ಪ್ರಾಕೃತ ಜಗದ್ವಲಯ

Author : ಷ. ಶೆಟ್ಟರ್‌

Pages 230

₹ 250.00
Year of Publication: 218
Published by: ಅಭಿನವ
Address: 17/18-3, ಮೊದಲನೇ ಮುಖ್ಯರಸ್ತೆ, ಮಾರೇನಹಳ್ಳಿ, ವಿಜಯನಗರ, ಬೆಂಗಳೂರು-40
Phone: 9448804905

Synopsys

ಪ್ರಾಕೃತ ಜಗದ್ವಲಯ ಕೃತಿಯಲ್ಲಿ ಶೆಟ್ಟರ್‌ ಅವರು ಪ್ರಾಕೃತವು ಹೇಗೆ ವ್ಯಾಪಕವಾಗಿತ್ತು ಎಂಬ ವಿಷಯವನ್ನು ಚರ್ಚಿಸುತ್ತಾರೆ. ಹಾಗೆಯೇ ಈ ಕೃತಿಯು ದಕ್ಷಿಣ ಭಾರತದ ಭಾಷಾಸ್ವರೂಪವನ್ನು ವಿವರಿಸುತ್ತದೆ. ಪ್ರಾಕೃತ ಭಾಷಾವಲಯಕ್ಕೆ ಅಶೋಕನ ಕೊಡುಗೆ ಅಪಾರವಾದುದು. ಅಶೋಕ, ಬೌದ್ಧ ಧರ್ಮವನ್ನು ಸ್ವೀಕರಿಸಿ ಅದನ್ನು ತನ್ನ ಪ್ರಜಾಜನರಲ್ಲಿ ಪ್ರಚಾರ ಮಾಡುವಾಗ ಅವನು ಸ್ಥಾಪಿಸಿದ ಸ್ತೂಪಗಳು ಬರೆಸಿದ ಗದ್ದಲಯ ಶಿಲಾಶಾಸನಗಳು ಎಲ್ಲವೂ ಪ್ರಾಕೃತಭಾಷೆಯಲ್ಲೇ ಇವೆ.ಪ್ರಾಕೃತಭಾಷೆಯ ಪದಗಳನ್ನು ನಾವು ಕನ್ನಡದಲ್ಲಿಯೂ ಕಾಣುತ್ತೇವೆ. ಈ ಪ್ರಾಕೃತ ಶಬ್ದಗಳು ಕನ್ನಡದಲ್ಲಿ ಹೇಗೆ ಬಳಕೆಗೆ ಬಂದವು ಎಂದು ವಿವರಿಸಲಾಗಿದೆ. ಸಮಾಜ, ಧರ್ಮ,ಈ ಕೃತಿಯು ರಾಜಕೀಯ ಹಾಗೂ ಭಾಷೆ ಇವುಗಳಿಗಿರುವ ಸಂಬಂಧವನ್ನೂ ವಿಶ್ಲೇಷಿಸುತ್ತದೆ.

About the Author

ಷ. ಶೆಟ್ಟರ್‌
(11 December 1935)

ಷ.ಶೆಟ್ಟರ್ ಅವರು ಹುಟ್ಟಿದ್ದು 11 ಡಿಸೆಂಬರ್ 1935 ರಂದು. ಊರು ಬಳ್ಳಾರಿ ಜಿಲ್ಲೆಯ ಹಂಪಸಾಗರ. ಮೈಸೂರು, ಧಾರವಾಡ ಮತ್ತು ಕೇಂಬ್ರಿಜ್ ಗಳಲ್ಲಿ ಉನ್ನತ ವ್ಯಾಸಂಗ, ಇತಿಹಾಸ, ಪ್ರಾಕ್ತನಶಾಸ್ತ್ರ, ಮಾನವಶಾಸ್ತ್ರ, ಕಲಾ ಇತಿಹಾಸ, ದರ್ಶನಶಾಸ್ತ್ರ ಮತ್ತು ಹಳಗನ್ನಡ ಕುರಿತು 27ಕ್ಕೂ ಹೆಚ್ಚು ಸಂಶೋಧನಾ ಗ್ರಂಥಗಳ ಪ್ರಕಟಣೆ. ವಿವಿಧ ವಿಶ್ವವಿದ್ಯಾಲಯದಲ್ಲಿ ಬೋಧನೆ. 1960 -96, ಭಾರತೀಯ ಕಲಾ ಇತಿಹಾಸ ಸಂಸ್ಥೆಯ ನಿರ್ದೇಶಕತ್ವ 1978-95, ನವದೆಹಲಿಯ ಇಂಡಿಯನ್ ಕೌನ್ಸಿಲ್ ಆಫ್ ಹಿಸ್ಟಾರಿಕಲ್ ರಿಸರ್ಚ್ ಅಧ್ಯಕ್ಷ ಸ್ಥಾನ-1996-99, ಬೆಂಗಳೂರಿನ ನ್ಯಾಷನಲ್ ಇನ್ಸ್ ಟಿಟ್ಯೂಟ್ ಆಫ್ ಅಡ್ವಾನ್ಸಡ್ ಸ್ಟಡೀಸ್ ನಲ್ಲಿ ಡಾ.ಎಸ್.ರಾಧಾಕೃಷ್ಣನ್ ಪ್ರಾಧ್ಯಾಪಕತ್ವ 2002-2010, ...

READ MORE

Reviews

ಬರಹ ಸಂಸ್ಕೃತಿಯ ಶೋಧ

ಹೆಸರಾಂತ ಚಿಂತಕರಾದ ಪ್ರೊ ಷ. ಶೆಟ್ಟರ್ ಅವರ ಇತ್ತೀಚಿನ (2018) ಈ ಹೊತ್ತಿಗೆ, ಹಲವು ಪ್ರಾಕೃತ ಕಾರಣಗಳಿಗಾಗಿ ಮಹತ್ವವನ್ನು ಪಡೆದುಕೊಂಡಿದೆ. ಚಾರಿತ್ರಿಕ ಪ್ರಾಕ್ತನ ಶಾಸ್ತ್ರದ ನೆಲೆಯಿಂದ ಕರ್ನಾಟಕದ ಚರಿತ್ರೆ, ಸಂಸ್ಕೃತಿ, ಭಾಷೆ, ಲಿಪಿ, ಶಾಸನ ಮೊದಲಾದ ವಿದ್ಯಮಾನಗಳನ್ನು ತಲಸ್ಪರ್ಶಿಯಾಗಿ ಶೋಧಿಸುವ ಇರಾದೆಯನ್ನು ಇವರು ಹೊಂದಿರುತ್ತಾರೆ. ಇದಕ್ಕೆ ಸಾಕ್ಷಿಯಾಗಿ ಶಂಗಂ ತಮಿಳಿಗಂ ಮತ್ತು ಕನ್ನಡ ನಾಡುನುಡಿ, ಹಳಗನ್ನಡ: ಲಿಪಿ, ಲಿಪಿಕಾರ, ಲಿಪಿ ವ್ಯವಸಾಯ, ಹಳಗನ್ನಡ : ಭಾಷೆ, ಭಾಷಾ ವಿಕಾಸ, ಭಾಷಾ ಬಾಂಧವ್ಯ (ಸಂ) ಹಾಗೂ ಸದ್ಯದ ಪ್ರಾಕೃತ ಜಗದ್ವಲಯ ಎಂಬೆಲ್ಲ ಹೊತ್ತಿಗೆಗಳನ್ನು ನೋಡಬಹುದು. ಈ ಎಲ್ಲ ಹೊತ್ತಿಗೆಗಳ ಮೂಲ ಉದ್ದೇಶ ಕನ್ನಡದ ಪ್ರಾಚೀನತೆಯ ಹುಡುಕಾಟವಾಗಿದೆ. ಆದರೆ ನುಡಿಯೊಂದರ ಪ್ರಾಚೀನತೆ ಎನ್ನುವುದು ಯಾವುದೇ ಒಂದು ನಿರ್ದಿಷ್ಟ ನೆಲೆಯಿಂದ ಮಾತ್ರ ಗುರುತಿಸಲು ಸಾಧ್ಯವಿಲ್ಲ ಎಂಬ ಚಾರಿತ್ರಿಕ ವಾಸ್ತವನ್ನೂ ಇವರ ಈ ಎಲ್ಲ ಪುಸ್ತಕಗಳು ಪ್ರಚುರಪಡಿಸುತ್ತವೆ. ಈ ಮಾತುಗಳನ್ನು ಹಿನ್ನಲೆಯಾಗಿಟ್ಟುಕೊಂಡು 'ಪ್ರಾಕೃತ ಜಗದ್ವಲಯ' ಎನ್ನುವ ಈ ಪುಸ್ತಕವನ್ನು ವಿಶ್ಲೇಷಿಸಲಾಗಿದೆ.

ಪುರಾತನ ಎನ್ನುವ ಕಾರಣಕ್ಕೆ ನುಡಿಯೊಂದನ್ನು ಸಮೃದ್ಧವಾದದ್ದೆಂದು ತೀರ್ಮಾನಿಸಲು ಸಾಧ್ಯವಿಲ್ಲ. ಯಾವುದೇ ನುಡಿಯ ಪ್ರಾಚೀನತೆ ಎಂಬುದು ಚಾರಿತ್ರಿಕ ಸಾಂಸ್ಕತಿಕ ವಿದ್ಯಮಾನಗಳ ಜೊತೆಗೆ ಹೇಗೆ ಅನುಸಂಧಾನ ಮಾಡಿದೆ ಎಂಬುದನ್ನು ಆಧರಿಸಿರುತ್ತದೆ. ನುಡಿಗೆ ಲಿಪಿ, ಬರವಣಿಗೆ, ಸೃಜನಶೀಲತೆಯ ಆಯಾಮಗಳು ದೊರಕಿದರೆ, ಆ ನುಡಿಗೆ ಸಾಮಾಜಿಕ-ಸಾಂಸ್ಕೃತಿಕ ಅಸ್ತಿತ್ವ ಅಸ್ಮಿತೆ ಹಾಗೂ ರಾಜಕೀಯ ಮಾನ್ಯತೆ ಕೂಡ ಲಭ್ಯವಾಗುತ್ತದೆ. ಕನ್ನಡವನ್ನು ಇವತ್ತು ಪ್ರಾಚೀನ ನುಡಿಯೆಂದು ಗುರುತಿಸುವ ಪ್ರಕ್ರಿಯೆಯಲ್ಲಿಯೂ ಈ ಸಾಮಾಜಿಕ-ಸಾಂಸ್ಕೃತಿಕ ಆಯಾಮಗಳು ಮುಖ್ಯವಾಗಿವೆ. ಸಂಸ್ಕೃತ ಲಿಪಿ ವ್ಯವಸ್ಥೆಯನ್ನು ಪಡೆದುಕೊಂಡ ಮೇಲೆಯೇ ವಿಶ್ವಾತ್ಮಕ ಮಾನ್ಯತೆಯನ್ನು ಪಡೆಯಿತು. ಬುದ್ಧ ಮತ್ತು ಮಹಾವೀರ ಅವರುಗಳು ತಮ್ಮ ಅನುಯಾಯಿಗಳಿಗೆ ಪ್ರಾಕೃತ ನುಡಿಗಳಲ್ಲಿ ಬೋಧನೆ ಮಾಡಿದ್ದರಿಂದ ಅವುಗಳಿಗೆ ಪ್ರಾಧಾನ್ಯತೆ ಸಿಕ್ಕಿರುತ್ತದೆ. ಕ್ರಿ.ಪೂ 6ನೇ ಶತಮಾನದಿಂದ ಕ್ರಿ.ಶ 3ನೇ ಶತಮಾನದವರೆಗೆ ಪ್ರಾಕೃತ ನುಡಿ(ಗಳು) ಜನಸಾಮಾನ್ಯರ ನುಡಿಯಾಗಿದ್ದವು. ಈ ನುಡಿಗಳು ಬಹಳ ವರುಷಗಳ ಕಾಲ ಮೌಖಿಕ ಪರಂಪರೆಯಲ್ಲಿಯೇ ಇದ್ದವು. ಅಶೋಕ ಚಕ್ರವರ್ತಿ ಬ್ರಾಹೀ ಲಿಪಿಯ ನಂಟನ್ನು ಪ್ರಾಕೃತ ನುಡಿಗಳೊಂದಿಗೆ ಬೆಸೆದಿರುವುದು ಚಾರಿತ್ರಿಕ ಕನ್ನಡ ನುಡಿಯ ಇಡೀ ಬೆಳವಣಿಗೆಯನ್ನು ಗುರುತಿಸುವ ಇಂತಹ ಪ್ರಯತ್ನಗಳು ಈ ಹೊತ್ತಿಗೆಯ ಮಹತ್ವದ ಚರ್ಚೆಗಳಾಗಿವೆ. - “ಭಾಷಾ ಅನುಸಂಧಾನ' ಎಂಬ ಪ್ರಧಾನ ನೆಲೆಯಲ್ಲಿಯೇ ಈ ಹೊತ್ತಿಗೆಯ ಚರ್ಚೆಗಳು ಬೆಳೆದಿವೆ. ಇದು ಸಾಮಾಜಿಕ-ಚಾರಿತ್ರಿಕ ಭಾಷಾಧ್ಯಯನದ ನೆಲೆಯಿಂದ ರೂಪುಗೊಂಡ ಓದು. ಹಲವು ಅಧ್ಯಯನಶಿಸ್ತುಗಳ ಸಾಮಾನ್ಯ ಗ್ರಹಿಕೆಯನ್ನು ಈ ಪುಸ್ತಕ ಬಯಸುತ್ತದೆ. ಎಂಟು ಅಧ್ಯಾಯಗಳ ಈ ಹೊತ್ತಿಗೆ ಕೇವಲ ಒಂದು ಭಾಷೆಯ ಅಧ್ಯಯನವಲ್ಲ. ಪ್ರಾಕೃತ-ಸಂಸ್ಕೃತ-ಕನ್ನಡ ನುಡಿಗಳ ನಡುವಣ ಸಂಘರ್ಷ ಮತ್ತು ಅನುಸಂಧಾನ ಕುರಿತ ವಿಶ್ಲೇಷಣೆಯಾಗಿದೆ. ಬೌದ್ಧರು ನಿರಿಸಿದ ಪ್ರಾಕೃತ ಜಗದ್ವಲಯದ ಈ ವ್ಯಾಪ್ತಿ ಅತ್ಯಂತ ವ್ಯಾಪಕವಾಗಿದೆ. ಪಾಲಿ, ಮಗಧಿ, ಅರ್ಧಮಾಗಧಿ, ಶೌರಸೇನಿ, ಮಹಾರಾಷ್ಟ್ರೀ, ಅಪಭ್ರಂಶ, ಪೈಶಾಚೀ ಮೊದಲಾದ 'ಪ್ರಾಕೃತಂಗಳ್'ಗಳ ಸ್ವಾಯತ್ತತೆ, ಭಿನ್ನತೆ, ಪ್ರಾದೇಶಿಕತೆ, ಲಿಪೀಕರಣ, ಸಾಹಿತ್ಯ ಮುಂತಾದ ನಿಲುವುಗಳು ಇಲ್ಲಿ ವಿಶ್ಲೇಷಣೆಯ ನೆಲೆಗಳಾಗಿವೆ. ಬೌದ್ಧ ಧರ್ಮ, ಶಿಲಾಶಾಸನ, ಪ್ರಾಕೃತ ನುಡಿ, ಬ್ರಾಹ್ಮ ಲಿಪಿಗಳ ನಡುವಣ ಈ ನಂಟು ಭಾರತೀಯ ಸಾಂಸ್ಕೃತಿಕ ಚರಿತ್ರೆಯಲ್ಲಿಯೇ ಮಹತ್ವದ ನಡೆಯಾಗಿದೆ. ಆದರೆ ಬೌದ್ಧರಂತೆ ಪ್ರಾಕೃತವನ್ನು ಕಲ್ಬರಹದ ಮಾಧ್ಯಮವನ್ನಾಗಿ ಆರಂಭ ಕಾಲದಲ್ಲಿ ಜೈನರು ಬಳಸಿಕೊಳ್ಳಲಿಲ್ಲ (ಪು.2).ಆದರೆ ಆರಂಭ ಕಾಲದ ಜೈನರ ಕನ್ನಡ ಬರಹಗಳು ಸುಮಾರು ಆರನೇ ಶತಮಾನದಲ್ಲಿ ಪ್ರಕಟವಾಗಿವೆ. ಕೆಳದಬ್ಬಣದ ಪ್ರಾಕೃತ ಭಾಷಾ ಇತಿಹಾಸದಲ್ಲಿ ಕ್ರಿ.ಶ ಮೂರನೇ ಶತಮಾನವು ಒಂದು ತಿರುವಿನ ಕಾಲ. ಏಕೆಂದರೆ, ಕಲ್ಬರಹದಿಂದ ತಾಮ್ರಪಟದ ಬರಹವು ಮೊದಲ ಬಾರಿಗೆ ಕಾಣಿಸಿಕೊಂಡಿದ್ದು ಇಲ್ಲಿಯೇ. ಹಾಗೂ ಆರೂರು ವರುಷಗಳ ಈ ಭಾಷೆಯ ಏಕಸ್ವಾಮ್ಯವೂ ಅಂತ್ಯಗೊಂಡದ್ದು ಇದೇ ಶತಮಾನದಲ್ಲಿ. ಅರಸು ಮನೆತನ, ಭಾಷಾರಾಜಕಾರಣ, ಧರ ಇವುಗಳ ನಡುವಣ ಅನುಸಂಧಾನ ಮತ್ತು ಸಂಘರ್ಷದ ಮಾದರಿಗಳಲ್ಲಿ ಸಾಂಸ್ಕೃತಿಕ ಪಲ್ಲಟಗಳು ಏಲ್ಪಟ್ಟವು. ಪರಿಣಾಮವಾಗಿ ಗದ್ಯ ಪ್ರಧಾನ ಪ್ರಾಕೃತವು ಮರೆಯಾಗಿ ಗದ್ಯ-ಪದ್ಯ ಮಿಶ್ರಿತ ಸಂಸ್ಕೃತವು ಬಳಕೆಗೆ ಬಂದಿತು. ಅರಸುಮನೆತನದ ಮಧ್ಯಸ್ಥಿಕೆಯಿಂದ ಈ ನುಡಿ ಬಳಕೆಯ ಮಾದರಿಗಳಲ್ಲಿ ಪಲ್ಲಟಗಳಾದವು. ಇದು ದಖ್ಯಣದ ಅರಸುಮನೆತನಗಳ ಸಾಮನ್ಯ ವರನೆಯಾಗಿತ್ತು. ಭಾಷಿಕ, ಸಾಂಸ್ಕೃತಿಕವಾಗಿ ನೆಲೆಗೊಂಡಿದ್ದ ಪ್ರಾಕೃತ ನುಡಿಗಳನ್ನು ನಿಲ್ಲಾಮ ಮಾಡುವ ಹುನ್ನಾರಗಳು ಇಲ್ಲಿ ಹೇಗೆ ಮುಂಚೂಣೆಗೆ ಬಂದವು ಎಂಬುದನ್ನು ಅತ್ಯಂತ ಖಚಿತವಾಗಿ ಚರಿಸಿರುವದಿಲ್ಲ.

ಬೌದ್ದರು-ಜೈನರು-ವೈದಿಕರು ಭಾಷಾರಾಜಕಾರಣದ ಮೂರು ನೆಲೆಗಳು ಎನ್ನುವ ವಾಸ್ತವ ಮರೆತು, ಕೇವಲ ವೈದಿಕ-ಶೂದ್ರ ವಿನ್ಯಾಸಗಳಲ್ಲಿ ಮಾತ್ರ ಭಾಷಾ ರಾಜಕಾರಣವನ್ನು ವಿವರಿಸುತ್ತೇವೆ. ಇದೊಂದು ಅಪೂರ್ ತಾತ್ವಿಕ ಚೌಕಟ್ಟೆಂಬುದು ಈ ಪುಸ್ತಕದ ಹಲವು ಸೈದ್ಧಾಂತಿಕ ನಿರೂಪಣೆಗಳಿಂದ ಕಂಡುಬರುತ್ತದೆ. ಬರವಣಿಗೆಯ ಮೂಲಕ ಸಾಮಾಜಿಕ, ಸಾಂಸ್ಕೃತಿಕ ಯಜಮಾನಿಕೆಯನ್ನು ಹೇಗೆ ಸಾಧಿಸಲಾಗಿದೆ ಎನ್ನುವ ಸ್ಪಷ್ಟ ತಾತ್ವಿಕ ನಿಲುವುಗಳು ಇಲ್ಲಿ ಮನವರಿಕೆಯಾಗುತ್ತವೆ. ಆದರೆ ಭಾಷಾಶಾಸ್ತ್ರೀಯ ಸಂಗತಿಗಳನ್ನು ಪರಿಣಾಮಕಾರಿಯಾಗಿ ಈ ಪುಸ್ತಕದಲ್ಲಿ ಬಳಸಿಕೊಂಡಿರುವುದಿಲ್ಲ.

ದ್ವಿಭಾಷಿಕ ಪ್ರಕ್ರಿಯೆಯಲ್ಲಿಯೇ ಭಾಷಿಕ ಅಸಮಾನತೆ ಹಾಗೂ ಅಧಿಕಾರ ಕೇಂದ್ರಗಳು ರೂಪುಗೊಂಡಿರುವುದು ಸ್ಪಷ್ಟ. ಈ ಭಾಷಾ ಯಜಮಾನಿಕೆ ನೆಲೆಗೊಳ್ಳುವುದಕ್ಕೆ ಶಾಸನ-ಬರಹ ಮತ್ತು ಪ್ರಭುತ್ವದ ಒತ್ತಾಸೆ ಹೇಗೆ ಪೂರಕವಾಗಿವೆ ಎಂಬುದಿಲ್ಲಿ ಗಮನಾರ್ಹ. ಜೈನರು-ಬೌದ್ದರು-ವೈದಿಕರು ತಮ್ಮ ತಾತ್ವಿಕ, ಸಾಹಿತ್ಯಕ ನಿರೂಪಣೆಗಳಿಗೆ ಹಾಗೂ ಜನಸಾಮನ್ಯರೊಂದಿಗೆ ಸಂವಹನ ಬೆಳೆಸಲು ರೂಪಿಸಿಕೊಂಡ ಭಾಷಿಕ ವಿನ್ಯಾಸಗಳು ಭಿನ್ನವಾಗಿವೆ. ಇದರಿಂದಾಗಿ ಪ್ರಾಕೃತ, ಪ್ರಾಕೃತಮಿಶ್ರ ಸಂಸ್ಕೃತ ಹಾಗೂ ಸಂಸ್ಕೃತಮಿಶ್ರ ಪ್ರಾಕೃತ ನುಡಿಗಟ್ಟುಗಳು ತಲೆಯೆತ್ತಿದವು. ಅದು ಕೇವಲ ಭಾಷಾರಾಜಕಾರಣದ ಕುರುಹು ಮಾತ್ರವಲ್ಲ, ಧರ್ಮರಾಜಕಾರಣ ಮತ್ತು ಮತಗಳ ನಡುವಣ ಅನುಸಂಧಾನವನ್ನೂ ಹಾಗೂ ಜನಭಾಷೆ-ಪ್ರಭುತ್ವಭಾಷೆಗಳ ಮೂಡುವಣ ಸಂಘರ್ಷವನ್ನೂ ಏಕಕಾಲಕ್ಕೆ ಸೂಚಿಸುತ್ತವೆ. ಕರ್ನಾಟಕ ಮತ್ತು ಒಂದಪದೇಶಗಳು ಪ್ರಾಕೃತ ಮೂಲದಿಂದ ಸಂಸ್ಕೃತದ ಕಡೆಗೆ ಹೊರಳುವ ಗೆಗಳನ್ನು ಸೂಕ್ಷ್ಮವಾಗಿ ವಿಶ್ಲೇಷಿಸಿದರೆ, ಇವತ್ತಿನ ಭಾಷಾರಾಜಕಾರಣದ ಪರಿಣಾಮಗಳನ್ನು ಮನಗಾಣುತ್ತೇವೆ. ಒಂದು ಕಾಲದ ಭಾಷಾನೀತಿ ಹಾಗೂ ರೂಪಣೆಗಳು, ಇವತ್ತು ಸಮುದಾಯಗಳ ಮೇಲೆ ಏನೆಲ್ಲ ಪ್ರಭಾವಪರಿಣಾಮಗಳನ್ನು ಬೀರುತ್ತವೆ ಎನ್ನುವುದು ಮುಖ್ಯ.

ಕನ್ನಡದ ಆಲೋಚನಾ ಮಾದರಿಗಳನ್ನು ಪ್ರಾಕೃತ ನುಡಿಪರಂಪರೆ ಹೇಗೆ. ರೂಪಿಸಿದೆ ಎಂಬ ಖಚಿತ ತಾತ್ವಿಕತೆ ಇಲ್ಲಿ ಮಂಡಿತವಾಗಿಲ್ಲ. ಆದರೆ ಅಂತಹವೊಂದು ಆಯಾಮವನ್ನು ಗ್ರಹಿಸುವುದಕ್ಕೆ ಬೇಕಾಗುವ ವಿವರಗಳು ಈ ಹೊತ್ತಿಗೆಯಲ್ಲಿ ಸಿಗುತ್ತವೆ. ಕನ್ನಡದ ಸಂವೇದನೆ, ಆಲೋಚನಾ ಪರಂಪರೆಗಳನ್ನು ಯೋಚಿಸುವಾಗೆಲ್ಲ ಸಂಸ್ಕೃತದ ಹಿರಿಮೆಯನ್ನು ಮಾತ್ರ ಕೊಂಡಾಡಲಾಗುತ್ತದೆ. ಪ್ರಾಕೃತ ಕನ್ನಡದ ಈ ಪರಂಪರೆಗಳನ್ನು ಹೇಗೆ ರೂಪಿಸಿದೆ ಎಂಬುದನ್ನು ಅರಿಯುವುದು ಜರೂರಾಗಿದೆ.

-ಡಾ. ಮೇಟಿ ಮಲ್ಲಿಕಾರ್ಜುನ

ಲೇಖನ ಕೃಪೆ : ಹೊಸ ಮನುಷ್ಯ ಸಮಾಜವಾದೀ ಮಾಸಿಕ ದಿನಪತ್ರಿಕೆ (ಅಕ್ಟೋಬರ್‌ 2018)

Related Books