ಪ್ರತಿದಿನ ಪರಿಸರ ದಿನ

Author : ನಾಗೇಶ ಹೆಗಡೆ

Pages 104

₹ 63.00




Year of Publication: 2011
Published by: ಅಂಕಿತ ಪುಸ್ತಕ
Phone: 0802661 7100

Synopsys

'ಪ್ರತಿದಿನ ಪರಿಸರ ದಿನ' ನಾಗೇಶ ಹೆಗಡೆ ಅವರ ಕೃತಿಯಾಗಿದೆ. ಸರಕು ಸಂಸ್ಕೃತಿಯ ಆಗರವಾಗಿರುವ ನಗರಗಳು ತಮ್ಮ ತಿಪ್ಪೆಯನ್ನು ಗ್ರಾಮಪರಿಸರಕ್ಕೆ ಸುರಿಯದಂತೆ ತಡೆಯಬಲ್ಲವರು ಬೇಕಾಗಿದ್ದಾರೆ. ಅರಣ್ಯ, ಕಡಲತೀರ, ಕೆರೆತೊರೆಗಳ ಜೀವಿವೈವಿಧ್ಯಗಳನ್ನು ಸಂರಕ್ಷಿಸುವವರು ಬೇಕಾಗಿದ್ದಾರೆ. ಅಂಥ ಹೊಸ ಪೀಳಿಗೆಯೊಂದನ್ನು ಸೃಷ್ಟಿಸಬೇಕಾದ ತುರ್ತಿನಲ್ಲಿರುವ ನಾವು ವರ್ಷಕ್ಕೆ ಕೇವಲ ಒಂದೇ ದಿನವನ್ನು ‘ಪರಿಸರ ದಿನ’ವನ್ನಾಗಿ ಆಚರಿಸಿದರೆ ಸಾಕೆ? ವಿಜ್ಞಾನ ಮತ್ತು ಪರಿಸರ ಸಂರಕ್ಷಣೆಗೆ ಸಂಬಂಧಿಸಿದಂತೆ ‘ಇರುವುದೊಂದೇ ಭೂಮಿ’, ‘ಮುಷ್ಟಿಯಲ್ಲಿ ಮಿಲೆನಿಯಂ’, ‘ಸುರಿಹೊಂಡ ಭರತಖಂಡ’, ‘ಟಿಪ್ಪೂ ಖಡ್ಗದ ನ್ಯಾನೊ ಕಾರ್ಬನ್’, ‘ಅಭಿವೃದ್ಧಿಯ ಅಂಧಯುಗ’, ‘ಕೊಪೆನ್‌ಹೇಗನ್ ಋತುಸಂಹಾರ’ ಮುಂತಾದ ಗ್ರಂಥಗಳನ್ನು ರಚಿಸಿದ ಇವರು ವಿಜ್ಞಾನದ ಕ್ಲಿಷ್ಟ ವಿಷಯಗಳನ್ನು ಪರಿಸರದ ಸಂಕೀರ್ಣ ಸಂಬಂಧಗಳನ್ನೂ ಮನಮುಟ್ಟುವ ಶೈಲಿಯಲ್ಲಿ ಬಿಡಿಸಿಡುತ್ತಾರೆ.

About the Author

ನಾಗೇಶ ಹೆಗಡೆ
(14 February 1948)

ಕನ್ನಡದ ಪ್ರಮುಖ ಲೇಖಕರಲ್ಲೊಬ್ಬರಾದ ನಾಗೇಶ ಹೆಗಡೆ ಅವರ ಹುಟ್ಟೂರು ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪುರ ತಾಲೂಕಿನ ಬಕ್ಕಮನೆ. ಮಾಧ್ಯಮಿಕ ಶಿಕ್ಷಣವನ್ನು ಯಡಳ್ಳಿಯ ವಿದ್ಯೋದಯ ಹೈಸ್ಕೂಲಿನಲ್ಲಿ ಪೂರೈಸಿದ ಅವರು ಶಿರಸಿಯ ಮೋಟಿನಸರ ಸ್ಮಾರಕ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ಭೂವಿಜ್ಞಾನದಲ್ಲಿ ಬಿಎಸ್‍ಸಿ ಮುಗಿಸಿದರು. ಖರಗಪುರ ಐಐಟಿಯಲ್ಲಿ ಆನ್ವಯಿಕ ಭೂವಿಜ್ಞಾನದಲ್ಲಿ ಎಂಎಸ್‍ಸಿ (ಟೆಕ್) ಮಾಡಿದರು. ದೆಹಲಿಯ ಜವಾಹರಲಾಲ ನೆಹರು ವಿಶ್ವವಿದ್ಯಾಲಯದಲ್ಲಿ ಪರಿಸರ ವಿಜ್ಞಾನದಲ್ಲಿ ಎಂ.ಫಿಲ್ ಮಾಡಿದರು. ಶಿಕ್ಷಕ, ಪರಿಸರವಾದಿ ಹಾಗೂ ಪತ್ರಕರ್ತರಾಗಿ ವಿಭಿನ್ನ ಪಾತ್ರಗಳನ್ನು ವಹಿಸುತ್ತಿರುವ ನಾಗೇಶ ಹೆಗಡೆ ಸುಧಾ ವಾರಪತ್ರಿಕೆಯ ಸಹಾಯಕ ಸಂಪಾದಕರಾಗಿದ್ದರು. ಕನ್ನಡದಲ್ಲಿ ವಿಜ್ಞಾನ-ತಂತ್ರಜ್ಞಾನದ ಲೇಖನಗಳನ್ನು ಬರೆದಿರುವ ...

READ MORE

Related Books