ಪ್ರತಿಬಿಂಬ

Author : ವಿನುತಾ ಹಂಚಿನಮನಿ

Pages 184

₹ 160.00




Year of Publication: 2021
Published by: ದಾಕ್ಷಾಯಣಿ ಪ್ರಕಾಶನ
Address:  #418/1, ವೀಣೆ ಶಾಮಣ್ಣ ರಸ್ತೆ, ಅಗ್ರಹಾರ, ಮೈಸೂರು-570004
Phone: 9740129274

Synopsys

ಪ್ರತಿಬಿಂಬ  ವಿನುತಾ ಹಂಚಿನಮನಿ ಅವರ ಕೃತಿಯಾಗಿದೆ. ಜೀವನ ಸಂಜೆಯಲ್ಲಿ, ನಡೆದು ಬಂದ ದಾರಿಯನ್ನೊಮ್ಮೆ ಅವಲೋಕಿಸಿದರೆ ಕೆಲವೊಮ್ಮೆ ಪಶ್ಚಾತ್ತಾಪ, ಕೆಲವೊಮ್ಮೆ ಆಶ್ಚರ್ಯ ಮತ್ತೆ ಕೆಲವು ಸಲ ಹೆಮ್ಮೆ ಪಡುವುದು ನಿಜ. ನನ್ನ ಜೀವನದ ಪ್ರತಿಬಿಂಬವನ್ನು ಪ್ರತಿಫಲಿಸುವ ಕನ್ನಡಿ ಈ ಪುಸ್ತಕ. ಎಲ್ಲರಿಗೂ ಅವರವರದೇ ಬಯಕೆಗಳು ಇರುವಂತೆ ನನಗೂ ಹಲವಾರು ಸಣ್ಣ ದೊಡ್ಡ ಗುರಿಗಳಿದ್ದವು. ಸಾಧಿಸುವ ಮಾರ್ಗ ಮಾತ್ರ ನಿಶ್ಚಿತ ಹೋರಾಟದ್ದು ಎಂಬ ಅರಿವಿತ್ತು. ಬಯಸಿದ್ದನ್ನೆಲ್ಲ ಪಡೆದೆ ಅಂತ ಆಗಲಿಲ್ಲ. ಬಯಸದೇ ಇರುವದು ಕೂಡ ಬದುಕು ನನಗೆ ಕೊಟ್ಟಿದೆ, ಅದಕ್ಕಾಗಿ ಕೃತಜ್ಞಳು. ಕಳೆದುಕೊಂಡದ್ದಕ್ಕಿಂತ ಪಡೆದದ್ದೇ ಹೆಚ್ಚು. ಎಲ್ಲರಂತೆ ನನ್ನ ಜೀವನವಿರಲಿಲ್ಲ. ಹುಟ್ಟು, ಬಾಲ್ಯ, ಕಲಿಯುವಿಕೆ, ಯೌವನ, ವಿವಾಹ, ವೃತ್ತಿ ಇವುಗಳಲ್ಲಿ ಒಂದು ರೀತಿಯ ಭಿನ್ನವಾದ ವಿಶಿಷ್ಟತೆ ಇದೆ. ಜೀವನದ ವಿವಿಧ ಘಟ್ಟಗಳು ತಮ್ಮದೇ ಆದ ವಿಶೇಷ ಪರಿಚಯ ಮಾಡಿಸಿದವು ನನಗೆ. ಸುಖದ ಬಾಗಿಲು ತೆರೆದಾಗ ಕಷ್ಟವನ್ನು ಮರೆತಿದ್ದೆ, ದುಃಖ ಆವರಿಸಿದಾಗ ಸುಖವನ್ನು ನೆನಪಿನಲ್ಲಿಟ್ಟುಕೊಂಡಿದ್ದೆ. ಬದುಕು ಪ್ರತಿದ್ವನಿ ಕೂಡ. ನಾವು ಬಿತ್ತಿದ್ದನ್ನೇ ನಾವು ಬೆಳೆದುಕೊಳ್ಳುವಂತೆ ನಾವು ಸಮಾಜಕ್ಕೆ, ಜಗತ್ತಿಗೆ ಕೊಟ್ಟಿದ್ದು ನಮಗೆ ತಿರುಗಿ ಸಿಗುತ್ತದೆ. ನಾವು ಒಳ್ಳೆಯವರಾದರೆ ಜಗತ್ತು ಒಳ್ಳೆಯದು ಅನ್ನುವ ಮಾತು ಸುಳ್ಳಲ್ಲ. ಒಗೆದ ಕಲ್ಲು ಅಲೆ ಸೃಷ್ಟಿಸುವಂತೆ, ನಡೆದ ದಾರಿಯಲ್ಲಿ ಹೆಜ್ಜೆ ಗುರುತು ಮೂಡಿಸಿದಂತೆ ಬದುಕಿನ ಗುರುತು ಅದರ ಪ್ರತಿಬಿಂಬ  ಎನ್ನುತ್ತಾರೆ ಲೇಖಕಿ ವಿನುತಾ ಹಂಚಿನಮನಿ. 

About the Author

ವಿನುತಾ ಹಂಚಿನಮನಿ

ಲೇಖಕಿ ವಿನುತಾ ಹಂಚಿನಮನಿ ಅವರು ಹದಿನೈದು ಕೃತಿಗಳನ್ನು ಹೊರತಂದಿದ್ದಾರೆ. ಆರು ಕವನ ಸಂಕಲನ, ನಾಲ್ಕು ಪ್ರಬಂಧಗಳು, ಎರಡು ಕಥಾಸಂಕಲನ, ಎರಡು ಕಾದಂಬರಿ, ಆತ್ಮಕಥನ ಮತ್ತು ನಾಟಕಗುಚ್ಛ. ಕೃತಿಗಳು: ಅಲೆಗಳು, ತುಂತುರು, ಸಂಗಾತಿ ಮೈರಾ, 'ನನ್ನ ಗ್ರಹಿಕೆಯಲ್ಲಿ ಮಹಾಭಾರತ' ಎಂಬ ಕವನಸಂಕಲನಗಳು. ವನಿತೆಯರ ಜೀವನ ಉಯ್ಯಾಲೆ 2019 ರಲ್ಲಿ ಚೇತನ ಪ್ರಕಾಶನ ದಿಂದ ಪ್ರಕಟಿಸಲ್ಪಟ್ಟ ಪ್ರಬಂಧ ಸಂಕಲನ. ಆಕಾಶವಾಣಿ ಕೇಂದ್ರ, ಧಾರವಾಡದಿಂದ ಬಿತ್ತರಿಸಲ್ಪಟ್ಟ ಭಾಷಣಗಳನ್ನಿಳಗೊಂಡ ಲೇಖನಗಳ ಗುಚ್ಛ. ಸಮಾಜದಲ್ಲಿ ಮಹಿಳೆಯ ಸ್ಥಾನ ಮಾನ, ಉದ್ಯೋಗಸ್ಥ ಮಹಿಳೆಯ ಹೋರಾಟಗಳು, ಕೃಷಿಯಲ್ಲಿ, ಆಧ್ಯಾತ್ಮದಲ್ಲಿ ಮಹಿಳೆ, ತಾಯಿಯಾಗಿ ಮಹಿಳೆ, ಸಾಹಿತ್ಯದಲ್ಲಿ ಮಹಿಳೆ ಹೀಗೆ ಮಹಿಳೆಯರಿಗೆ ಸಂಬಂಧಿಸಿದ ವಿಷಯಗಳ ಕುರಿತು ...

READ MORE

Related Books