ಪ್ರಪಾತ

Author : ಬಿ.ಆರ್. ಜಯರಾಮರಾಜೇ ಅರಸ್

Pages 214

₹ 135.00




Year of Publication: 2018
Published by: ಸಾಹಿತ್ಯ ಅಕಾಡೆಮಿ
Address: ನವದೆಹಲಿ

Synopsys

ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಅರುಣ್‌ ಜೋಷಿ ಅವರ  ’ದಿ ಲಾಸ್ಟ್‌ ಲ್ಯಾಬಿರಿಂಥ್‌’ ಕಾದಂಬರಿಯನ್ನು ಬಿ.ಆರ್‌. ಜಯರಾಮರಾಜೇ ಅರಸ್‌ ಅವರು ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ಸಮಕಾಲೀನ ವಿಷಯಗಳು  ಈ ಕಾದಂಬರಿಯ ಕಥಾ ವಸ್ತುವಾಗಿದೆ. ವಸಾಹಾತೋತ್ತರ ಯುಗದ ಯುವಕರು ಆಧ್ಯಾತ್ಮಿಕವಾಗಿ ಗಟ್ಟಿಗರಲ್ಲ. ಆಧ್ಯಾತ್ಮಿಕ ಬೇರುಗಳ ಮರುಶೋಧವೇ ಇದಕ್ಕೆ ಇರುವ ಪ್ರಮುಖ ಪರಿಹಾರ. ಸ್ಥಳೀಯ ಸಂಸ್ಕೃತಿ ಮತ್ತು ಸಂಪ್ರದಾಯ ಮನಸ್ಸಿನ ಆಳದಲ್ಲಿ ಇರುವುದರಿಂದಾಗಿ ಪಾಶ್ಚಿಮಾತ್ಯರ ಅನುಕರಣೆಯು ಎಂದಿಗೂ ಜೀವನಸುಖ ನೀಡಲು ಸಾಧ್ಯವಿಲ್ಲ  ಎಂದು ಲೇಖಕರು ಈ ಕೃತಿಯಲ್ಲಿ ವಿವರಿಸಿದ್ದಾರೆ.

About the Author

ಬಿ.ಆರ್. ಜಯರಾಮರಾಜೇ ಅರಸ್

ಐಎಎಸ್ ಅಧಿಕಾರಿ ಜಯರಾಮರಾಜೇ ಅರಸ್ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿ ಕಾರ್ಯದರ್ಶಿಯಾಗಿ ಸೇವೆಸಲ್ಲಿಸಿದವರು. ಅಲ್ಲದೆ 2010ರಲ್ಲಿ ಕರ್ನಾಟಕ ಸಾರ್ವಜನಿಕ ಭೂ ನಿಗಮ ಹಾಗೂ ಕಾರ್ಯನಿರ್ವಾಹಕ ನಿರ್ದೇಶಕರು, ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್  ವ್ಯವಸ್ಥಾಪಕ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದಾರೆ.  ...

READ MORE

Related Books