ಪೂರ್ವಾಪರ

Author : ಯು.ಆರ್. ಅನಂತಮೂರ್ತಿ

Pages 332

₹ 225.00

Buy Now


Year of Publication: 2011
Published by: ವಸಂತ ಪ್ರಕಾಶನ
Address: 360, 10 ನೇ ಬಿ ಮುಖ್ಯ ರಸ್ತೆ, ಕಾಸ್ಮೋಪಾಲಿಟನ್ ಕ್ಲಬ್ ಎದುರು, ಜಯನಗರ ಪೂರ್ವ, ಜಯನಗರ, ಬೆಂಗಳೂರು, ಕರ್ನಾಟಕ 560011
Phone: 080 2244 3996

Synopsys

’ಪೂರ್ವಾಪರ’ ಲೇಖನಗಳನ್ನು ರೂಢಿಯಂತೆ ಸಾಹಿತ್ಯಕ-ಸಾಂಸ್ಕೃತಿಕ-ರಾಜಕೀಯ- ಸಾಮಾಜಿಕ-ತಾತ್ವಿಕ ಎಂದು ವಿಂಗಡಿಸಲು ಸಾಧ್ಯವಿಲ್ಲ.  ಬದುಕಿನ ಎಲ್ಲ ಸಂಗತಿಗಳನ್ನು ಗ್ರಹಿಸಲು ಹೋಗುವ ಸಾಹಸಗಳು. ಮೊದಲ ಲೇಖನದಲ್ಲಯೇ ಮೌನಕಣಿವೆ ಮತ್ತು ಚರಾಚರ ಜಗತ್ತಿನ ನಡುವೆ ಇದ್ದಿರಬಹುದಾದ ಸಂಬಂಧಜಾಲದ ಪ್ರಸ್ತಾಪವಿದೆ. ಸಂಕೀರ್ಣ ಸಂಬಂಧಜಾಲದ ಈ ಪೂರ್ವಾಪರ ಪ್ರಜ್ಞೆ ಲೇಖಕರ ಗಹಿಕೆಯಲ್ಲಿ ಅಂತರ್ಗತವಾಗಿದೆ. ಅದು ಈ ಸಂಕಲನದ ಎಲ್ಲ  ಲೇಖನಗಳಿಗೆ ಆಧಾರ ಶ್ರುತಿಯಾಗಿದೆ.

 ವಸ್ತುನಿಷ್ಟ ವಿಮರ್ಶೆಯೆಂಬ ಭ್ರಮೆಯಾಗಲಿ ದರ್ಪವಾಗಲಿ ಇಲ್ಲಿ ಕಾಣಿಸುವುದಿಲ್ಲ. ಓದುಗರನ್ನು ಲೇಖಕ ಒಳಗೊಳಿಸಿಕೊಳ್ಳುತ್ತಲೇ ಹೋಗುವುದರಿಂದ ವ್ಯಕ್ತಿನಿಷ್ಠೆಯ ಅಹಂಕಾರ ವಿಕಾರಗಳೂ ಗೋಚರಿಸುವುದಿಲ್ಲ. ಈ ಬರಹಗಳ ನಿಷ್ಠೆಯು ಸಮೂಹ ನಿಷ್ಠೆ, ಸಮಾಜ ನಿಷ್ಠೆ, ಸಮತ್ವ ನಿಷ್ಠೆಯಾಗಿದೆ. ವಿವಿಧ ಸಂಗತಿಗಳ ಬಗ್ಗೆ ಜತೆಗಾರ ಸಹೃದಯ ಸಾಮಾಜಿಕರೊಡನೆ ಚರ್ಚಿಸಿಕೊಳ್ಳುತ್ತ ಧೀಮಂತಿಕೆಯಿಂದ ದಾಖಲಿಸುತ್ತ ಹೋಗುತ್ತವೆ. ವಿಮರ್ಶಾತ್ಮಕ-ಸೃಜನಾತ್ಮಕವೆಂಬ ವಿಂಗಡಣೆಯನ್ನು ಮೀರಿ ನಿಲ್ಲುವ ಬರಹಗಳಿವು. ಪೂರ್ವ ಪಶ್ಚಿಮ ಸಂಸ್ಕೃತಿಗಳು ಒಂದಕ್ಕೊಂದು ಸಂಧಿಸಿ ಕಡಲು ಕಡೆದಂತೆ ಅಲ್ಲೋಲ ಕಲ್ಲೋಲ ಎದ್ದ ಅಸಾಧಾರಣ ಶತಮಾನ. ಇಂತಹ ಶತಮಾನದಿಂದ ಹರಳುಗಟ್ಟಿಕೊಂಡ ಅನಂತಮೂರ್ತಿಯವರ ಈ ಅನುಭವ ಪುಸ್ತಕ .

ಲೇಖಕರ ನಾಲ್ಕನೆಯ ವಿಮರ್ಶಾ ಸಂಕಲನ. ನಮ್ಮ ಸಮಾಜ, ಸಂಸ್ಕೃತಿ, ಸಾಹಿತ್ಯಗಳನ್ನು ಅರ್ಥೈಸಿಕೊಳ್ಳಲು ಅನಂತಮೂರ್ತಿ ಈ ಕೃತಿ ಸಹಾಯಕವಾಗಿದೆ.

About the Author

ಯು.ಆರ್. ಅನಂತಮೂರ್ತಿ
(21 December 1932 - 22 August 2014)

ಕಥೆ-ಕಾದಂಬರಿ ಮತ್ತು ವೈಚಾರಿಕ ಚಿಂತನೆಗಳ ಮೂಲಕ ಕನ್ನಡ- ಭಾರತದ ಸಾಹಿತ್ಯ-ಸಾಂಸ್ಕೃತಿಕ ಚಿಂತನೆಯನ್ನು ಶ್ರೀಮಂತಗೊಳಿಸಿದವರು ಯು.ಆರ್. ಅನಂತಮೂರ್ತಿ. ತಂದೆ ಉಡುಪಿ ರಾಜಗೋಪಾಲಾಚಾರ್ಯ ತಾಯಿ ಸತ್ಯಮ್ಮ. ತೀರ್ಥಹಳ್ಳಿಯ ಮೇಳಿಗೆಯಲ್ಲಿ 1932ರ ಡಿಸೆಂಬರ್ 21 ಜನಿಸಿದರು. ದೂರ್ವಾಸಪುರದಲ್ಲಿ ಸಾಂಪ್ರದಾಯಿಕ ಪದ್ಧತಿಯಲ್ಲಿ ಸಂಸ್ಕೃತ ಕಲಿತು ಶಾಲಾ ಶಿಕ್ಷಣವನ್ನು ತೀರ್ಥಹಳ್ಳಿಯಲ್ಲಿ ಪಡೆದು ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಎಂ.ಎ. ಪದವಿ ಗಳಿಸಿದರು. ಬರ್ಮಿಂಗ್ ಹ್ಯಾಂ ವಿಶ್ವವಿದ್ಯಾಲಯದಲ್ಲಿ ಪಿಎಚ್ ಡಿ (1966) ಪದವಿ ಪಡೆದರು. ಹಾಸನದ ಕಾಲೇಜಿನಲ್ಲಿ ಅಧ್ಯಾಪಕ (1956) ರಾದ ಇವರು ಮೈಸೂರು ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ನಂತರ ಕೇರಳದ ಮಹಾತ್ಮಗಾಂಧಿ ವಿಶ್ವವಿದ್ಯಾಲಯದ ಕುಲಪತಿ (1987-91) ಗಳಾಗಿ ...

READ MORE

Related Books