ಪ್ರನಾಳ ಶಿಶು

Author : ಎಂ.ಜೆ. ಸುಂದರ್ ರಾಮ್

Pages 117

₹ 150.00




Year of Publication: 2019
Published by: ದೀಪ್ತಿ ಪ್ರಿಂಟರ್‍ಸ್ 
Address: ಕನಕ ಕಾಂಪ್ಲೆಕ್ಸ್, ಶ್ರೀನಿವಾಸನಗರ ಬೆಂಗಳೂರು
Phone: 9901853160

Synopsys

’ಬಂಜೆತನಕ್ಕೆ ವೈಜ್ಞಾನಿಕ ಪರಿಹಾರ ಪ್ರನಾಳ ಶಿಶು’ ಕೃತಿಯು ಎಂ.ಜೆ ಸುಂದರ್ ರಾಮ್ ಅವರ ಕೃತಿ. ಕೃತಿಗೆ ಮುನ್ನುಡಿ ಬರೆದಿರುವ ಸ್ತ್ರೀರೋಗ ತಜ್ಞೆ ಡಾ. ಪದ್ಮಿನಿ ಪ್ರಸಾದ್, ‘ಸಮಾಜದ ದೃಷ್ಟಿ ಮೂಢನಂಬಿಕೆಗಳು, ವಾಸ್ತವತೆ ಇವುಗಳ ಬಗ್ಗೆ, ಸಾಮಾನ್ಯ ಜನರಿಗೆ ಅರಿವು, ಜಾಗೃತಿ, ತಿಳಿವಳಿಕೆ ಮೂಡಿಸುವುದು ಬಹಳ ಮುಖ್ಯ. ಬಂಜೆತನವು ವೈಯುಕ್ತಿಕ, ಸಾಮಾಜಿಕ ಗೌರವ ಹಾಗೂ ಕುಟುಂಬದಲ್ಲಿನ ಸಂಬಂಧಗಳನ್ನು ಹಾಳು ಮಾಡಬಲ್ಲದಾಗಿದೆ. ಆದರೆ, ಬಂಜೆತನ ಸಂಕೋಚ ಪಡುವ, ಅಥವಾ ಅವಮಾನ ಪಡುವ ವಿಷಯವಲ್ಲ. ರಾಬರ್ಟ್ ಎಡ್‌ವರ್ಡ್ಸ್ ಇಂಗ್ಲೆಂಡ್‌ನ ಜೀವಶಾಸ್ತ್ರಜ್ಞರು. ಇಂಗಳ ಮೇಲೆ ಸಂಶೋಧನೆ ಮಾಡಿ, ಹಾರ್ಮೋನಿನ ಪ್ರಭಾವ ಹೆಚ್ಚಿನ ಅಂಡಾಣು ಉತ್ಪತ್ತಿ ಹಾಗೂ ಅವುಗಳಿಂದ ಹೆಚ್ಚಿದ ಫಲವತ್ತತೆಗಳ ಬಗ್ಗೆ ಅಧ್ಯಯನ ಮಾಡಿದರು. ನಂತರದ ಅವರ ಸಂಶೋಧನೆಗಳು, ಪ್ರಾಣಿಗಳ ಭ್ರೂಣಗಳನ್ನು ಸ್ಥಳಾಂತರಿಸುವಂತೆ, ಮಾನವ ಭ್ರೂಣಗಳನ್ನೂ ಸ್ಥಳಾಂತರಿಸುವ ಪ್ರಯತ್ನ ಮಾಡಬಹುದೆಂದು ಯೋಚಿಸಿ ಮಾನವರ ಬಂಜೆತನ ನಿವಾರಣೆಯ ಕಡೆಗೆ ತಿರುಗಿತು. ಆದರೆ ಅವರು ಸ್ವತಃ ವೈದ್ಯರಾಗಿರಲಿಲ್ಲ. ಅವರಿಗೆ ಪರಿಚಿತರಾದ ಕ್ರಿಸ್ಟೋಫರ್ ಸ್ಟಪ್ ಎಂಬ ವೈದ್ಯರ ಸಹಾಯ ಪಡೆದು ಸಂಶೋಧನೆ ಮುಂದುವರೆಸಿದರು. ಸ್ತ್ರೀಯರ ಅಂಡಾಶಯದಲ್ಲಿ ಪಕ್ವವಾದ ಅಂಡಾಣುಗಳನ್ನು ಸೂಕ್ತ ಸಮಯದಲ್ಲಿ ಹೊರ ತೆಗೆದರೆ ಅವನ್ನು ಪ್ರಯೋಗಾಲಯದಲ್ಲಿ ಯಶಸ್ವಿಯಾಗಿ ಫಲಿತಗೊಳಿಸಿ ಭ್ರೂಣವನ್ನಾಗಿಸಿ ಗರ್ಭಕೋಶದಲ್ಲಿ ನಾಟಿ ಮಾಡಿ ಬಸಿರಾಗುವಂತೆ ಮಾಡಬಹುದೆಂದು ಕಂಡುಹಿಡಿದರು. ಅನೇಕರ ಕೋಪತಾಪಗಳಿಗೆ ತುತ್ತಾದರೂ, 20 ವರ್ಷ ಕಾಲ ಛಲಬಿಡದೆ ಸಂಶೋಧನೆ ಮಾಡಿ ಬಂಜೆಯರಿಗೆ ಬಸಿರಾಗುವ ಕನಸನ್ನು ನನಸು ಮಾಡಿಕೊಟ್ಟರು.

ಡಾ. ಸುಂದರ್ ರಾಮ್ ಅವರು ಜನಸಾಮಾನ್ಯರಿಗೆ ಸುಲಭವಾಗಿ ಅರ್ಥವಾಗುವಂತೆ ಸರಳ ಕನ್ನಡ ಭಾಷೆಯಲ್ಲಿ ಬಂಜೆತನದ ಬಗ್ಗೆ ಇರುವ ತಪ್ಪು ಕಲ್ಪನೆಗಳು, ಸಮಾಜದ, ಕುಟುಂಬದ ದೃಷ್ಟಿಕೋನ, ಅವುಗಳ ನಿವಾರಣೆ ಇತ್ಯಾದಿ ಕುರಿತು ತಿಳಿಸಿದ್ದಾರೆ. ಆಧುನಿಕ ವೈದ್ಯಕೀಯ ಮತ್ತು ತಂತ್ರಜ್ಞಾನದ ಬೆಳವಣಿಗೆಯಿಂದಾಗಿ ಬಂಜೆತನದಿಂದ ಬಳಲುತ್ತಿರುವ ಹಲವಾರು ಮಹಿಳೆಯರಿಗೆ  ಗರ್ಭಧಾರಣೆ ಸಾಧ್ಯವಾಗುವಂತೆ ಮಾಡಲಾಗುತ್ತಿದೆ ಎಂಬುದರ ಬಗ್ಗೆ ಸೂಕ್ತ ಮಾಹಿತಿ ಕೊಟ್ಟಿದ್ದಾರೆ.

 

 

About the Author

ಎಂ.ಜೆ. ಸುಂದರ್ ರಾಮ್

ಎಂ.ಜೆ, ಸುಂದರ್ ರಾಮ್ ಅವರು ತಮ್ಮ ಶಿಕ್ಷಕ ವೃತ್ತಿಯನ್ನು 1964ರಲ್ಲಿ ಬೆಂಗಳೂರಿನ ವೈದ್ಯಕೀಯ ಕಾಲೇಜನಲ್ಲಿ ಪ್ರಾಣಿಶಾಸ್ತ್ರ ಉಪನ್ಯಾಸಕರಾಗಿ ಪ್ರಾರಂಭಿಸಿದರು. 1969ರಲ್ಲಿ ಬೆಂಗಳೂರಿನ ಪ್ರತಿಷ್ಠಿತ ವಿಜಯ ಕಾಲೇಜನ್ನು ಸೇರಿ ಅದರ ಪ್ರಾಣಿಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿ ಪ್ರಾಚಾರ್ಯರಾಗಿ, ಉಪಪ್ರಾಂಶುಪಾಲರಾಗಿ ಸೇವೆಸಲ್ಲಿಸಿ, 2000ರಲ್ಲಿ ನಿವೃತ್ತರಾದರು. ನಿವೃತ್ತಿಯ ನಂತರ ಬೆಂಗಳೂರಿನ ಸುರಾನ ಮುಕ್ತ ಪದವಿಪೂರ್ವ ಕಾಲೇಜಿನ ಜೀವಶಾಸ್ತ್ರ ಪ್ರಾಚಾರ್ಯರಾಗಿ ಕೆಲಸ ನಿರ್ವಹಿಸಿದರು. ಬೆಂಗಳೂರಿನ ಪ್ರತಿಷ್ಠಿತ ಬೇಸ್ ವಿದ್ಯಾಸಂಸ್ಥೆಯಲ್ಲಿ ಕೆಲಕಾಲ ಜೀವಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿ ಕೆಲಸ ಮಾಡಿದರು. ಸುಂದರ್ ರಾಮ್‌ರವರು ಕನ್ನಡದಲ್ಲಿ ಜೀವಶಾಸ್ತ್ರ ಮತ್ತು ವೈದ್ಯಕೀಯ ವಿಷಯಗಳಗೆ ಸಂಬಂಧಿಸಿದ ಹಲವಾರು ಜನಪ್ರಿಯ ಪುಸ್ತಕಗಳನ್ನು ...

READ MORE

Related Books