ಪ್ರಚಲಿತ ಶಿಕ್ಷಣ ಹಾಗೂ ಸವಾಲುಗಳು

Author : ಎಸ್‌. ಬಿ. ಜೋಗುರ

Pages 108

₹ 50.00




Year of Publication: 2011
Published by: ಶೀತಲ್ ನಾಯಕ
Address: 1ನೇಮುಖ್ಯ ರಸ್ತೆ, 2ನೇ ಅಡ್ಡ ರಸ್ತೆ, ಶ್ರೀನಗರ ಧಾರವಾಡ
Phone: 9845423536

Synopsys

‘ಪ್ರಚಲಿತ ಶಿಕ್ಷಣ ಹಾಗೂ ಸವಾಲುಗಳು’ ಲೇಖಕ ಎಸ್.ಬಿ.ಜೋಗುರ ಅವರ ಲೇಖನ ಸಂಕಲನ. ಶಿಕ್ಷಣದ ಮೂಲ ಆಶಯ ಡಾ. ರಾಧಾಕೃಷ್ಣನ್ ಅವರಂತಹ ಚಿಂತಕರು ಹೇಳುವ ಹಾಗೆ , ಮಕ್ಕಳನ್ನು ಮಾನವರನ್ನಾಗಿ ಮಾಡಿ, ನಾಗರಿಕರನ್ನಾಗಿ ಮಾಡಿ ಇತರರೊಂದಿಗೆ ಘನತೆ ಗೌರವದಿಂದ ವರ್ತಿಸಲು ನೆರವಾಗುವುದೇ ಶಿಕ್ಷಣ. ಸದೃಢವಾದ ಮನಸನ್ನು ರೂಪಿಸುವುದೇ ಶಿಕ್ಷಣ. ಈ ದಿಶೆಯಲ್ಲಿ ನೆರವಾಗುವ ನಿಟ್ಟಿನಲ್ಲಿ ಸರಕಾರ ಕೋಟಿಗಟ್ಟಲೆ ಹಣವನ್ನು ವ್ಯಯಮಾಡುತ್ತದೆ. ಅದಾಗ್ಯೂ ನಿರೀಕ್ಷೆಗೆ ತಕ್ಕ ಹಾಗೆ ಶಿಕ್ಷಣದ ಗುರಿ-ಉದ್ದೇಶಗಳು ಸಾಕಾರವಾಗುವುದಿಲ್ಲ. ಇಂದಿನ ಶಿಕ್ಷಣ ವಿದ್ಯಾರ್ಥಿಗಳಲ್ಲಿ ಸ್ವಾವಲಂಬನೆಯ ಬದುಕನ್ನು ರೂಪಿಸುವುದಿಲ್ಲ. ಬದಲಾಗಿ, ಅವರ ತಲೆಯಲ್ಲಿ ಮುಂದೇನು ಎನ್ನುವ ಪ್ರಶ್ನೆಯನ್ನು ತುರುಕಿ ಕಳುಹಿಸುತ್ತಿದೆ. ಉನ್ನತ ಶಿಕ್ಷಣದಲ್ಲಂತೂ ಅನೇಕ ಬಗೆಯ ಹಳವಂಡಗಳಿನೆ ಅವುಗಳ ಮೇಲೆ ಒಂದು ಸಣ್ಣ ಪ್ರಮಾಣದ ಬೆಳಕನ್ನು ಹರಿಸುವ ಯತ್ನವನ್ನು ಇಲ್ಲಿ ಮಾಡಲಾಗಿದೆ.

ಇಲ್ಲಿರುವ ಬಹುತೇಕ ಲೇಖನಗಳು ಪ್ರಜಾವಾಣಿ ದಿನಪತ್ರಿಕೆಯ ಶಿಕ್ಷಣ ಪುರವಣಿಯಲ್ಲಿ ಪ್ರಕಟವಾದವು. ಪ್ರಕಟವಾಗದೇ ಇರುವ ಕೆಲವು ಲೇಖನಗಳೂ ಇಲ್ಲಿವೆ. ಉತ್ತಮ ಬೋಧನೆಯ ಸೂತ್ರಗಳು ಎನ್ನುವ ಕೊನೆಯ ಅಧ್ಯಾಯವನ್ನು ನಂತರ ರೂಪಿಸಲಾಗಿದೆ. ಅದು ಬಿ.ಎಡ್. ಮತ್ತು ಡಿ.ಎಡ್ ಮುಗಿಸಿ ಶಿಕ್ಷಕರಾಗಬಯಸುವವರಿಗೆ ನೆರವಾಗಬಲ್ಲವು ಎನ್ನುವ ಹಿನ್ನೆಲೆಯಲ್ಲಿ ಈ ಕೃತಿ ಮಹತ್ವ ಪಡೆಯುತ್ತಿದೆ.

About the Author

ಎಸ್‌. ಬಿ. ಜೋಗುರ

ವೈಚಾರಿಕ ಬರಹಗಾರ ಎಸ್‌. ಬಿ. ಜೋಗುರ ಅವರುಕಥೆಗಳನ್ನೂ, ಕಾದಂಬರಿ, ಲೇಖನಗಳನ್ನು ಬರೆದಿದ್ದಾರೆ.ಇವರ  ನಿದರ್ಶನ' ಕಾದಂಬರಿಯು ಒಂದು ಕುಟುಂಬದ ಮೂರು ತಲೆಮಾರಿನ ಬದುಕನ್ನು ಕೇವಲ 147 ಪುಟಗಳಲ್ಲಿ ಅನಾವರಣಗೊಳಿಸಿದ ಕಾದಂಬರಿಯಾಗಿದೆ. ಅಸ್ಪಶ್ಯತೆಯೆಂಬ ವಿಷ ಕೂಸಿನ ಸುತ್ತ, ಓಡಿ ಹೋದ ಹುಡುಗ ಮರಳಿ ಬಂದ ಕಥೆ, ‘ಅಂತರಾಳದ ಮಾತು, ಇರದೇ ತೋರುವ ಬಗೆ’ ಅವರ ಮತ್ತೆರಡು ಕೃತಿಗಳು.  ಕತೆಗಾರ ಮತ್ತು ಪತ್ರಕರ್ತ ಎಸ್. ಬಿ. ಜೋಗುರ ಅವರು ಮೂಲತಃ ಸಿಂದಗಿಯವರು. ಧಾರವಾಡದಲ್ಲಿ ನೆಲೆಸಿದ್ದರು. ‘ಮುಗ್ಗಲು ಮನಸಿನ ಪದರು’ ಅವರ ಕತಾ ಸಂಕಲನ. ಸಿಂದಗಿಯಲ್ಲಿ ‘ಜೋಗುರ ಪತ್ರಿಕೆ’ ನಡೆಸುತ್ತಿದ್ದರು. ಕಾರವಾರದ ಕರಾವಳಿ ಮುಂಜಾವು ಪತ್ರಿಕೆ ...

READ MORE

Related Books