ಪೋಸ್ಟ್ ಮಾಡರ್ನಿಸಮ್

Author : ಬಿ.ಆರ್‌. ಮಂಜುನಾಥ್‌

Pages 55

₹ 40.00




Year of Publication: 2013
Published by: ಅವಿಷ್ಕಾರ ಪ್ರಗತಿಪರ ಸಾಂಸ್ಕೃತಿಕ ವೇದಿಕೆ
Address: ನಂ.88, 16ನೇ ಅಡ್ಡರಸ್ತೆ, ಮಾರ್ಗೋಸಾ ರಸ್ತೆ, ಮಲ್ಲೇಶ್ವರಂ, ಬೆಂಗಳೂರು- 560055

Synopsys

‘ಪೋಸ್ಟ್ ಮಾಡರ್ನಿಸಮ್’ ಆಧುನಿಕೋತ್ತರ ಒಂದು ವಿಮರ್ಶೆ ' -ಹೋರಾಟಗಾರ ಮಾಣಿಕ್ ಮುಖರ್ಜಿ ಅವರ ಕೃತಿಯನ್ನು ಬಿ.ಆರ್. ಮಂಜುನಾಥ್ ಸಂಪಾದಿಸಿ ಪ್ರಕಟಿಸಿದ್ದಾರೆ. ಇಲ್ಲಿ ಆಧುನಿಕೋತ್ತರ ವಿಚಾರಗಳ ಕುರಿತಾದ ಅರ್ಥ ಪೂರ್ಣ ವಿಮರ್ಶೆಗಳಿವೆ. ಹೋರಾಟಗಾರ ಮಾಣಿಕ್ ಮುಖರ್ಜಿಯವರು ಆಧುನಿಕೋತ್ತರ ವಿಚಾರಗಳ ಕುರಿತಾಗಿ ತಮ್ಮ ಅನುಭವಗಳೊಂದಿಗೆ ಮಹತ್ವದ ವಿವರಗಳನ್ನು ಈ ಕೃತಿಯಲ್ಲಿ ಅತ್ಯಂತ ಸರಳವಾಗಿ ಕಟ್ಟಿಕೊಟ್ಟಿದ್ದಾರೆ. ಬಿ.ಆರ್. ಮಂಜುನಾಥ್ ಅವರು ಮುಲ ಕೃತಿಯಷ್ಟೇ ಸಮರ್ಥವಾಗಿ ಕನ್ನಡೀಕರಿಸಿದ್ದಾರೆ.

About the Author

ಬಿ.ಆರ್‌. ಮಂಜುನಾಥ್‌
(21 December 1940)

ಲೇಖಕ ಬಿ. ಆರ್‌. ಮಂಜುನಾಥ್ ಅವರು ತುರ್ತುಪರಿಸ್ಥಿತಿಯ ನಂತರದ ದಿನಗಳಲ್ಲಿ ಎಡಪಂಥೀಯ ವಿದ್ಯಾರ್ಥಿ ಚಳುವಳಿಗೆ, ಸಾಂಸ್ಕೃತಿಕ ಆಂದೋಲನಕ್ಕೆ ಧುಮುಕಿದವರು. ಜಾನ್ ರೀಡ್ ಅವರ 'ಟೆನ್ ಡೇಸ್ ದಟ್ ಶುಕ್ ದ ವರ್ಲ್‌, ಸಮಾಜವಾದಿ ವೈದ್ಯಕೀಯದ ಕುರಿತಾದ 'ರೆಡ್ ಮೆಡಿಸಿನ್', ಇ.ಎಚ್.ಕಾರ್‌ ಅವರ 'ವಾಟ್ ಈಸ್ ಹಿಸ್ಟರಿ' ಅವರ ಅನುವಾದಿತ ಕೃತಿಗಳಲ್ಲಿ ಕೆಲವು. ವಿವಿಧ ಸಾಂಸ್ಕೃತಿಕ, ವಿದ್ಯಾರ್ಥಿ-ಯುವಜನ ಪತ್ರಿಕೆಗಳ ಸಂಪಾದಕರಾಗಿದ್ದ ಅವರು ಭಗತ್ ಸಿಂಗ್‌ರ ಕುರಿತು ಪುಸ್ತಕಗಳನ್ನು ಬರೆದಿರುವುದಲ್ಲದೆ ಅನೇಕ ನಾಟಕ, ಬೀದಿ ನಾಟಕಗಳನ್ನು ಸಹ ರಚಿಸಿ ಆಡಿಸಿದ್ದಾರೆ. ಪ್ರಸ್ತುತ ಸಮಕಾಲೀನ ಸಾಮಾಜಿಕ ಸಾಂಸ್ಕೃತಿಕ ವೇದಿಕೆಯ ಅಧ್ಯಕ್ಷರಾಗಿದ್ದು ವಿವಿಧ ಜನಪರ ಆಂದೋಲನಗಳಲ್ಲಿ ...

READ MORE

Related Books