ಪ್ರಜ್ಞಾಪ್ರವಾಹ ತಂತ್ರ

Author : ಓ. ಎಲ್. ನಾಗಭೂಷಣಸ್ವಾಮಿ

Pages 72

₹ 5.00




Year of Publication: 1989
Published by: ಕರ್ನಾಟಕ ಸಾಹಿತ್ಯ ಅಕಾಡೆಮಿ
Address: ಕರ್ನಾಟಕ ಸಾಹಿತ್ಯ ಅಕಾಡೆಮಿ, ನೃಪತುಂಗ ರಸ್ತೆ ಬೆಂಗಳೂರು - 560002

Synopsys

ಆಧುನಿಕ ಕನ್ನಡ ವಿಮರ್ಶೆಯಲ್ಲಿ, ಕಾದಂಬರಿಗಳನ್ನು ಕುರಿತ ಚರ್ಚೆಯಲ್ಲಿ ’ಪ್ರಜ್ಞಾಪ್ರವಾಹ’ ಎಂಬ ನುಡಿಗಟ್ಟು ಸ್ಟ್ರೀಮ್ ಆಫ್ ಕಾನ್ ಷಸ್ ನೆಸ್’ (Stream of Consciousness) ಎಂಬ ಮಾತಿಗೆ ಸಮಾನಾರ್ಥಕವಾಗಿ ಬಳಸಲಾಗುತ್ತಿದೆ.

ವಿಮರ್ಶೆಯ ಪಾರಿಭಾಷಿಕವಾಗಿ ಪ್ರಜ್ಞಾಪ್ರವಾಹದ ಪರಿಕಲ್ಪನೆಯ ಬಗ್ಗೆ ಅನೇಕ ಚರ್ಚೆಗಳನ್ನು  ಈ ಕೃತಿ ಒಳಗೊಂಡಿದೆ.  ಪ್ರಜ್ಞಾಪ್ರವಾಹವು ಕೇವಲ ತಂತ್ರವೇ ? ಕಥನದ ಹೊಸ ವಿಧಾನವೇ ? ಮನುಷ್ಯನ ಅನುಭವಗಳನ್ನು ಹಿಡಿದಿಡಲು ಬಳಸಿಕೊಂಡ ಹೊಸ ರೂಪವೇ ? ಆಧುನಿಕ ಪಾಶ್ಚಾತ್ಯ ಕಾದಂಬರಿ ತನ್ನ ಮೂಲ ಸಾಮಗ್ರಿಯಾಗಿ ಕಂಡುಕೊಂಡ ಹೊಸ ವಸ್ತುವೇ ? ಅಥವಾ ಪ್ರಜ್ಞಾ ಪ್ರವಾಹವೆಂಬುದು ಸಾಹಿತ್ಯ ಪ್ರಕಾರವೇ ? ಇದಕ್ಕಿರುವ ಮೂಲ ಪ್ರೇರಣೆಗಳಾವುವು ? ಎನ್ನುವ ಹಲವಾರು ಪ್ರಶ್ನೆಗಳಿಗೆ ವಿಮರ್ಶಕರು ನೀಡಿದ ನಿರೂಪಣೆಗಳನ್ನು ಈ ಕೃತಿಯಲ್ಲಿ ಕಾಣಬಹುದು.

ಪ್ರಜ್ಞಾಪ್ರವಾಹ ವಿಮರ್ಶೆಯ ಪರಿಕಲ್ಪನೆಯಾದ ಬಗೆ, ಹಿನ್ನೆಲೆ ತಂತ್ರಗಳನ್ನು, ಕಾದಂಬರಿಯ ತಾತ್ವಿಕ ಹಿನ್ನೆಲೆಯನ್ನು, ಲಕ್ಷಣಗಳನ್ನೂ, ತಂತ್ರಗಳನ್ನೂ, ಪ್ರಜ್ಞಾಪ್ರವಾಹದ ಹಿನ್ನಲೆಯಲ್ಲಿ ರಚಿತವಾದ ಕಾದಂಬರಿಗಳ ಪರಿಚಯ, ಕಾದಂಬರಿಕಾರರ ವಿವರಗಳನ್ನು ವಿವರಣಾತ್ಮಕವಾಗಿ ಈ ಕೃತಿ ಚರ್ಚಿಸುತ್ತದೆ.

ವಿಮರ್ಶಕರಾದ ಓ.ಎಲ್. ನಾಗಭೂಷಣಸ್ವಾಮಿ ’ಪ್ರಜ್ಞಾಪ್ರವಾಹ’ ಕೃತಿಯನ್ನು ’ಸಾಹಿತ್ಯ ಪಾರಿಭಾಷಿಕ ಮಾಲೆ’ಯ ಪುಸ್ತಕ ಸರಣಿಯಲ್ಲಿ ಸಾಹಿತಿ ಡಾ, ಗಿರಡ್ಡಿ ಗೋವಿಂದರಾಜ ಅವರ ಸಂಪಾದಕತ್ವದಲ್ಲಿ ಪ್ರಕಟಿಸಿದ್ದಾರೆ.

About the Author

ಓ. ಎಲ್. ನಾಗಭೂಷಣಸ್ವಾಮಿ
(22 September 1953)

ಓ ಎಲ್ ನಾಗಭೂಷಣ ಸ್ವಾಮಿ- ಹುಟ್ಟಿದ್ದು22 ಸೆಪ್ಟೆಂಬರ್ 1953,  ಬೆಂಗಳೂರು ಸಮೀಪದ ಹೊಸಕೋಟೆಯಲ್ಲಿ. ಮೈಸೂರು ವಿಶ್ವವಿದ್ಯಾಲಯದಿಂದ ಎಂ.ಎ ಇಂಗ್ಲಿಷ್  (1873) , ಎಂ.ಎ. ಕನ್ನಡ(1975)ಪದವಿ,  ಎಂಡಿಟಿಡಿಬಿ ಕಾಲೇಜು ಮೈಸೂರು, ಸಹ್ಯಾದ್ರಿ ಕಾಲೇಜು, ಶಿವಮೊಗ್ಗ,  ಸರ್ಕಾರಿ ಪ್ರಥಮ ದರ್ಜೆ ಕಾಲೇಜು. ಶಿಕಾರಿಪುರ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆನೇಕಲ್. ಕನ್ನಡ ವಿಶ್ವವಿದ್ಯಾಲಯದಲ್ಲಿ ಭಾಷಾಂತರ ವಿಭಾಗದ ಪ್ರೊಫೆಸರ್ ಮತ್ತು ಮುಖ್ಯಸ್ಥರಾಗಿ ಸೇವೆ (1992-1998).  ಜನವರಿ2005 ರಲ್ಲಿ ಉದ್ಯೋಗದಿಂದ ಸ್ವಯಂ ನಿವೃತ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿ, ಕನ್ನಡ ವಿಶ್ವವಿದ್ಯಾನಿಲಯ ಕೆ. ಕೆ. ಬಿರ್ಲಾ ಫೌಂಡೇಷನ್, ಜೆ. ಕೃಷ್ಣಮೂರ್ತಿ ಪೌಂಡೇಷನ್ ಮುಂತಾದ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಹಲವು ಮಹತ್ವದ ...

READ MORE

Related Books