ಪ್ರವಾದಿ ಮತ್ತು ಹದೀಸ್

Author : ಆಗುಂಬೆ ಎಸ್. ನಟರಾಜ್‌

Pages 348

₹ 250.00




Year of Publication: 2018
Published by: ಆಗುಂಬೆ ಎಸ್. ನಟರಾಜ್
Address: #947, 3ನೇ ಮುಖ್ಯರಸ್ತೆ, ವಿಜಯನಗರ, ಬೆಂಗಳೂರು- 560040
Phone: 9481423004

Synopsys

‘ಪ್ರವಾದಿ ಮತ್ತು ಹದೀಸ್’ ಲೇಖಕ ಆಗುಂಬೆ ಎಸ್. ನಟರಾಜ್ ಅವರ ಕೃತಿ. ಈ ಪುಸ್ತಕದಲ್ಲಿ ಪ್ರವಾದಿ ಅವರ ಜೀವನ ಚರಿತ್ರೆಯಲ್ಲಿಯ ಕೆಲವು ಪ್ರಮುಖ ಅಂಶಗಳನ್ನು ತಿಳಿಸಲಾಗಿದೆ. ಪವಿತ್ರ ಖುರಾನ್ ನಷ್ಟೆ ಪವಿತ್ರತೆಯನ್ನು ಮುಸ್ಲಿಮರು ಅಲ್ ಬುಖಾರಿಯಿಂದ ರಚಿಸಲಾದ ಹದೀಸ್ ನ ಬಗ್ಗೆ ಇರಿಸಿಕೊಂಡಿದ್ದು, ಅದರಲ್ಲಿಯ ಕೆಲವು ಮಹತ್ವದ ವಿಷಯಗಳನ್ನು ಈ ಕೃತಿಯಲ್ಲಿ ಅಳವಡಿಸಲಾಗಿದೆ.

About the Author

ಆಗುಂಬೆ ಎಸ್. ನಟರಾಜ್‌
(20 November 1939)

ಲೇಖಕ ನಟರಾಜ್, 1939 ನವೆಂಬರ್‌ 20 ರಂದು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ ಹುಟ್ಟಿದರು. ತಂದೆ ಎ. ಎಸ್. ಭಟ್, ತಾಯಿ ಲಕ್ಷ್ಮಮ್ಮ. ಕಾಲೇಜು ದಿನಗಳಿಂದಲೂ ಸಾಹಿತ್ಯದ ಬಗ್ಗೆ ಒಲವಿದ್ದು, ನಿವೃತ್ತಿಯ ನಂತರ ಈಗ ಪೂರ್ಣ ಪ್ರಮಾಣದ ಬರಹಗಾರರು. ಸದಾ ಒಂದಿಲ್ಲೊಂದು ಕಡೆ ಪ್ರವಾಸ ಅಥವಾ ಬಿಡುವಿನ ವೇಳೆಯಲ್ಲಿ ಸಾಹಿತ್ಯ ರಚನೆಯಲ್ಲಿ ತೊಡಗುತ್ತಾರೆ. ಅವರ ಪ್ರವಾಸಾನುಭವದ ಲೇಖನಗಳು ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ‘ಬಾತುಕೋಳಿ’ ಮತ್ತು ‘ಆತಂಕ’ ಎಂಬ ಎರಡು ಕಾದಂಬರಿಗಳು. ‘ಚಕ್ಕಂದ’ ಎಂಬ ಹನಿಗವನ ಸಂಕಲನ, ‘ರಸನಿಮಿಷ’ ಎಂಬ ಹಾಸ್ಯಕಥೆಗಳ ಸಂಗ್ರಹ. ‘ರಸ ವೈಚಾರಿಕತೆ’ ಎಂಬ ವೈಚಾರಿಕ ...

READ MORE

Related Books