ಪ್ರಸಿದ್ಧ ಚೀನೀ ಕಥೆಗಳು

Author : ವಿಜಯಾ ಸುಬ್ಬರಾಜ್

Pages 244

₹ 230.00




Year of Publication: 2017
Published by: ಸೃಷ್ಟಿ ಪಬ್ಲಿಕೇಷನ್ಸ್
Address: ನಂ. 121, 13 ನೇ ಮುಖ್ಯರಸ್ತೆ, ಎಂ. ಸಿ. ಲೇಜೌಟ್, ವಿಜಯನಗರ, ಬೆಂಗಳೂರು 560040
Phone: ಸೃಷ್ಟಿ ಪಬ್ಲಿಕೇಷ

Synopsys

’ಪ್ರಸಿದ್ದ ಚೀನೀ ಕಥೆಗಳು’  ಅನುವಾದಿತ ಕೃತಿಯಾಗಿದ್ದು ಮೂಲ ಚೀನೀ ಕಥೆಗಾರ್ತಿಯರಾದ ಹುವಾಂಗ್ ಝಾಂಗ್ ಯಿಂಗ್, ರುಜಿಜುವಾನ್, ಝೋಂಗ್ ಪು, ಜಾಂಗ್ ಜೀ, ವ್ಯಾಂಗ್ ಆನ್ಯಿ, ಜಾಂಗ್ ಕಾಂಗ್ ಕಾಂಗ್, ಮತ್ತು ಷೆನ್ ರೋಂಗ್ ರಚಿಸಿದ ಕತೆಗಳನ್ನು ಕನ್ನಡಕ್ಕೆ ಡಾ. ವಿಜಯಾ ಸುಬ್ಬರಾಜ್ ತಂದಿದ್ದಾರೆ.

ಚೀನೀ ಕಥೆಗಳ ಕನ್ನಡ ಅನುವಾದ ಕಾಡು ಹಕ್ಕಿಗಳ ಪಯಣ (ದಿ ಫ್ಲೈಟ್ ಆಫ್ ದಿ ವೈಲ್ಡ್ ಗೂಸ್) ,ಹುಲ್ಲುಗಾವಲ ಹಾದಿಗುಂಟ (ದಿ ಪಾತ್ ತ್ರೂ ದಿ ಗ್ರಾಸ್ ಲ್ಯಾಂಡ್), ಕನಸಿನಲ್ಲಿ ಮಧುರ ತರಂಗಗಳು(ಮೆಲೊಡಿ ಇನ್ ಡ್ರೀಮ್ಸ್), ಪ್ರೀತಿಯನ್ನು ಮರೆಯಲಾಗದು (ಲವ್ ಮಸ್ಟ್ ನಾಟ್ ಬಿ ಫರ್ಟಾಟನ್), ಪುಟ್ಟ ಅಂಗಳದಲ್ಲಿನ ಬದುಕು, (ಲೈಫ್ ಇನ್ ಎ ಸ್ಟಾಲ್ ಕೋರ್ಟ್‌ಯಾರ್ಡ್‌), ವ್ಯರ್ಥವಾದ ವರ್ಷಗಳು ( ದಿ ವೇಸ್ಟೆಡ್ ಇಯರ್‍ಸ್), ನಡು ವಯಸ್ಸಿನಲ್ಲಿ( ಅಟ್ ಮಿಡಲ್ ಏಜ್ ) ಕತೆಗಳು ಈ ಕೃತಿಯಲ್ಲಿವೆ.

ಇಲ್ಲಿರುವ ಚೀನೀ ಕಥೆಗಾರ್ತಿಯರು ಇಪ್ಪತ್ತನೇ ಶತಮಾನದ ಇಪ್ಪತ್ತರ ದಶಕದಿಂದ ಐವತ್ತರ ದಶಕದವರೆಗಿನ ಕಾಲಘಟ್ಟದಲ್ಲಿ ಹುಟ್ಟಿದವರಾಗಿದ್ದು, ಸಾಂಸ್ಕೃತಿಕ ಕ್ರಾಂತಿಯ ಭೀಕರ ಪರಿಣಾಮಗಳನ್ನು ಕಂಡುಂಡವರಾಗಿದ್ದರು. ಆದ್ದರಿಂದ ತಮ್ಮ ಅನುಭವಗಳ ಹಿನ್ನೆಲೆಯಾಗಿಸಿಕೊಂಡು, ಕಥಾ ಸಂದರ್ಭಗಳಿಗೆ ಕತೆಯನ್ನು ಬಿತ್ತರಿಸಿದ್ದಾರೆ.

About the Author

ವಿಜಯಾ ಸುಬ್ಬರಾಜ್
(20 April 1947)

ವಿಜಯಾ ಸುಬ್ಬರಾಜ್ ಅವರು ಬೆಂಗಳೂರಿನಲ್ಲಿ 1947 ಏಪ್ರಿಲ್‌ 20ರಂದು ಜನಿಸಿದರು. ತಾಯಿ ಲಕ್ಷ್ಮಿ, ತಂದೆ ಸೀತಾರಾಂ. ಇಂಗ್ಲಿಷ್‌ ಮತ್ತು ಕನ್ನಡ ಭಾಷೆಯಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ.  ಕನ್ನಡ ಸಾಹಿತ್ಯ ಕ್ಷೇತ್ರದ ಕೃಷಿಯಲ್ಲಿ ತೊಡಗಿಕೊಂಡಿರುವ ಇವರು ಬಿಯುಸಿಟಿಎ ನ ಉಪಾಧ್ಯಕ್ಷೆ, ಕನ್ನಡ ನುಡಿ ನಿಯತಕಾಲಿಕೆಯ ಸಂಪಾದಕಿ, ನಂಜನಗೂಡು ತಿರುಮಲಾಂಬ ಪ್ರಶಸ್ತಿ ಆಯ್ಕೆ ಸಮಿತಿಯ ಸದಸ್ಯರಾಗಿದ್ದಾರೆ. ಕರ್ನಾಟಕ ಲೇಖಕಿಯರ ಸಂಘದ ಉಪಾಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ.  ವಿಜಯಾ ಅವರಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಪುರಸ್ಕಾರ, ಕನ್ನಡ ಸಾಹಿತ್ಯ ಪರಿಷತ್ತಿನ ನೀಲಗಂಗಾ ಪ್ರಶಸ್ತಿ, ಅತ್ತಿಮಬ್ಬೆ ಪ್ರಶಸ್ತಿ, ...

READ MORE

Related Books