ಪ್ರತಿ-ಕ್ರಿಯೆ

Author : ಟಿ.ಎನ್. ಷಣ್ಮುಖ

Pages 198

₹ 170.00




Year of Publication: 2022
Published by: ಕಾವ್ಯಕಲಾ ಪ್ರಕಾಶನ
Address: : # 12873, 7ನೇ ಕ್ರಾಸ್, ಚಂದ್ರ‌ ಲೇಔಟ್ ವಿಜಯನಗರ, ಬೆಂಗಳೂರು-560040
Phone: 8694912860

Synopsys

ಲೇಖಕ ಟಿ.ಎನ್. ಷಣ್ಮುಖ ಅವರ ಲೇಖನಗಳ ಸಂಗ್ರಹ ಕೃತಿ-ಪ್ರತಿ-ಕ್ರಿಯೆ. ಪ್ರಚಲಿತ ಸಾಮಾಜಿಕ-ರಾಜಕೀಯ ವಿದ್ಯಮಾನಗಳ ಹಿನ್ನೆಲೆಯಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸಿದ ಬರಹಗಳನ್ನು ಇಲ್ಲಿ ಸಂಕಲಿಸಲಾಗಿದೆ. ಈ ಬರಹಗಳು, ಸಾಮಾಜಿಕ-ರಾಜಕೀಯ-ಶೈಕ್ಷಣಿಕ ಹೀಗೆ ವಿವಿಧ ವಲಯದ ವಿದ್ಯಮಾನಗಳನ್ನು ಚಿತ್ರಿಸುತ್ತದೆ ಮಾತ್ರವಲ್ಲ; ಅವುಗಳಿಗೆ ಓದುಗರ ಪ್ರತಿಕ್ರಿಯೆಗಳು, ಲೇಖಕರ ಸ್ಪಂದನೆ, ಸೂಕ್ಷ್ಮ ಅಭಿವ್ಯಕ್ತಿಯ ಬಿಂಬಗಳಾಗಿ, ವ್ಯಕ್ತಿಗತ ಹಾಗೂ ಸಾಮಾಜಿಕ ಹೊಣೆಗಾರಿಕೆಯನ್ನು ಈ ಬರಹಗಳು ನಿರ್ವಹಿಸುತ್ತವೆ.

About the Author

ಟಿ.ಎನ್. ಷಣ್ಮುಖ
(29 April 1960)

ಲೇಖಕ, ಪತ್ರಕರ್ತ ಟಿ.ಎನ್. ಷಣ್ಮುಖ ಅವರು ಹುಟ್ಟಿದ್ದು 1960 ಏಪ್ರಿಲ್ 29ರಂದು. ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆಯವರಾದ ಷಣ್ಮುಖ ಅವರು ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಲಂಕೇಶ್ ಪತ್ರಿಕೆ, ಗೌರಿ ಲಂಕೇಶ್, ಅಗ್ನಿ ವಾರ ಪತ್ರಿಕೆಯಲ್ಲಿ ವರದಿಗಾರರಾಗಿ ಕೆಲಸ ಮಾಡಿರುವ ಇವರು ಪ್ರಜಾಕೂಗು ಎಂಬ ವಾರ ಪತ್ರಿಕೆಯನ್ನು ಒಂದು ದಶಕಕ್ಕೂ ಹೆಚ್ಚು ಕಾಲ ಹೊರತಂದರು. ಎಂಬತ್ತರ ದಶಕದಲ್ಲಿ ಚಟುವಟಿಕೆಯಿಂದಿದ್ದ ಪ್ರಗತಿ ರಂಗ ಸಾಂಸ್ಕೃತಿಕ ಮತ್ತು ರಾಜಕೀಯ ರಂಗದ ಸಂಚಾಲಕನಾಗಿ ಕೆಲಸ ಮಾಡಿದ್ದಾರೆ.  ಷಣ್ಮುಖ ಅವರ ಪ್ರಮುಖ ಕೃತಿಗಳೆಂದರೆ ನೆತ್ತರಿಗೆ ಬೆಲೆಯಿಲ್ಲ, ಒಡಲಾಳ, ಕಡಲತೀರದ ಕೋಮಲ ಹುಡುಗಿ, ಮುಖ ಮತ್ತು ಮುಖವಾಡಗಳು (ಲೇಖನಗಳ ...

READ MORE

Related Books