ಪ್ರಕೃತಿ ದೇವರು

Author : ಹೆಚ್.ಎಸ್. ಬ್ಯಾಕೋಡ (ಹ.ಸ.ಬ್ಯಾಕೋಡ)

Pages 56

₹ 50.00




Year of Publication: 2018
Published by: ಶ್ರೀ ಅಮ್ಮ ಪ್ರಕಾಶನ
Address: ಹೈಜೆನ್ ಲೇಔಟ್, 1ನೇ ಮೈನ್, ಬೋಧನಹೊಸಹಳ್ಳಿ ಗ್ರಾಮ, ಹೊಸಕೋಟೆ ತಾಲ್ಲೂಕು- ಬೆಂಗಳೂರು- 560067

Synopsys

‘ಪ್ರಕೃತಿ ದೇವರು’ ಲೇಖಕ ಹ.ಸ. ಬ್ಯಾಕೋಡ ಅವರು ರಚಿಸಿರುವ ಮಕ್ಕಳ ನಾಟಕ. ಈ ಕೃತಿಗೆ ಹಿರಿಯ ಸಾಹಿತಿ ಕೆ. ಮರುಳಸಿದ್ದಪ್ಪ ಅವರ ಬೆನ್ನುಡಿ ಬರಹವಿದೆ. ಕೃತಿಯ ಕುರಿತು ಬರೆಯುತ್ತಾ ಕನಕದಾಸರ ವೈರಾಗ್ಯ ದೃಷ್ಟಿಗೆ ಒಂಟಿಕಾಲ ಮೇಲೆ ನಿಂತಿರುವ ಬೆಳ್ಳಕ್ಕಿ, ನಿಸರ್ಗ ಸೌಂದರ್ಯವನ್ನು ಸವಿಯುತ್ತಿರುವ ಧ್ಯಾನಸ್ಥ ಜೀವಿಯಂತೆ ಕಾಣುತ್ತದೆ. ಗರಿಕೆ ಹುಲ್ಲಿನ ಹಾಸಿನ ನಡುವೆ ಇರುವ ಸಾಧಾರಣ ಕರಿಕಲ್ಲು ಶಿವಲಿಂಗದಂತೆ ಗೋಚರಿಸುತ್ತದೆ. ಕೃಷ್ಣ ತುಳಸಿಯಲ್ಲಿ ಸಾಕ್ಷಾತ್ ಶ್ರೀಕೃಷ್ಣ ಕಾಣಿಸುತ್ತಾನೆ. ಪ್ರಕೃತಿಯೇ ಭೂಮಿಯ ಮೇಲಿನ ಸ್ವರ್ಗ, ಎಂಬ ನಂಬಿಕೆಯಿರುವ ಅವರಿಗೆ, ಅದನ್ನು ಮಲಿನಗೊಳಿಸುವ ಮನುಷ್ಯನ ಬಗೆಗೆ ಕನಿಕರವಿದೆ. ಜಡ ಚೇತನವೆರಡೂ ರೂಪದಲ್ಲಿ ಪ್ರಕಟಗೊಳ್ಳುವ ನಿಸರ್ಗದಲ್ಲಿ ಭಗವಂತನನ್ನೇ ಕಾಣುವ ಕುವೆಂಪು ಗೀತೆಗಳು ಇಲ್ಲಿ ನೆನಪಿಗೆ ಬರುವಂತೆ ಮೊದಲ ಮೂರು ದೃಶ್ಯಗಳ ರಚನೆಯಿದೆ. ಸಸ್ಯ, ಪಕ್ಷಿ, ಜಡ ಪರಿಸರದ ಸೌಂದರ್ಯವನ್ನು ನಿರೂಪಿಸುವ ನಾಟಕವು ನಾಲ್ಕು ಮತ್ತು ಐದನೆಯ ದೃಶ್ಯದಲ್ಲಿ ಪ್ರಾಣಿ ಪರಿಸರದ ಮಹತ್ವವನ್ನು ಸಾರಿ ಹೇಳುತ್ತಿರುವಂತಿದೆ. ಹೀಗೆ ಮರ, ಗಿಡ, ಕಲ್ಲು, ಮಣ್ಣು, ಪಕ್ಷಿ, ಪ್ರಾಣಿ, ಉರಗ-ನಿಸರ್ಗ ಸಮಸ್ತವೂ ಸೃಷ್ಟಿಯಲ್ಲಿ ಸಮಾನವಾಗಿ ಸಾಮರಸ್ಯದ ಸಂದೇಶವನ್ನೇ ಬೀರುತ್ತಿರುವಂತಿದೆ. ಮನುಷ್ಯನೂ ಅಖಂಡ ವಿಶ್ವದೊಂದಿಗೆ ಒಂದಾಗಿ ಬಾಳಬೇಕೆಂಬ ಸಂದೇಶವನ್ನು ನಾಟಕವು ಸೂಚಿಸುತ್ತಿರುವಂತಿದೆ ಎಂದು ಕೆ. ಮರುಳಸಿದ್ದಪ್ಪ ಅವರು ಮೆಚ್ಚುಗೆ ಸೂಚಿಸಿದ್ದಾರೆ.

About the Author

ಹೆಚ್.ಎಸ್. ಬ್ಯಾಕೋಡ (ಹ.ಸ.ಬ್ಯಾಕೋಡ)

ಲೇಖಕ ಹ.ಸ. ಬ್ಯಾಕೋಡ ಮಕ್ಕಳ ಸಾಹಿತ್ಯಕ್ಕೆ ಅರ್ಥಪೂರ್ಣ ಸತ್ವವನ್ನು ತಂದುಕೊಟ್ಟ ಸಾಹಿತಿ. ಇವರು ಪ್ರಸಿದ್ಧ ಛಾಯಾಗ್ರಾಹಕರೂ ಹೌದು. ಅಂತಾರಾಷ್ಟ್ರೀಯ ಮಟ್ಟದ ಹಲವು ಗೌರವಗಳಿಗೆ ಪಾತ್ರರಾಗಿರುವ ಬ್ಯಾಕೋಡ ಕರ್ನಾಟಕದ ಬಯಲುಸೀಮೆ ಪ್ರದೇಶದಲ್ಲಿ ಹುಟ್ಟಿ, ಕರಾವಳಿ ಪ್ರದೇಶದಲ್ಲಿ ಆಡಿ ಬೆಳೆದು, ಮಲೆನಾಡಿನ ಹಸಿರು ಪರಿಸರದ ಒಡನಾಟದಲ್ಲಿದ್ದವರು. ಸದ್ಯ ಬೆಂಗಳೂರಿನ ಹೊರವಲಯದಲ್ಲಿ ನೆಲೆಸಿದ್ದಾರೆ. ಅತ್ಯುತ್ತಮ ವನ್ಯಜೀವಿ ಛಾಯಾಗ್ರಾಹಕರು, ಲೇಖಕರು, ಪತ್ರಕರ್ತರೂ ಆಗಿರುವ ಬ್ಯಾಕೋಡ ಬಹುಮುಖ ಪ್ರತಿಭೆ. ಬಂಗಾರ, ರಜತ, ಕಂಚಿನ ಪದಕಗಳು, ಗೌರವ ಪ್ರಶಸ್ತಿಗಳು ಸೇರಿದಂತೆ ಐವತ್ತಕ್ಕೂ ಹೆಚ್ಚು ಅಂತಾರಾಷ್ಟ್ರೀಯ ವನ್ಯಜೀವಿ ಛಾಯಾಚಿತ್ರ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ಶ್ರೀಲಂಕಾ, ಹಾಂಗ್ ಕಾಂಗ್, ಮ್ಯಾಟ್ ಲ್ಯಾಂಡ್, ...

READ MORE

Related Books