ಪ್ರಗಾಥ ಪ್ರತಿಭೆ

Author : ಬೇಡರೆಡ್ಡಿಹಳ್ಳಿ ಪಂಪಣ್ಣ

Pages 400

₹ 350.00




Year of Publication: 2014
Published by: ನೇಕಾರ ಪ್ರಕಾಶನ
Address: ನೇಕಾರ ಪ್ರಕಾಶನ, ಗುರುಮಂದಿರ ರಸ್ತೆ, ಸೊರಬ-577429 ಶಿವಮೊಗ್ಗ ಜಿಲ್ಲೆ
Phone: 9141833556

Synopsys

ಪ್ರಗಾಥ ಪ್ರತಿಭೆ- ಡಾ. ದೊಡ್ಡರಂಗೇಗೌಡರ ಪ್ರಗಾಥಗಳ ಕುರಿತ ವಿಮರ್ಶಾ ಲೇಖನಗಳ ಸಂಕಲನ. ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಅದರಲ್ಲೂ ವಿಶೇಷವಾಗಿ ಕಾವ್ಯ ಪ್ರಕಾರದಲ್ಲಿ ಡಾ.| ದೊಡ್ಡರಂಗೇಗೌಡರದು ತ್ರಿವಿಕ್ರಮ ಸಾಧನೆ, ಅವರ ಕಾವೋದ್ಯಾನದಲ್ಲಿ ಅರಳಿದ ಸುಂದರ ಸುಮಧುರ ಕಾವ್ಯ ಕುಸುಮಗಳು ನೂರಾರು, ಸಾವಿರಾರು. ಅವುಗಳಲ್ಲಿ ಅವುಗಳದೇ ಆದ ಕಂಪಿದೆ, ಇಂಪಿದೆ, ಚೆಲುವಿದೆ, ಮಧುವಿದೆ, ಮಾಧುರ್ಯವೂ ಇದೆ. ಅವರ ಸಾಹಿತ್ಯ ಸೃಜನ ಎಂದೂ ಬತ್ತದ ಒರತೆ. ನಾಡಿನ ಇಂಥ ಒಬ್ಬ ಪ್ರತಿಭಾವಂತ ಹಿರಿಯ ಸಾಹಿತಿಗಳಾದ ಡಾ. ದೊಡ್ಡರಂಗೇಗೌಡರ 'ಪ್ರಗಾಥ ಪ್ರತಿಭೆ' ಎಂಬ ಅಪರೂಪದ ಒಂದು ವಿಶಿಷ್ಟವಾದ ವಿಮರ್ಶಾ ಕೃತಿಯನ್ನು ಬೇಡರೆಡ್ಡಿಹಳ್ಳಿ ಪಂಪಣ್ಣ ಅವರು ಸಂಪಾದಿಸಿ ಪ್ರಕಟಿಸಿದ್ದಾರೆ

About the Author

ಬೇಡರೆಡ್ಡಿಹಳ್ಳಿ ಪಂಪಣ್ಣ
(15 January 1938)

ಬೇಡರಹಳ್ಳಿ ಪಂಪಣ್ಣ ಅವರು ಜನಿಸಿದ್ದು 1938 ಜನವರಿ 15ರಂದು ತಂದೆ ತಿಪ್ಪೆಸ್ವಾಮಿ, ತಾಯಿ ಗಂಗಮ್ಮ. ವೃತ್ತಿಯಲ್ಲಿ ಇಂಜಿನಿಯರ್ ಆಗಿದ್ದ ಪಂಪಣ್ಣನವರು ಪ್ರವೃತ್ತಿಯಲ್ಲಿ ಲೇಖಕರಾಗಿದ್ದರು. ಕವನ ರಚನೆಯಲ್ಲಿ ಆಸಕ್ತಿ ಹೊಂದಿದ್ದ ಇವರು ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಯಾಗಿದ್ದರು.  ಇವರು ಬರೆದ ಪ್ರಮುಖ ಕೃತಿಗಳೆಂದರೆ ಸೌರಭ, ಬಿರಿದ ಮೊಗ್ಗು, ಮಾವು ಮಲ್ಲಿಗೆ, ಪ್ರೇಮ ಪರಾಗ, ಭಾವಬಾಗಿನ, ಕಥನಕವನಗಳು ಭಾಗ- 1, 2, 3,4 (ಕವನ ಸಂಗ್ರಹಗಳು),  ಉಡುಪರ ಕೃತಿ ಪರಿಚಯ (ಪರಿಚಯ) ಮುಂತಾದವು  ...

READ MORE

Related Books