ಪೌರಾಣಿಕ ಪಾತ್ರಗಳು

Author : ಆರ್. ಎನ್. ರಾವ್

Pages 514

₹ 400.00




Year of Publication: 2021
Published by: ಶ್ರೀಮತಿ ವಿಜಯಲಕ್ಷ್ಮೀ
Address: #35, 7ನೇಮುಖ್ಯ ರಸ್ತೆ, ಕುವೆಂಪುನಗರ, ಕನಕಪುರ ರಸ್ತೆ, ದೊಡ್ಡ ಕಲ್ಲಸಂದ್ರ ಬೆಂಗಳೂರು-560062
Phone: 9972852525

Synopsys

ಆರ್. ಎನ್. ರಾವ್ ಅವರ ‘ಪೌರಾಣಿಕ ಪಾತ್ರಗಳು’ ಕೃತಿಯು ಪುರಾಣಗಳ ಕುರಿತ ಲೇಖನ ಸಂಕಲನವಾಗಿದೆ. ಈ ಕೃತಿಯಲ್ಲಿ ದೇವ- ದಾನವ-ರಾಕ್ಷಸರ ಸೃಷ್ಟಿ, ಪ್ರಳಯ , ಮನ್ವಂತರ, ಕಾಲಮಾನ, ರಾಮಾಯಣಾದಿ ಗ್ರಂಥಗಳ ವ್ಯಕ್ತಿಗಳ ಮತ್ತು ಪ್ರಸಂಗಗಳ ವಿಸ್ತೃತ ಪರಿಚಯವನ್ನು ಕೊಡಲಾಗಿದೆ. ನಮ್ಮ ಪ್ರಾಚೀನ ಸಾಹಿತ್ಯದ ಸಾರ ಸರ್ವಸ್ವವೇ ಈ ಕೃತಿಯಲ್ಲಿದೆ. ಲೇಖಕರ ಶೈಲಿಯು ಸರಳವಾಗಿ, ಸುಲಲಿತವಾಗಿದೆ. ಪ್ರತಿ ಮನೆ, ಶಾಲೆ, ಗ್ರಂಥ ಭಂಡಾರಗಳಲ್ಲಿಸಂಗ್ರಹಿಸಲು ಅರ್ಹವಾದ ಕೃತಿ ಇದು. 

About the Author

ಆರ್. ಎನ್. ರಾವ್

ಹಿರಿಯ ಲೇಖಕ ಆರ್. ಎನ್. ರಾವ್ ಅವರು ಮೂಲತಃ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ತಿರುಮಲಾಪುರದವರು. ಕೇಂದ್ರ ಸರಕಾರದ ಗೂಢಚರ್ಯೆ ಸಂಸ್ಥೆಯಲ್ಲಿ 35 ವರ್ಷ ಕಾಲ ಸೇವೆ ಸಲ್ಲಿಸಿ 2004 ರಲ್ಲಿ ನಿವೃತ್ತರಾದರು. ಕೃತಿಗಳು ; ಪೌರಾಣಿಕ ಪಾತ್ರಗಳು ಪ್ರಶಸ್ತಿ-ಪುರಸ್ಕಾರಗಳು: ಇಂಡಿಯನ್ ಪೊಲೀಸ್ ಮೆಡಲ್ ಗೌರವ (2000), ಮುಲಕನಾಡು ಮಹಾಸಂಘ ಗೌರವ (2014) ...

READ MORE

Related Books