ಪ್ರಾಕೃತ ಕಥಾ ಸಾಹಿತ್ಯ

Author : ಹಂಪ ನಾಗರಾಜಯ್ಯ

₹ 495.00




Year of Publication: 2022
Published by: ಸಪ್ನ ಬುಕ್ ಹೌಸ್
Address: ಆರ್ ಒ#11, 3ನೆ ಮುಖ್ಯರಸ್ತೆ, ಗಾಂಧಿನಗರ, ಬೆಂಗಳೂರು - 560 009

Synopsys

ಹಂಪ ನಾಗರಾಯ್ಯ ಅವರ ಕೃತಿ ʻಪ್ರಾಕೃತ ಕಥಾ ಸಾಹಿತ್ಯ: ಆಕೃತಿ-ಆಶಯ-ಆಯಾಮʼ. ಪ್ರಸ್ತುತ ಕೃತಿ ಕನ್ನಡದಲ್ಲಿ ಜೈನ ಸಾಹಿತ್ಯದ ಹುಟ್ಟು ಬೆಳವಣಿಗೆಗೆ ಪ್ರಾಕೃತ ಕಥಾ ಸಾಹಿತ್ಯ ನೀಡಿದ ಕೊಡುಗೆಗಳು ಏನು ಹಾಗೂ ಒಂದು ನೆಲದಿಂದ ಇನ್ನೊಂದು ಭಾಷೆಗೆ ಕಥೆಗಳು ಸಂಚಾರಗೊಂಡು ರೂಪಾಂತರಗೊಂಡ ವಿವರಗಳ ಮೂಲಕ ಸಂಶೋಧನಾತ್ಮಕವಾಗಿ ವಿವರಿಸುತ್ತದೆ. ಗ್ರೀಕ್‌ ಚಿಂತಕ ಅರಿಸ್ಟಾಟಲನ ಮೂಲದಿಂದ ಬೆಳೆದು ಬಂದ ಪಾಶ್ಚಿಮಾತ್ಯ ಪ್ರಣೀತ ಅಭಿಜಾತ ಪರಂಪರೆಯ ಅರಿವಿನಿಂದ ಮೂಡಿದ ಕನ್ನಡ ಅಭಿಜಾತ ಸಾಹಿತ್ಯ ವ್ಯಾಖ್ಯಾನಗಳನ್ನು ಪುನರ್‌ ಪರೀಕ್ಷಿಸುವಂತೆ ಈ ಕೃತಿ ಪ್ರೇರೇಪಿಸುತ್ತದೆ.

About the Author

ಹಂಪ ನಾಗರಾಜಯ್ಯ
(07 October 1936)

ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದ ಹಂ.ಪ. ನಾಗರಾಜಯ್ಯ ಅವರು ಕನ್ನಡದ ಪ್ರಮುಖ ಭಾಷಾ ವಿಜ್ಞಾನಿ, ಸಂಶೋಧಕ. ’ಹಂಪನಾ’ ಕಾವ್ಯನಾಮದಿಂದ ಬರೆಯುವ ನಾಗರಾಜಯ್ಯ ಅವರು ಮೂಲತಃ ಗೌರಿಬಿದನೂರು ತಾಲ್ಲೂಕಿನ ಹಂಪಸಂದ್ರದವರು. ಸದ್ಯ ಬೆಂಗಳೂರು ನಗರದ ನಿವಾಸಿ. ತಂದೆ ತಂದೆ ಪದ್ಮನಾಭಯ್ಯ ಮತ್ತು ತಾಯಿ ಪದ್ಮಾವತಮ್ಮ. ಪ್ರಾಥಮಿಕ, ಆರಂಭಿಕ ಶಿಕ್ಷಣವನ್ನು ಗೌರಿಬಿದನೂರು, ಮಧುಗಿರಿಯಲ್ಲಿ ಪಡೆದ ಅವರು ತುಮಕೂರಿನಲ್ಲಿ ಇಂಟರ್ ಮೀಡಿಯೆಟ್ ಓದಿದರು. ಮೈಸೂರು ಮಹಾರಾಜಾ ಕಾಲೇಜಿನಿಂದ ಬಿ.ಎ. (ಆನರ್ಸ್), ಎಂ.ಎ ಪದವಿ ಪಡೆದ ನಾಗರಾಜಯ್ಯ ಅವರು ವಡ್ಡಾರಾಧನೆ ಕುರಿತು ಸಲ್ಲಿಸಿದ ಮಹಾಪ್ರಬಂಧಕ್ಕೆ ಪಿಎಚ್‌.ಡಿ. ಪದವಿ ಪಡೆದರು.   ಮೈಸೂರಿನ ಮಹಾರಾಣಿ ಕಾಲೇಜಿನಲ್ಲಿ ಅಧ್ಯಾಪಕರಾಗಿ ವೃತ್ತಿಜೀವನ ಆರಂಭಿಸಿದ ಅವರು ...

READ MORE

Related Books