ್ದಾರೆ.

About the Author

ಎಸ್. ಅನಂತನಾರಾಯಣ
(30 November 1925 - 25 August 1992)

ಎಸ್. ಅನಂತನಾರಾಯಣ  ಕನ್ನಡದ ಪ್ರಗತಿಶೀಲ ಬರಹಗಾರರಲ್ಲಿ ಪ್ರಮುಖರೆನಿಸಿದ್ದಾರೆ. ಪ್ರೊ. ಅನಂತ ನಾರಾಯಣ ಅವರು ನವೆಂಬರ್ 30, 1925 ರಲ್ಲಿ ಮೈಸೂರಿನಲ್ಲಿ ಜನಿಸಿದರು. ತಂದೆ ಆರ್. ಸದಾಶಿವಯ್ಯನವರು ಮತ್ತು ತಾಯಿ ರಂಗಮ್ಮನವರು.  ಇಂಗ್ಲಿಷ್ ಸಾಹಿತ್ಯದಲ್ಲಿ ಬಿ.ಎ. (ಆನರ್ಸ್) ಮತ್ತು ಎಂ.ಎ. ಪದವಿಗಳನ್ನು ಪ್ರಪ್ರಥಮ ಶ್ರೇಣಿಯಲ್ಲಿ ಚಿನ್ನದ ಪದಕಗಳೊಂದಿಗೆ ಗಳಿಸಿದರು. ಅವರು ಮೈಸೂರು ವಿಶ್ವವಿದ್ಯಾನಿಲಯದ ಹಲವಾರು ಕಾಲೇಜುಗಳಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ, ಸಂಗೀತ, ನಾಟಕ ಕಾಲೇಜಿನಲ್ಲಿ ಮೂರು ವರ್ಷ ನಾಟಕ ಶಾಸ್ತ್ರದ ಬೋಧಕರಾಗಿ, ನಾಟಕ ವಿಭಾಗದ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸಿದ್ಧಾರೆ.  ನವೋದಯ ಕಾಲದ ಬರಹಗಾರರು ಸ್ವಾತಂತ್ರ್ಯ ಚಳವಳಿಯಲ್ಲಿ ಪಾಲ್ಗೊಂಡಿದ್ದು ಸಹಜ ಕ್ರಿಯೆ. ...

READ MORE

Related Books