ಪ್ರಚಲಿತ ರಾಜಕೀಯ ಎತ್ತ ಸಾಗಿದೆ?

Author : ಎಚ್. ಎಸ್. ದೊರೆಸ್ವಾಮಿ

Pages 120

₹ 75.00




Year of Publication: 2016
Published by: ಕರ್ನಾಟಕ ಕೈಗಾರಿಕಾ ಮತ್ತು ವಾಣಿಜ್ಯೋದ್ಯಮ ಕನ್ನಡ ಸಂಘಗಳ ಒಕ್ಕೂಟ
Address: #170, 2ನೇ ಅಡ್ಡರಸ್ತೆ, 11ನೇ ಮುಖ್ಯರಸ್ತೆ, ಕಾಳಪ್ಪ ಬ್ಲಾಕ್, ಶ್ರೀನಗರ, ಬೆಂಗಳೂರು-560050
Phone: 9880996484

Synopsys

ಎಚ್.ಎಸ್. ದೊರೆಸ್ವಾಮಿ ಅವರು ಜ್ವಾಲಾಮುಖಿ ವಾರ ಪತ್ರಿಕೆಗೆ ಬರೆದ ಅಂಕಣಗಳೂ ಸೇರಿದಂತೆ ಪ್ರಚಲಿತ ವಿದ್ಯಮಾನಗಳ ಕುರಿತು ವಿವಿಧ ಸಂದರ್ಭಗಳಲ್ಲಿ ಬರೆದ ಲೇಖನಗಳ ಸಂಕಲನ-ಪ್ರಚಲಿತ ರಾಜಕೀಯ ಎತ್ತ ಸಾಗಿದೆ?.

ಕೃತಿಯ ಮುನ್ನುಡಿಯಲ್ಲಿ ಚಂದ್ರಶೇಖರ ಪಾಟೀಲ (ಚಂಪಾ) ಅವರು ಬರೆಯುತ್ತಾ, ‘ಪ್ರಚಲಿತ ಶಬ್ದ ಬಹಳ ಮುಖ್ಯ. ನಮ್ಮ ಕಣ್ಣೆದುರಿಗೇ ಸಂಭವಿಸುತ್ತಿರುವ ಸುಡು ಸುಡು ವರ್ತಮಾನವನ್ನು ನಾವು ಅರ್ಥಮಾಡಿಕೊಳ್ಳದಿದ್ದರೆ, ಅದಕ್ಕೆ ತಕ್ಕುದಾಗಿ ಮಾತು ಬರಹ ಕ್ರಿಯೆಗಳ ಮೂಲಕ ಸ್ಪಂದಿಸದಿದ್ದರೆ ಭವಿಷ್ಯದ ಕನಸು ಕಾಣಲಿಕ್ಕಾದರೂ ಹೇಗೆ ಸಾಧ್ಯ? ಹಿರಿಯರಾದ ದೊರೆಸ್ವಾಮಿಯವರ ಒಳನೋಟಗಳಲ್ಲಿ ತತ್ವಜ್ಞಾನವಿದೆ; ದರ್ಶನವಿದೆ; ಕ್ರಾಂತಿಯ ಸಂದೇಶವಿದೆ; ಅಪಾರ ಅನುಭವದ ಹಿನ್ನೆಲೆಯ ಅಪರೂಪದ ಕಾಣ್ಕೆಗಳಿವೆ’ ಎನ್ನುವ ಮೂಲಕ ಲೇಖನಗಳ ಮಾನವೀಯ ಮೌಲ್ಯವನ್ನು ವಿವರಿಸಿದ್ದಾರೆ.

About the Author

ಎಚ್. ಎಸ್. ದೊರೆಸ್ವಾಮಿ
(10 April 1918)

ಹಿರಿಯ ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿಯವರ ಪೂರ್ಣ ಹೆಸರು ಹಾರೋಹಳ್ಳಿ ಶ್ರೀನಿವಾಸಯ್ಯ ದೋರೆಸ್ವಾಮಿ. ಹಾರೋಹಳ್ಳಿಯಲ್ಲಿ ಜನಿಸಿದ ದೊರೆಸ್ವಾಮಿ ತಮ್ಮ 5ನೇ ವಯಸ್ಸಿಗೆ ತಂದೆಯನ್ನು ಕಳೆದುಕೊಂಡರು. ಆ ಬಳಿಕ ಅಜ್ಜನ ಬಳಿ ಬೆಳೆದ ಅವರು ಹಾರೋಹಳ್ಳಿಯಲ್ಲೇ ಪ್ರಾಥಮಿಕ ಶಿಕ್ಷಣ ಪೂರ್ಣಗೊಳಿಸಿ ಮುಂದಿನ ವಿದ್ಯಾಭ್ಯಾಸಕ್ಕಾಗಿ ಬೆಂಗಳೂರಿಗೆ ಬಂದರು. ಮಹಾತ್ಮ ಗಾಂಧಿ ‘ಮೈ ಅರ್ಲಿ ಲೈಫ್’ ಪುಸ್ತಕವನ್ನು ಓದಿ ಅದರಿಂದ ಪ್ರಭಾವಿತರಾದ ದೊರೆಸ್ವಾಮಿ ಭಾರತದ ಸ್ವಾತಂತ್ರ್ಯ ಚಳುವಳಿಯಲ್ಲಿ ಸೇರಿದರು. ಕಾಲೇಜು ಶಿಕ್ಷಣದ ಜೊತೆಗೆ ಸ್ವತಂತ್ರ್ಯ ಹೋರಾಟದಲ್ಲೂ ಭಾಗಿಯಾಗುತ್ತಿದ್ದ ದೊರೆಸ್ವಾಮಿ 1942ರ ಹೊತ್ತಿಗೆ ತಮ್ಮ ಬಿ.ಎಸ್.ಸಿ ಪೂರ್ಣಗೊಳಿಸಿ ಉಪನ್ಯಾಸಕ ವೃತ್ತಿ ಆರಂಭಿಸಿದರು. ಅದೇ ವರ್ಷ ...

READ MORE

Related Books