ಪ್ರಾಚೀನ ಭಾರತದಲ್ಲಿ ಚಿಕಿತ್ಸಾ ವಿಜ್ಞಾನ

Author : ಜಿ. ಕುಮಾರಪ್ಪ

Pages 104

₹ 45.00




Year of Publication: 2011
Published by: ನವಕರ್ನಾಟಕ ಪ್ರಕಾಶನ
Address: ಎಂಬೆಸಿ ಸೆಂಟರ್, ನಂ.11, ಕ್ರೆಸೆಂಟ್ ರಸ್ತೆ, ಬೆಂಗಳೂರು-560 001
Phone: 08022161900

Synopsys

ಪ್ರಾಚೀನ ಭಾರತದಲ್ಲಿ ಚಿಕಿತ್ಸಾ ವಿಜ್ಞಾನ ಕುರಿತು ಮಾಹಿತಿ ನೀಡುವ ಕೃತಿ ಇದು.  ಪ್ರಸ್ತುತ ಕೃತಿಯು ಪ್ರಾಚೀನ ಭಾರತದ ಸಮುದಾಯಗಳಲ್ಲಿ ಜನರು ನಡೆಸುತ್ತಿದ್ದ ಚಿಕಿತ್ಸಾ ವಿಧಾನ ಹಾಗೂ ಬಗೆಗಳ ಕುರಿತು ಮಾಹಿತಿ ನೀಡುತ್ತದೆ. ದೇವಿಪ್ರಸಾದ್ ಚಟ್ಟೋಪಾಧ್ಯಾಯ ಅವರು ಈ ಕೃತಿಯನ್ನು ರಚಿಸಿದ್ದಾರೆ. ಜಿ. ಕುಮಾರಪ್ಪ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ.

About the Author

ಜಿ. ಕುಮಾರಪ್ಪ - 07 June 2020)

ಕನ್ನಡ ಸಾಹಿತ್ಯ ವಲಯದಲ್ಲಿ ತನ್ನದೇ ಛಾಪು ಮೂಡಿಸಿದ್ದ ಬರಹಗಾರ ಅನುವಾದಕ ಜಿ. ಕುಮಾರಪ್ಪ ಅವರು ಚಿತ್ರದುರ್ಗ ಜಿಲ್ಲೆ, ಹೊಳಲ್ಕೆರೆ ತಾಲ್ಲೂಕಿನ ಬಸಾಪುರ ಗ್ರಾಮದವರು. ಕೋಲ್ಕತ್ತಾದ ಬಂಗಾಲಿ ನ್ಯಾಷನಲ್‌ ಗ್ರಂಥಾಲಯದ ಕನ್ನಡ ವಿಭಾಗದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದ್ದ ಇವರು ಸಾಹಿತ್ಯ ಕೃಷಿಯಲ್ಲಿಯೂ ತೊಡಗಿಕೊಂಡಿದ್ದವರು.  ಧೀಮಂತ, ಜಪಾನಿ ಹೈಕಗಳು ಕೃತಿಗಳನ್ನು ರಚಿಸಿರುವ ಇವರು ಬಂಗಾಲಿಯ ಹಲವಾರು ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಮಾತೆಯರು ಮಾನ್ಯರಾಗಿದ್ದಾಗ, ಸಂಶೋಧನೆಯ ಹಾದಿ, ಪ್ರತಿರೋಧ ಮುಂತಾದವು ಇವರು ಅನುವಾದಿಸಿರುವ ಪ್ರಮುಖ ಕೃತಿಗಳು.  ...

READ MORE

Reviews

ಹೊಸತು- ನವೆಂಬರ್‌ -2005

ಸಾಮಾಜಿಕ ತತ್ವಜ್ಞಾನಿಗಳಲ್ಲಿ ದೇವಿಪ್ರಸಾದ್‌ ಚಟ್ಟೋಪಾಧ್ಯಾಯ ಬಹಳ ದೊಡ್ಡ ಹೆಸರು. ಪ್ರಾಚೀನ ಶಾಸ್ತ್ರ ಗ್ರಂಥಗಳ ಪ್ರಾಮುಖ್ಯತೆ ಮತ್ತು ಮಿತಿಗಳನ್ನು ಅವರ ಹಲವಾರು ಕೃತಿಗಳು ಗಂಭೀರವಾಗಿ ವಿಶ್ಲೇಷಿಸು ತ್ತವೆ. ಈ ಪುಸ್ತಕದಲ್ಲಿಯೂ ಪ್ರಾಚೀನ ಭಾರತದ ಚಿಕಿತ್ಸಾ ವಿಧಾನಗಳ ಬಗ್ಗೆ ಸಾಕಷ್ಟು ಮಾಹಿತಿಗಳು ದೊರೆಯುತ್ತವೆ. ಭಾರತೀಯ ಸಂಸ್ಕೃತಿಯು ಸಂಪೂರ್ಣವಾಗಿ ಆಧ್ಯಾತ್ಮಿಕ ಸಾಧನೆಯಿಂದ ಪ್ರೇರಿತವಾದದ್ದು, ನಮ್ಮ ಪ್ರಾಚೀನರಿಗೆ ವಿಜ್ಞಾನ ಮತ್ತು ವೈಜ್ಞಾನಿಕ ಸತ್ಯಗಳನ್ನು ತಿಳಿಯುವ ಆಸಕ್ತಿ ಇರಲಿಲ್ಲ ಎಂಬ ನಂಬಿಕೆ ಸಾಕಷ್ಟು ಜನರಲ್ಲಿದೆ. ಆದರೆ ಆ ಕೃತಿಯನ್ನು ಓದಿದಾಗ ಪ್ರಾಚೀನರು ಹೊಂದಿದ್ದ ವೈಜ್ಞಾನಿಕ ಮನೋಭಾವ ಸ್ಪಷ್ಟ ವಾಗುತ್ತದೆ. ಈ ಪುಸ್ತಕದಲ್ಲಿ ಹಲವಾರು ಲೇಖನಗಳಿದ್ದು ಚರಕ ಸಂಹಿತೆ ಮತ್ತು ಸುಶ್ರುತ ಸಂಹಿತೆ ಗ್ರಂಥಗಳನ್ನು ವಿವರವಾಗಿ ವಿಶ್ಲೇಷಿಸಲಾಗಿದೆ. ಲೇಖಕರು ವಿಜ್ಞಾನದ ಮಾಹಿತಿ ಗಳನ್ನು ಕೊಡುವುದರ ಜೊತೆಯಲ್ಲಿಯೇ ಸನ್ನಿವೇಶದ ಸಾಮಾಜಿಕ ಸಂದರ್ಭಗಳನ್ನು ವೈಜ್ಞಾನಿಕವಾಗಿ ಪರಿಶೀಲಿಸಿದ್ದಾರೆ. ಪ್ರಾಚೀನ ಭಾರತದಲ್ಲಿ ವಿಜ್ಞಾನದ ಅವನತಿ ಎಂಬ ಪ್ರಫುಲ್ಲಚಂದ್ರ ರಾಯ್ ಅವರ ಲೇಖನವನ್ನು ಅನುಬಂಧವಾಗಿ ಕೊಟ್ಟಿರುವುದು ಪುಸ್ತಕದ ಮಹತ್ವವನ್ನು ಹೆಚ್ಚಿಸಿದೆ. ಸುಶ್ರುತ ಸಂಹಿತೆಯಲ್ಲಿ ವಿವರಿಸಿರುವ ಶಸ್ತ್ರ ಚಿಕಿತ್ಸೆಯ ವಿವರಗಳ ಮತ್ತು ಅಲ್ಲಿನ ಉಪಕರಣಗಳ ಚಿತ್ರಗಳನ್ನು ಕೊಟ್ಟಿರುವುದು ಸಹ ಉಪಯುಕ್ತವಾಗಿದೆ. ಮೂಲ ಬಂಗಾಳಿ ಭಾಷೆಯ ಕೃತಿಯನ್ನು ಜಿ. ಕುಮಾರಪ್ಪ ಅವರು ಸಮರ್ಥವಾಗಿ ಅನುವಾದಿಸಿದ್ದಾರೆ.

Related Books