ಪ್ರಾಕೃತ-ಕನ್ನಡ ಪರಂಪರೆ ಮತ್ತು ಪ್ರಭಾವ

Author : ಎಸ್.ಪಿ. ಪದ್ಮಪ್ರಸಾದ್‌

Pages 352

₹ 300.00




Year of Publication: 2019
Published by: ಪ್ರಸಾರಾಂಗ
Address: ಕನ್ನಡ ವಿಶ್ವವಿದ್ಯಾಲಯ, ಹಂಪಿ
Phone: 08022372388

Synopsys

ಹಂಪಿಯ ಕನ್ನಡ ವಿಶ್ವವಿದ್ಯಾಲಯದಲ್ಲಿ ನಡೆದ ’ಪ್ರಾಕೃತ ಕನ್ನಡ ಪರಂಪರೆ ಮತ್ತು ಪ್ರಭಾ” ವಿಚಾರ ಸಂಕಿರಣದಲ್ಲಿ ಮಂಡಿಸಿದ ಪ್ರಬಂಧಗಳು ಹಾಗೂ ಕೆಲ ಅನುವಾದಗಳ ಸಂಗ್ರಹ ಕೃತಿ.

ಕರ್ನಾಟಕದಲ್ಲಿ ಕನ್ನಡದ ನಂತರದ ಸೊಲ್ಲು ಪ್ರಾಕೃತ. ಈ ಎರಡರ ನಡುವಿನ ಕೊಡು- ಕೊಳ್ಳುವಿಕೆ ಗುರುತಿಸುವ ಫಲವೇ 'ಕನ್ನಡ ಪ್ರಾಕೃತ ಪರಂಪರೆ ಮತ್ತು ಪ್ರಭಾವ'.

About the Author

ಎಸ್.ಪಿ. ಪದ್ಮಪ್ರಸಾದ್‌

ಎಸ್.ಪಿ. ಪದ್ಮಪ್ರಸಾದ್‌ ಜಾನಪದ, ಕಾವ್ಯ, ನಾಟಕ, ವಿಮರ್ಶೆ ಮುಂತಾದ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಪದ್ಮ ಪ್ರಸಾದವರು ಹುಟ್ಟಿದ್ದು ಶಿವಮೊಗ್ಗ ಜಿಲ್ಲೆಯ ಹೊಸನಗರದಲ್ಲಿ.  ತಂದೆ ಎಸ್.ಪಿ. ಪಾಯಪ್ಪಶೆಟ್ಟಿ, ತಾಯಿ ಜಿನ್ನಮ್ಮ. ಪ್ರಾರಂಭಿಕ ಶಿಕ್ಷಣ ಹೊಸನಗರದಲ್ಲಿ. ಶಿವಮೊಗ್ಗ ಸಹ್ಯಾದ್ರಿ ಕಾಲೇಜಿನಿಂದ ಬಿ.ಎಸ್ಸಿ ಪದವಿ ಮತ್ತು ನ್ಯಾಷನಲ್ ಕಾಲೇಜ್ ಆಫ್ ಎಜುಕೇಷನ್‌ನಿಂದ ಬಿ.ಇಡಿ. ಪದವಿಯನ್ನೂ,. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ. (ಕನ್ನಡ) ಹಾಗೂ ‘‘ಜೈನ ಜನಪದ ಸಾಹಿತ್ಯ-ಸಂಪಾದನೆ ಹಾಗೂ ಅಧ್ಯಯನ’’ ಪ್ರಬಂದ ಮಂಡಿಸಿ ಬೆಂಗಳೂರು ವಿಶ್ವ ವಿದ್ಯಾಲಯದಿಂದ ಪಡೆದ ಪಿಎಚ್.ಡಿ. ಪದವಿ ಪಡೆದಿದ್ದಾರೆ.  ಹೈಸ್ಕೂಲು ಅಧ್ಯಾಪಕರಾಗಿ ಪಿಎಚ್.ಡಿ. ಪದವಿಗಳಿಸಿದ ರಾಜ್ಯದ ...

READ MORE

Reviews

ಪ್ರಾಕೃತಕ್ಕೂ ಕರ್ನಾಟಕಕ್ಕೂ ಎರಡೂವರೆ ಸಾವಿರ ವರ್ಷಗಳಷ್ಟು ಹಿರಿದಾದ ನಂಟಿದೆ. ಕನ್ನಡಕ್ಕೆ ಪ್ರಾಕೃತ ಮತ್ತು ಸಂಸ್ಕೃತಗಳ ಸ್ನೇಹ ಮತ್ತು ನಿಕಟ ಸಂಬಂಧ ಕಳ್ಳುಬಳ್ಳಿಯಂತದ್ದು, ಅದರಲ್ಲೂ ಕನ್ನಡದ ಅಕ್ಷರ ಲೋಕವನ್ನು ಪ್ರಾಕೃತ ಪೊರೆದದ್ದು ಅಪಾರ. ಕರ್ನಾಟಕದಲ್ಲಿ ಕನ್ನಡದ ನಂತರದ ಸೊಲ್ಲು ಪ್ರಾಕೃತದ್ದೇ. ಇವೆರಡರ ನಡುವಿನ ಕೊಡು, ಕೊಳ್ಳುವಿಕೆ ಗುರುತಿಸುವ ಫಲವೇ 'ಕನ್ನಡ ಪ್ರಾಕೃತ ಪರಂಪರೆ ಮತ್ತು ಪ್ರಭಾವ'. ಪ್ರಸ್ತುತ ಕೃತಿ ಕನ್ನಡ ವಿಶ್ವವಿದ್ಯಾಲಯದಲ್ಲಿ ನಡೆದ ಪ್ರಾಕೃತ ಕನ್ನಡ ಪರಂಪರೆ ಮತ್ತು ಪ್ರಭಾವ ಎಂಬ ವಿಚಾರ ಸಂಕಿರಣದಲ್ಲಿ ಮಂಡಿಸಿದ ಪ್ರಬಂಧಗಳು ಹಾಗೂ ಕೆಲ ಅನುವಾದಗಳ ಸಂಗ್ರಹ. ಕನ್ನಡದಲ್ಲಿ ಇಂತಹದ್ದೊಂದು ಕೈಂಕರ್ಯ ಇದೇ ಮೊದಲೆಂಬುದು ವಿಶೇಷ. ಮಿಗಿಲಾಗಿ ಕನ್ನಡದ ಸರ್ವಾಂಗೀಣ ಹಾಗೂ ಸಮತೋಲನ ಬೆಳವಣಿಗೆಗೆ ಪ್ರಾಕೃತದ ಕೊಡುಗೆ ಮಹತ್ತರವಾದುದೆನ್ನುವುದನ್ನು ಈ ಕೃತಿ ಒತ್ತಿ ಹೇಳುತ್ತದೆ. ಮಾತ್ರವಲ್ಲ ಪ್ರಾಕೃತದ ಅನೇಕ ಹಿರಿಯ ಬರಹಗಾರರು ಕನ್ನಡ ನಾಡಿನವರು ಎಂಬುದೂ ಗಮನಾರ್ಹ. ಕರ್ನಾಟಕದ ಸ್ಥಳ, ನುಡಿ, ಕನ್ನಡ ಸಾಹಿತ್ಯದ ವಿವಿಧ ಮಗ್ಗಲುಗಳನ್ನು ಪ್ರಾಕೃತ ಪ್ರಭಾವಿಸಿದ್ದು, ಈ ಎಲ್ಲದರ ಅರಿವಿನ ಹೂರಣವಾಗಿ ಈ ಕೃತಿ ಮೂಡಿಬಂದಿದೆ.

ಕೃಪೆ: ಪ್ರಜಾವಾಣಿ, ಮೊದಲ ಓದು (2020 ಜನವರಿ 5)

Related Books