
ಭಾರತದ ಗುಡ್ಡಗಾಡು ಪ್ರದೇಶಗಳಿಂದ ಆಯ್ದ ಜಾನಪದ ಕಥೆಗಳನ್ನು ವೆರಿಯರ್ ಎಲ್ವಿನ್ ಬರೆದ ಕೃತಿ ಇದು. ಕವಿ. ಕೆ.ಎಸ್. ನರಸಿಂಹಸ್ವಾಮಿ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಭಾರತದ ಬುಡಕಟ್ಟು ಸಮೂದಾಯಗಳಲ್ಲಿ ವೈವಿಧ್ಯಮಯವಾದ ಕಥೆಗಳಿವೆ. ನದಿ ಹುಟ್ಟಿದ್ದು ಹೇಗೆ? ಭೂಕಂಪಗಳಾಗುವುದು ಹೇಗೆ? ಜಗತ್ತು ನಿರ್ಮಾಣವಾದದ್ದು ಹೇಗೆ? ಇಂತಹ ವಿಷಯಗಳೇ ಇಲ್ಲಿಯ ಕಥೆಗಳು. ಆದರೆ, ಅವು ಬುಡಕಟ್ಟು ಜನಾಂಗೀಯ ದೃಷ್ಟಿಕೋನಗಳೇ ಆಗಿವೆ. ಆದರೆ, ಕುತೂಹಲ ಹುಟ್ಟಿಸುತ್ತವೆ. ವೈಜ್ಞಾನಿಕವಾದ ಮತ್ತು ಒಂದೇ ಒಂದು ಒಣ-ಒಣ ವಿಷಯದ ತರ ಅಲ್ಲ; ವಿಷಯ ವೈವಿಧ್ಯತೆ ಇದೆ. ಬುಡಕಟ್ಟು ಜನಾಂಗವನ್ನು ಎಲ್ವಿನ್ ಅರ್ಥ ಮಾಡಿಕೊಂಡ ರೀತಿ ಹಾಗೂ ಅವುಗಳನ್ನು ಕಥೆಯಾಗಿ ಪರಿವರ್ತಿಸಿಕೊಂಡ ಬಗೆ ಅಚ್ಚರಿ ಮೂಡಿಸುತ್ತದೆ. ಇಂತಹ ಅಚ್ಚರಿಯ ಭಾಗವಾಗಿ ಇಲ್ಲಿಯ ಕಥೆಗಳಿವೆ.

©2025 Book Brahma Private Limited.